ಹುಬ್ಬಳ್ಳಿ: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹೊತ್ತಿದ ಪರಿಣಾಮ ಮನೆಯಲ್ಲಿರುವ ಸಾಮಾನುಗಳಿಗೆ ಬೆಂಕಿ ತಗುಲಿದ್ದು, ಸ್ಥಳೀಯರ ಮುಂಜಾಗ್ರತೆಯಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಹಳೇ ಹುಬ್ಬಳ್ಳಿಯ ಜಂಗ್ಲಿಪೇಟೆಯ ಸುಮಿತ್ರಮ್ಮಾ ಹೊಸೂರು ಎಂಬುವರ ಮನೆಯಲ್ಲಿ ಇಂತಹದೊಂದು ಅವಘಡ ಸಂಭವಿಸಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಅಲ್ಲದೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.ಇನ್ನೂ ಗ್ಯಾಸ್ ಸಿಲಿಂಡರ್ ಸೋರಿಕೆಯನ್ನು ಗಮನಿಸಿದ ಸ್ಥಳೀಯರು ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.