ಧಾರವಾಡ : ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡದ 8 ಕಾಲೇಜುಗಳ ಮೇಲೆ ಏಕಕಾಲಕ್ಕೆ ತರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಜಿಎಸ್ಟಿ (GST) ವಂಚನೆ ಆರೋಪ ಹಿನ್ನೆಲೆ ಧಾರವಾಡದ ಅಣ್ಣಿಗೇರಿ ಕಾಲೇಜು, ಮಹೇಶ ಪಿಯು ಕಾಲೇಜು, ಪ್ರೇರಣಾ ಕಾಲೇಜು, ಜಿಎಸ್ಎಸ್ ಆವಂತಿಕಾ ಕೋಚಿಂಗ್ ಸೆಂಟರ್ ಮತ್ತು ಚೇತನಾ ಪಿಯು ಕಾಲೇಜು ಸೇರಿದಂತೆ 8 ಕಾಲೇಜುಗಳ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ.
ಕೋಚಿಂಗ್ ಹೆಸರಿನಲ್ಲಿ ವಿವಿಧ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಹಣಕ್ಕೆ ಜಿಎಸ್ಟಿ ಕಟ್ಟದೆ ವಂಚನೆ ಆರೋಪ ಕೇಳಿಬಂದಿದೆ. ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗದ ಜಂಟಿ ಆಯುಕ್ತ ರವಿಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ದಾಖಲೆ ಪತ್ರಗಳು ವಶಕ್ಕೆ ಪಡೆಯಲಾಗಿದೆ.