News Karnataka Kannada
Monday, April 29 2024
ಹುಬ್ಬಳ್ಳಿ-ಧಾರವಾಡ

ಧಾರವಾಡ ಲೋಕಸಭಾ ಅಭ್ಯರ್ಥಿ ನಾನೇ: ಸಂಸದ ಪ್ರಹ್ಲಾದ್ ಜೋಶಿ

ಧಾರವಾಡ ಲೋಕಸಭಾ ಅಭ್ಯರ್ಥಿ ನಾನೇ ಎಂದು ಸಂಸದ ಪ್ರಹ್ಲಾದ್ ಜೋಶಿಯವರು ಘೋಷಿಸಿಕೊಳ್ಳುವ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
Photo Credit : News Kannada

ಹುಬ್ಬಳ್ಳಿ: ಧಾರವಾಡ ಲೋಕಸಭಾ ಅಭ್ಯರ್ಥಿ ನಾನೇ ಎಂದು ಸಂಸದ ಪ್ರಹ್ಲಾದ್ ಜೋಶಿಯವರು ಘೋಷಿಸಿಕೊಳ್ಳುವ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ ಅವರು, ನಮ್ಮ ಪಕ್ಷದಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಈಗಾಗಲೇ ಚುನಾವಣೆಗೆ ತಯಾರಿ ನಡಸಿದ್ದೇನೆ. ಜೋಶಿನೇ ಅಭ್ಯರ್ಥಿ ಮತ್ತೆ ಇನ್ನೇನು ಎಂದರು.

ಶೆಟ್ಟರ್ ಪಕ್ಷಕ್ಕೆ ವಾಪಸ್ ಆಗಿದ್ದು ಸಂತೋಷ, ಒಳ್ಳೆಯದು. ಶೆಟ್ಟರ್ ಬಂದಿದ್ದು ಸಂತೋಷ ತಂದಿದೆ. ಈ ಭಾಗದಲ್ಲಿ ಎಲ್ಲರೂ ಒಂದುಗೂಡಿ ಪಕ್ಷ ಬಲವರ್ಧನೆ ಮಾಡುತ್ತೇವೆ. ನನ್ನದು ಯಾವುದೇ ವಿರೋಧ ಇಲ್ಲ ನಾನು ಆರು ತಿಂಗಳ ಹಿಂದೆ ಶೆಟ್ಟರ್ ವಾಪಸ್ ಬರ್ತಾರೆ ಅಂತ ಹೇಳಿದ್ದೆ. ನಾನು ಇದನ್ನು ಯಾವುದೇ ವ್ಯಂಗ್ಯದಿಂದ ಹೇಳುತ್ತಿಲ್ಲ ಸಹೃದಯದಿಂದ ಹೇಳುತ್ತಿದ್ದೇನೆ ಎಂದರು.

ಈ ವೇಳೆ ಶಾಸಕ ಅರವಿಂದ್ ಬೆಲ್ಲದ್, ಜೋಶಿ ಅವರೇ ನಮ್ಮ ನಾಯಕರು ಸುಮ್ಮನೆ ಏನೇನೋ ಹೇಳಬೇಡಿ ಅಂದರು. ಶಾಸಕರು, ನಗರ ಘಟಕ ಅಧ್ಯಕ್ಷರು, ಕಾರ್ಯಕರ್ತರು ಚುನಾವಣೆ ಸಿದ್ಧತೆಯಲ್ಲಿದ್ದಾರೆ. ಯಾಕೋ ರಾಷ್ಟ್ರೀಯ ಅಧ್ಯಕ್ಷ ಅಂತ ಹೇಳುತ್ತಿದ್ದಾರೆ. ಜೋಶಿ ರಾಷ್ಟ್ರಪತಿ ಆಗುತ್ತಾರೆ, ಶೆಟ್ಟರ್ ಅಭ್ಯರ್ಥಿ ಆಗುತ್ತಾರೆ ಅಂತ ಹೇಳುತ್ತಿಲ್ಲ ಎಂದರು.

ನಮಗೆ ಲಿಂಗಾಯತ ಸೇರಿದಂತೆ ಎಲ್ಲಾ ಸಮುದಾಯ ಬೇಕು. ಲಕ್ಷ್ಮಣ ಸವದಿಯಲ್ಲಿ ಬಿಜೆಪಿಯ ವೈಚಾರಿಕ ರಕ್ತವಿದೆ. ಅವರು ವಾಪಸ್ ಪಕ್ಷಕ್ಕೆ ಬಂದ್ರೆ ಸಂತೋಷ. ಬೆಂಗಳೂರಿನಲ್ಲಿ ಶೆಟ್ಟರ್ ಜೊತೆಗೆ ಮಾತನಾಡಿಸಿರುವೆ ವೆಲ್‍ಕಮ್ ಬ್ಯಾಕ್ ಅಂತ ಹೇಳಿದ್ದೇನೆ. ಗಾಲಿ ಜನಾರ್ದನ ರೆಡ್ಡಿ ಯಾವಾಗ ಬೇಕಾದರೂ ಪಕ್ಷಕ್ಕೆ ಬರಬಹುದು ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.

ಶೆಟ್ಟರ್ ಆಗಮನ ವಿಚಾರದಲ್ಲಿ ಸ್ಥಳೀಯ ನಾಯಕರನ್ನು ನಿರ್ಲಕ್ಷ್ಯ ಮಾಡಿಲ್ಲ ಅವರ ಗಮನಕ್ಕೆ ತಂದಿದ್ದೇನೆ ಎಂದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು