ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ‌ ಬಂಧನ

ಧಾರವಾಡ: ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮದ್ಯದ ಸಮೇತ ಬಂಧಿಸುವಲ್ಲಿ ಸಿಸಿಬಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಧಾರವಾಡ ತಾಲೂಕಿನ ಹೊನ್ನಾಪುರ ಗ್ರಾಮದ ಸೋಮಪ್ಪ ಮಿಸಗೇರಿ (27) ಎಂಬ ವ್ಯಕ್ತಿಯೇ ಬಂಧಿತನಾಗಿದ್ದು, ಈತ ಫೆ. 29 ರಂದು ಧಾರವಾಡದ ಸಪ್ತಾಪುರದ ಹತ್ತಿರ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ವಿಭಾಗದ ಎಸ್.ಟಿ.ಒಡೆಯರ್ ನೇತೃತ್ವದ ಸಿಸಿಬಿ ಇನ್ಸ್‌ಪೆಕ್ಟ‌ರ್ ಪಿ.ಆ‌ರ್.ಗಂಗೇನಹಳ್ಳಿ ಮತ್ತು ಅವರ ಸಿಬ್ಬಂದಿ ದಾಳಿ ಮಾಡಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನಿಂದ 60 ಸಾವಿರ ರೂಪಾಯಿ ಮೌಲ್ಯದ 141.60 ಲೀಟ‌ರ್ ಮದ್ಯ ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ ಇಂಡಿಕಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಒಟ್ಟು 1.6 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಸಿಸಿಬಿ ಪೋಲಿಸರು ವಶಪಡಿಸಿಕೊಂಡು, ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.

Gayathri SG

Recent Posts

ತೃತೀಯ ಲಿಂಗಿಯ ಹತ್ಯೆ ಪ್ರಕರಣ: ಮಹಿಳೆಯ ಬಂಧನ

ತೃತೀಯ ಲಿಂಗಿಯನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.

12 mins ago

ಬಿಗ್‌ಬಾಸ್‌ 16 ಸ್ಪರ್ಧಿ ʼಅಬ್ದು ರೋಝಿಕ್‌ʼಗೆ ಮದುವೆಯಂತೆ

ಬಿಗ್‌ಬಾಸ್‌ 16ನಲ್ಲಿ ಸ್ಪರ್ಧಿಸಿದ್ದ ಅಬ್ದು ರೋಝಿಕ್‌ ವಿಡಿಯೋವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾನೀಗ ಪ್ರೀತಿಗೆ ಬಿದ್ದಿದ್ದು, ಜುಲೈ 7ರಂದು ಮನಮೆಚ್ಚಿದ…

23 mins ago

ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ನಿಂದ ಬೃಹತ್ ಪ್ರತಿಭಟನೆ

ಹಾಸನದ ಸಿ.ಡಿ.ಹಗರಣವನ್ನು ಸಿ.ಬಿ.ಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿಂದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

38 mins ago

ಸೊಳ್ಳೆ ‘ಟ್ವೀಟ್ ಕಳುಹಿಸುವ’ ಫೋಟೋ ವೈರಲ್‌

ನಾವು ಪ್ರತಿದಿನ ಸೋಶಿಯಲ್‌ ಮಿಡಿಯಾಗಳಲ್ಲಿ ಹಲವಾರು ಟ್ವೀಟ್‌ಗಳು ಮತ್ತು ಪೋಸ್ಟ್ ಗಳನ್ನು ನೋಡುತ್ತೇವೆ.ಅದರಲ್ಲೂ ಕೆಲ ಪೋಸ್ಟ್‌ ಗಳು ನಮ್ಮನ್ನು ನಗುವಂತೆ…

52 mins ago

ಪಾಕಿಸ್ತಾನವನ್ನು ನಾವು ಗೌರವಿಸಬೇಕು ಎಂದ ಮಾಜಿ ಸಚಿವ ಮಣಿಶಂಕರ್ ಅಯ್ಯರ್‌

ಈ ಹಿಂದೆಯೂ ಪಾಕಿಸ್ತಾನವನ್ನು ಹಾಡಿಹೊಗಳಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್‌ ಮಾಜಿ ಸಚಿವ ಮಣಿಶಂಕರ್ ಅಯ್ಯರ್‌ ಈಗ ಮತ್ತೊಂದು ವಿವಾದಾತ್ಮಕ…

54 mins ago

ಅವರೆಕಾಳು ಕಚೋರಿ ಮನೆಯಲ್ಲೇ ಮಾಡುವುದು ಹೇಗೆ?

ಬಿಸಿ, ಬಿಸಿ ಅವರೆ ಕಚೋರಿಯನ್ನು ಮನೆಯಲ್ಲಿಯೇ ಮಾಡಿ ಸವಿಯುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ತಯಾರಿಯ ಬಗೆಗಿನ ಮಾಹಿತಿ.

1 hour ago