News Karnataka Kannada
Friday, May 10 2024
ಹುಬ್ಬಳ್ಳಿ-ಧಾರವಾಡ

40 ಸಾವಿರ ಅಂತರದಲ್ಲಿ ಮಹೇಶ ಟೆಂಗಿನಕಾಯಿ ಗೆಲ್ಲಲಿದ್ದಾರೆ : ಅರವಿಂದ ಬೆಲ್ಲದ

Mahesh Tenginakai will win by a margin of 35,000 to 40,000 votes: Aravind Bellada
Photo Credit : News Kannada

ಹುಬ್ಬಳ್ಳಿ: ಗೃಹ ಸಚಿವ ಅಮಿತ್ ಶಾ ಭೇಟಿ ವಿಚಾರವಾಗಿ, ಕಾಮನ್ ಆಗಿ ಅಮಿತ್ ಶಾ ಸಭೆ ನಡೆಸಿದ್ದಾರೆ. ಪ್ರಧಾನ ಮಂತ್ರಿಗಳ ಪ್ರವಾಸದ ವಿವರಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ಪ್ರಹ್ಲಾದ್ ಜೋಶಿ ಅವರ ಜೊತೆಗೆ ಚರ್ಚೆ ನಡೆಸಿದ್ದಾರೆಂದು ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ್ ಬೆಲ್ಲದ ಹೇಳಿದರು.

ನಗರದ ಖಾಸಗಿ ಹೊಟೇಲ್ ನಲ್ಲಿ ಅಮಿತ್ ಶಾ ಭೇಟಿ ಮಾಡಿ ಮಾತನಾಡಿದ ಅವರು  ಸೆಂಟ್ರಲ್ ಕ್ಷೇತ್ರದಲ್ಲಿ ಕಾರ್ಯತಂತ್ರ  ಅವಶ್ಯಕತೆ ಇಲ್ಲ. ಜನರು, ಕಾರ್ಯಕರ್ತರು, ಮತದಾರರೇ ಡಿಸೈಡ್ ಮಾಡಿದ್ದಾರೆ. ಅಲ್ಲಿ ಯಾವುದೇ ರೀತಿಯ ಸ್ಟ್ರಾಟೆಜಿ ಅವಶ್ಯಕತೆ ಇಲ್ಲ. ಅಲ್ಲಿ ಜನರೇ ತೀರ್ಮಾನ ಮಾಡಿದ್ದಾರೆ, ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸಲಿದೆ ಎಂದರು.

ಲಿಂಗಾಯತರಿಗೆ ಬಿಜೆಪಿಯಿಂದ ಅನ್ಯಾಯದ ವಿಚಾರಕ್ಕೆ, ಐವತ್ತು ವರ್ಷದ ಕರ್ನಾಟಕದ ಇತಿಹಾಸದಲ್ಲಿ ಕೇವಲ 9 ತಿಂಗಳ ಅವಧಿಗೆ ವೀರೇಂದ್ರ ಪಾಟೀಲರನ್ನ ಮುಖ್ಯಮಂತ್ರಿ ಮಾಡಿ, ಅವರನ್ನ ಮನೆಗೆ ಕಳುಹಿಸಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಹಕೀಕತ್ ಏನಿದೆ ಅಂತಾ ಕರ್ನಾಟಕದ ಜನತೆಗೆ ಗೊತ್ತಿದೆ.

ಇದರ ಬಗ್ಗೆ ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ, ಶೆಟ್ಟರ್ ಫ್ಯಾಕ್ಟರ್ ವರ್ಕ್ ವಿಚಾರಕ್ಕೆ, ಸೆಂಟ್ರಲ್ ಕ್ಷೇತ್ರದಲ್ಲಿ ಯಾವ ಫ್ಯಾಕ್ಟರ್ ವರ್ಕ್ ಆಗಲ್ಲ. ಅಮಿತ್ ಶಾ ಹೇಳಿದ್ದಾರೆ. 35 ಸಾವಿರ ಲೀಡ್ ಆಗಬೇಕು ಅಂತ. ಹೀಗಾಗಿ ಕನಿಷ್ಠ ಪಕ್ಷ 35 ರಿಂದ 40 ಸಾವಿರ ಅಂತರದಲ್ಲಿ ಮಹೇಶ ಟೆಂಗಿನಕಾಯಿ ಗೆಲ್ಲಲಿದ್ದಾರೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು