News Karnataka Kannada
Sunday, May 05 2024
ಹುಬ್ಬಳ್ಳಿ-ಧಾರವಾಡ

ಕುಟುಂಬದಿಂದಲೇ ಫಯಾಜ್‌ಗೆ ಕುಮ್ಮಕ್ಕು ಇದೆ : ನೇಹಾ ಹೆತ್ತವರು ಆಕ್ರೋಶ

ನೇಹಾ ಕೊಲೆಗೆ ಕುಟುಂಬದಿಂದಲೇ ಫಯಾಜ್‌ಗೆ ಕುಮ್ಮಕ್ಕು ಇದೆ ಎಂದು ನೇಹಾ ಹೆತ್ತವರು ನಿರಂಜನ ಹಿರೇಮಠ ಮತ್ತು ತಾಯಿ ಗೀತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆರೋಪಿ‌ ಫಯಾಜ್ ತಂದೆ, ತಾಯಿ ಮತ್ತು ಸಹೋದರಿ ವಿರುದ್ಧ ದೂರು ನೀಡುವೆ ಎಂದು ಎಂದು ಹೆತ್ತವರು ಹೇಳಿದ್ದಾರೆ.
Photo Credit : NewsKarnataka

ಹುಬ್ಬಳ್ಳಿ: ನೇಹಾ ಕೊಲೆಗೆ ಕುಟುಂಬದಿಂದಲೇ ಫಯಾಜ್‌ಗೆ ಕುಮ್ಮಕ್ಕು ಇದೆ ಎಂದು ನೇಹಾ ಹೆತ್ತವರು ನಿರಂಜನ ಹಿರೇಮಠ ಮತ್ತು ತಾಯಿ ಗೀತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆರೋಪಿ‌ ಫಯಾಜ್ ತಂದೆ, ತಾಯಿ ಮತ್ತು ಸಹೋದರಿ ವಿರುದ್ಧ ದೂರು ನೀಡುವೆ ಎಂದು ಎಂದು ಹೆತ್ತವರು ಹೇಳಿದ್ದಾರೆ.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಹಾಳ ಕುರಿತು ಇಲ್ಲಸಲ್ಲದ ಪೋಟೋ, ವಿಡಿಯೋ ವೈರಲ್ ಮಾಡುತ್ತಿರುವವರ ವಿರುದ್ಧ ಸಹ ಸೈಬರ್ ಕ್ರೈಮ್‌ಗೆ ದೂರು ನೀಡುತ್ತೇವೆ. ನಮ್ಮ ಮಗಳ ಸಾವಿನ ದುಃಖದಲ್ಲಿ ನಾವು ಇದ್ದೇವೆ. ಆದರೆ ನಮ್ಮ ಕುಟುಂಬದ ಗೌರವ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಆರೋಪಿ‌ ಫಯಾಜ್ ತಂದೆ, ತಾಯಿ ಮತ್ತು ಸಹೋದರಿ ನೀಡುತ್ತಿರುವ ಹೇಳಿಕೆ ನೋಡಿದರೆ ಅವರ ಕುಟುಂಬದಿಂದಲೇ ಫಯಾಜ್‌ಗೆ ಕುಮ್ಮಕ್ಕು ಇದೆ. ಇದು ಫಯಾಜ್ ಮತ್ತು ಕುಟುಂಬದವರ ಒಳಸಂಚು ಅನ್ನಿಸುತ್ತಿದೆ ಎಂದು ಆರೋಪಿಸಿದರು.

ನನ್ನ ಮಗಳು ಸತ್ತಮೇಲೆ ಯಾರು ಪೋಟೋ ವೈರಲ್ ಮಾಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಫಯಾಜ್‌ಗೆ ಆಶ್ರಯ ಕೊಟ್ಟವರು ಯಾರು. ಇದೆಲ್ಲಾ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು