News Karnataka Kannada
Sunday, May 12 2024
ಹುಬ್ಬಳ್ಳಿ-ಧಾರವಾಡ

ಈ ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಆಪರೇಶನ್ ಕಮಲ‌ ಆಕ್ಟಿವ್ ಆಗಿದೆ : ಲಾಡ್ ವ್ಯಂಗ್ಯ

ಕಾರ್ಮಿಕ‌ ಸಚಿವ ಸಂತೋಷ ಲಾಡ್
Photo Credit : News Kannada

ಹುಬ್ಬಳ್ಳಿ: ಹೊರದೇಶಕ್ಕೆ ಶಾಸಕರನ್ನ ಕರೆದೊಯ್ದರೆ ತಪ್ಪೇನಿದೆ ?ಯಾವ್ಯಾವ ಶಾಸಕರು ಹೋಗುತ್ತಿದ್ದಾರೆ ನನಗೆ ಮಾಹಿತಿ ಇಲ್ಲ.ಸತೀಶ ಜಾರಕಿಹೊಳಿಯವರು ಕೆಲವು ಶಾಸಕರನ್ನ ಸ್ನೇಹಪರವಾಗಿ ಕರೆದುಕೊಂಡು ಹೋಗುತ್ತಿದ್ದಾರೆ.ಈ ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಆಪರೇಶನ್ ಕಮಲ‌ ಆಕ್ಟಿವ್ ಆಗಿದೆ ಎಂದು ಕಾರ್ಮಿಕ‌ ಸಚಿವ ಸಂತೋಷ ಲಾಡ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಸಚಿವ ಸತೀಶ ಜಾರಕಿಹೊಳಿ ಶಾಸಕರೊಂದಿಗೆ ವಿದೇಶ ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದರಲ್ಲಿ ರಾಜಕೀಯ ವಿಶ್ಲೇಷಣ ಮಾಡೋದು ಬಣಗಳನ್ನ ಸೃಷ್ಠಿ ಮಾಡೋದು ಸರಿಯಲ್ಲ.ನಿನ್ನೆ ಸಿಎಂ‌ಸಿದ್ಧರಾಮಯ್ಯ ಅವರು ಪಕ್ಷದ ಹಿತದೃಷ್ಠಿಯಿಂದ ಹಾಗೂ ಸರ್ಕಾರದ ಸಣ್ಣಪುಟ್ಟ ಲೋಪ‌ ಸರಿಪಡಿಸಲು ಸಭೆ ನಡೆಸಿದ್ದಾರೆ. ಆ ಸಭೆಗೆ ಡಿಕೆಶಿಗೆ ಆಹ್ವಾನ ಇಲ್ಲದಿರುವುದು ನನಗೆ ಗೊತ್ತಿಲ್ಲ. ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲಿ ಏನಾಗಿದೆ ಇದೆಲ್ಲ ಗೊತ್ತಿರೋ ವಿಚಾರ ಎಂದರು.

ಬಿಜೆಪಿಯವರು ಕಳೆದ ಹತ್ತು ವರ್ಷಗಳಿಂದ ಸರ್ಕಾರ ಬೀಳಿಸುವ ಸರ್ಕಾರ ರಚನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಠಿಯಲ್ಲಿ ನಾವು ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಇಂದು ಸಹ ಪಕ್ಷದ ಕಾರ್ಯಕರ್ತರ ಸಭೆ ನಡೆಸಲಾಗುತ್ತಿದೆ.

ಈ‌ ಬಾರಿ 20 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. 70 ವರ್ಷ ಕಾಂಗ್ರೆಸ್ ಏನೂ ಮಾಡಿಲ್ಲ‌ ಅಂತಾ ಬಿಜೆಪಿಯವರು ಪ್ರಚಾರ ತೆಗೆದುಕೊಂಡ್ರು. ನಾವು 70 ವರ್ಷ ಮಾಡಿದ ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಗಳಿಗೆ ಇವರಿಂದ ಬಣ್ಣ ಬಳಿಯಲು ಸಾಧ್ಯವಾಗಿಲ್ಲ. ಕಳೆದ ಹತ್ತು ವರ್ಷಗಳಿಂದ ಪ್ರಚಾರ ತೆಗೆದುಕೊಳ್ಳೋದು ಬಿಟ್ಟು ಬೇರೇನೂ ಮಾಡಿಲ್ಲ. ಈಗ ಅಭಿವೃದ್ದಿ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ. ಈಗ ಜನರು ಕಾಂಗ್ರೆಸ್ ಒಳ್ಳೇದು‌ ಅಂತ ಅರ್ಥ ಮಾಡಿಕೊಂಡಿದ್ದಾರೆ.

2013 ರಿಂದ 2018 ಮತ್ತು ಈ ಬಾರಿ ನಮ್ಮ‌ಸರ್ಕಾರ ಮಾಡಿದ ಕೆಲಸ ಜನತೆಗೆ ತಲುಪಿವೆ. 20 ಕ್ಷೇತ್ರ ಗೆಲ್ಲುತ್ತೇವೆ ಎಂದು ನನ್ನ ನಿರೀಕ್ಷೆ ಇದೆ. ಸರರ್ಕಾರದ ಐದನೇ ಗ್ಯಾರಂಟಿ ಶೀಘ್ರವೇ ಜಾರಿಗೆ ಬರಲಿದೆ. ರಾಜ್ಯ ಸರ್ಕಾರದಲ್ಲಿ ಯಾವುದೇ ಭುನ್ನಾಭಿಪ್ರಾಯಗಳಿಲ್ಲ. ವೈಯಕ್ತಿಕವಾಗಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿರುತ್ತೆ. ಇದು ರಾಜಕೀಯ ವಿಕೋಪಕ್ಕೆ ಹೋಗಬಾರದು . ರಾಮಾಯಣದಲ್ಲಿನಾಲ್ಕ ಲಕ್ಷ ಎಂಬತ್ತು ವರ್ಡ್ಸ್ ಗಳು ಇವೆ ಅದಕ್ಕಿನ್ನ ಹೆಚ್ಚು ಮೋದಿ ಸರ್ಕಾರ ಹೇಳಿದೆ. ಕಟ್ಟಡ ಕಾರ್ಮಿಕ 13 ಲಕ್ಷ ಅರ್ಜಿ ಗಳು ಬಂದಿದ್ದಾವೆ ಅದರಲ್ಲಿ 7 ಲಕ್ಷ ಅರ್ಜಿಗಳನ್ನು ಅರ್ಹ ಎಂದು ಮಾಡಲಾಗಿದೆ, ಸದ್ಯಕ್ಕೆ ಬಸ್ ಪಾಸ್ ಕೊಡತ್ತೀಲ್ಲಾ ಎಂದರು.

ಬಿಜೆಪಿ 2500 ಶಾಸಕರನ್ನು ಖರೀದಿ ಮಾಡಿದೆ, 7500 ಕೋಟಿ ಹಣ ಇದೆ :

ಬಿಜೆಪಿ ಪಕ್ಷ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ನೀಡುತ್ತಿದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಸಚಿವ ಸಂತೋಷ ಲಾಡ್ ಅವರು ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಸಹಜವಾಗಿಯೇ ದುಡ್ಡು ಇರುವ ಪಕ್ಷ. ಕಳೆದ 10 ವರ್ಷಗಳ ಅವಧಿಯಲ್ಲಿ ದೇಶದಾದ್ಯಂತ 2500 ಶಾಸಕರನ್ನು ಖರೀದಿ ಮಾಡಿದೆ. ಬಿಜೆಪಿ ಅಧಿಕೃತವಾಗಿಯೇ ತನ್ನ ಬಳಿ 7500 ಕೋಟಿ ಹಣ ಇದೆ ಎಂದು ಹೇಳಿಕೊಂಡಿದೆ. ಪ್ರಧಾನಮಂತ್ರಿ ಪರಿಹಾರ ನಿಧಿಗೆ 30 ಸಾವಿರ ಕೋಟಿ ಜಮಾ ಆಗಿದೆ. ಆ ದುಡ್ಡಲ್ಲಿ ಇದುವರೆಗೂ ಒಂದೂ ಆಸ್ಪತ್ರೆ ಕಟ್ಟಿಸಿಲ್ಲ ಎಂದರು.

ಸಚಿವ ಸತೀಶ ಜಾರಕಿಹೊಳಿ ಅವರು ಅಸಮಾಧಾನಿತರಾಗಿಲ್ಲ. ಅವರು ಬೇರೆ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿರಬಹುದು. ಅದು ರಾಜಕೀಯ ಉದ್ದೇಶಕ್ಕಲ್ಲ. ಅವರು ಬುದ್ಧ, ಬಸವ, ಅಂಬೇಡ್ಕರ್ ತತ್ವದ ಮೇಲೆ ಕೆಲಸ ಮಾಡುತ್ತಿದ್ದಾರೆ. ಬೇರೆ ಯಾವುದಾದರೂ ಕಾರಣಕ್ಕೆ ಅವರು ಅಸಮಾಧಾನಗೊಂಡಿದ್ದರೆ ಅವರನ್ನೇ ಕೇಳಿ ತಿಳಿದುಕೊಳ್ಳಬೇಕು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು