News Karnataka Kannada
Tuesday, April 30 2024
ಹುಬ್ಬಳ್ಳಿ-ಧಾರವಾಡ

ಮಾ.20 ರಂದು ಯುವ ಕ್ರಾಂತಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗಿ : ಸಲೀಂ ಅಹಮ್ಮದ್

Rahul Gandhi to attend Youth Revolution rally on March 20: Salim Ahmed
Photo Credit : News Kannada

ಹುಬ್ಬಳ್ಳಿ : ಮಾ. 20 ರಂದು ರಾಹುಲ್ ಗಾಂಧಿ ಬೆಳಗಾವಿಗೆ ಬರಲಿದ್ದಾರೆ. 11 ಗಂಟೆಗೆ ಬೃಹತ್ ಯುವ ಕ್ರಾಂತಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ.ರಾಜ್ಯದ ಯುವ ಜನತೆಗೆ ಸಂದೇಶ ಕೊಡಲು ಬರಲಿದ್ದಾರೆ. ಭಾರತ ಜೋಡೋ ಯಾತ್ರೆ ವೇಳೆ ಯುಕವರು ಅನ್ಯಾಯದ ಬಗ್ಗೆ ರಾಹುಲ್ ಗಾಂಧಿಗೆ ತಿಳಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸಲೀಂ ಅಹಮ್ಮದ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾವೇಶದಲ್ಲಿ ಸುರ್ಜೇವಾಲಾ,ವೇಣುಗೋಪಾಲ, ಸಿದ್ದರಾಮಯ್ಯ ಡಿಕೆಶಿವಕುಮಾರ್ ಪರಮೇಶ್ವರ,ಮುನಿಯಪ್ಪ,ಎಮ್ ಬಿ ಪಾಟೀಲ್ ಭಾಗಿಯಾಗಲಿದ್ದಾರೆ. ಸುಮಾರು 2 ಲಕ್ಷ ಜನ ಕಾರ್ಯಕ್ರಮದಲ್ಲಿ ಸೇರಲಿದ್ದಾರೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ರಾಜ್ಯದ 224 ಕ್ಷೇತ್ರಗಳಲ್ಲಿ ಸರ್ವೆ ಆಗಿದೆ. ಮೂರು ಸುತ್ತಿನ ಸ್ಕ್ರೀನಿಂಗ್ ಕಮೀಟಿ ಸಭೆ ಆಗಿದೆ. ಮೊದಲು ಕಾಂಗ್ರೆಸ್ ಪಟ್ಟಿ
ಇಂಟರ್ನಲ್ ಸರ್ವೆ ಪ್ರಕಾರ 140 ಸೀಟ್ ಗಿಂತಲೂ ಅಧಿಕ ಮುಂದಿದೆ.ನಮ್ಮ ನಾಯಕರು 150 ಸೀಟ್ ಗೆಲ್ಲಲು ಸೂಚನೆ ನೀಡಿದ್ದಾರೆ.

ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ಅಲ್ಲ ಕ್ಷಮೆ ಯಾತ್ರೆ ಮಾಡಬೇಕಿತ್ತು ಜನ‌ ಬದಲಾವಣೆ ಬಯಸ್ತೀದಾರೆ. ಧಾರವಾಡ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಲ್ಲಿ ಗೆಲ್ತೀವಿ. ಬೆಲೆ ಏರಿಕೆ,ಬ್ರಷ್ಟಾಚಾರ ಮಾಡಿದ್ದೀವಿ ಎಂದು ಕ್ಷಮೇ ಯಾತ್ರೆ ಮಾಡಬೇಕಿತ್ತು. ಆದ್ರೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಾಡ್ತಿರೋದು ದುರ್ದೈವ ಎಂದರು.

ಭಾರತ ಜನತಾ ಪಾರ್ಟಿ ಅಲ್ಲಾ ಭ್ರಷ್ಟ ಜನತಾಪಾರ್ಟಿ : ಸಲೀಂ ಅಹಮ್ಮದ್
ತುಂಬಾ ಹಳೆ ಜನರು ಭಾರತ ಜನತಾ ಪಾರ್ಟಿ ಬಿಟ್ಟು ಕಾಂಗ್ರೆಸ್ ಯಾಕೆ ಸೇರಿಕೊಳ್ಳುತ್ತೀದ್ದಾರೆ ಅಂದ್ರೆ ಅವರಿಗೆ ನಾಚಿಕೆ ಆಗಿದೆ ಬಿಜೆಪಿ ಯಲ್ಲಿ ಇರಲು ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮ್ಮದ್ ಹೇಳಿದರು.

ಕಾಂಗ್ರೆಸ್ ಗೆ ಬಿಜೆಪಿ , ಜೆಡಿಎಸ್ ಬರುತ್ತಾರೆ ಯಾಕೆ ಅಂದ್ರೆ ಅವರಿಗೆ ಅಸಹ್ಯ ಯಾಗಿದೆ. ಈ ಭ್ರಷ್ಟಾಚಾರ ನೋಡಿ ನೊಂದು ಕಾಂಗ್ರೆಸ್ ಪಕ್ಷ ಕ್ಕೆ ಬರುತ್ತಾರೆ. ಪ್ರತಿಯೊಂದರಲ್ಲಿ ಕಮೀಷನ್ ನೋಡಿ ಬೇಜಾರ ಆಗಿ ಬಿಟ್ಟು ಇದು ಭಾರತ ಜನತಾ ಪಾರ್ಟಿ ಅಲ್ಲಾ ಭ್ರಷ್ಟ ಜನತಾಪಾರ್ಟಿ ಆಗಿದೆ ಎಂದು ಬರತ್ತಾ ಇದ್ದಾರೆ ಎಂದರು.

ರಾಜ್ಯದಲ್ಲಿ ರೌಡಿಗಳ ಸರ್ಕಾರ ಇದೆ : ಸಲೀಂ ಅಹಮ್ಮದ್ ಆರೋಪ
ರಾಜ್ಯದಲ್ಲಿ ರೌಡಿಗಳ ಸರ್ಕಾರ ಇದೆ. ಇವರಿಗೆ ಮತ ಕೇಳೋಕೆ ನೈತಿಕ ಹಕ್ಕಿಲ್ಲ. ಪ್ರಧಾನಿ ಫೈಟ್ ರವಿಗೆ ಕೈ ಮುಗದಿರೋದು ದೊಡ್ಡ ದುರ್ದೈವ.‌ಇದರ ಬಗ್ಗೆ ಚರ್ಚೆ ಯಾಗಬೇಕು ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸಲೀಂ ಅಹಮ್ಮದ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರೌಡಿಗಳು,ದಲ್ಲಾಳಿಗಳ ಸರ್ಕಾರ. 23 ಸಾವಿರ ರೌಡಿಗಳಿಗೆ ಬಿಜೆಪಿ ಕ್ಲೀನ್ ಚಿಟ್ ಕೊಟ್ಟಿದೆ. 4 ವರ್ಷದಲ್ಲಿ 23 ಸಾವಿರ ರೌಡಿ ಶೀಟರ್ ಗೆ ಕ್ಲೀನ್ ಚೀಟ್ ಕೊಟ್ಟಿದ್ದಾರೆ. ರೌಡಿಗಳನ್ನ ಇಟ್ಕೊಂಡು ಚುನಾವಣೆ ಮಾಡೋಕೆ ಹೊರಟಿದ್ದಾರೆ. ಲೂಟಿ ಕೋರರ ಭ್ರಷ್ಟ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ರೌಡಿಗೆ ಕೃ ಮುಗಿತ್ತಾರೆ ಇದು ರಾಷ್ಟ್ರಕ್ಕೆ ದುರ್ದೃವ. 40% ಟೀಕೆ ಮಾಡಿದ್ದಾಗ ಸಾಬೀತು ನ್ನು ಪಡಿಸಲಾಯಿತ್ತು. ಒಬ್ಬ ಎಮ್ ಎಲ್ ಏ ಮನೆಯಲ್ಲಿ ೮ ಕೋಟಿ ಹಣ ಹಿಡಿದಿದ್ದಾರೆ. ನಾಚಿಕೆ ಆಗಬೇಕು ಅವರಿಗೆ. ಯಾಕೆ ಅರೆಸ್ಟ್ ಮಾಡಲಿಲ್ಲಾ. ಅದಕ್ಕೆ ಈ ಸರ್ಕಾರ ಅಯೋಗ್ಯ ಸರ್ಕಾರ ಅಂತ ಹೇಳಬೇಕಾಗುತ್ತದೆ. ರಾಜ್ಯದಲ್ಲಿ ಭ್ರಷ್ಟಾಚಾರ ವಿಲ್ಲದ ಸರ್ಕಾರ ಬರಬೇಕು. ಜನ ಬದಲಾವಣೆ ಬಯಸುತ್ತಾ ಇದ್ದಾರೆ. ಭಾರತೀಯ ಜನತಾ ಪಾರ್ಟಿ ಹಿರಿಯರ ಅಂದ್ರೆ ಕಸದ ಬುಟ್ಟಿ ಸಮಾನ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು