ಕಲಘಟಗಿ: ಪಟ್ಟಣದ ಮುಂಡಗೋಡ ರಸ್ತೆಯ ಪಕ್ಕ ಶಿವಾಜಿ ವಾಸ್ಕೋಡೆ ಎಂಬುವರ ಕಬ್ಬಿನ ಹೊಲದಲ್ಲಿ ಇಂದು ಮಧ್ಯಾಹ್ನದ ಯಾರೋ ತಾಯಿ ಒಬ್ಬಳು ಮಗುವನ್ನು ಹೆತ್ತು ಸ್ಥಳದಲ್ಲಿ ಬಿಟ್ಟು ಹೋಗಿರುವ ಕರುಣಾಜನಕ ಘಟನೆ ಜರುಗಿದೆ.
ಕಬ್ಬಿನ ಗದ್ದೆಯ ಪಕ್ಕ ಮಾಲೀಕರ ಮನೆ ಇದ್ದು ಸಾಯಂಕಾಲ ಕೆಲಸದಿಂದ ಮನೆಗೆ ಬಂದ ಗಂಡ ಹೆಂಡತಿಗೆ ಕಬ್ಬಿನ ಹೊಲದಲ್ಲಿ ಮಗುವಿನ ಅಳು ಕೆಳುತ್ತಿದ್ದಂತೆ ಸ್ಥಳಕ್ಕೆ ಹೋಗಿ ನೋಡಿದಾಗ ಮಗು ಇರುವುದು ಕಂಡುಬಂದಿದೆ. ಮಗುವಿಗೆ ಗಾಯಗಳಾಗಿದ್ದು ಸ್ಥಳೀಯರು ಮಗುವಿಗೆ ಆರೈಕೆ ಮಾಡಿ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಕಲಘಟಗಿ ಪೊಲೀಸ್ ಸಿಬ್ಬಂದಿ ಆಗಮಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.