News Karnataka Kannada
Sunday, April 28 2024
ಹುಬ್ಬಳ್ಳಿ-ಧಾರವಾಡ

ಹಳೇಹುಬ್ಬಳ್ಳಿ ಗಲಭೆ ಪ್ರಕರಣ : 109 ಮಂದಿಗೆ ಬಿಡುಗಡೆ ಭಾಗ್ಯ

ಹಳೇಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ 109 ಮಂದಿಗೆ ಬಿಡುಗಡೆಯಾಗಿದ್ದಾರೆ. ಧಾರವಾಡ ಕಾರಾಗೃಹದಿಂದ 40, ಬಳ್ಳಾರಿ ಕಾರಾಗೃಹದಿಂದ 8 ಹಾಗೂ ಬೆಳಗಾವಿಯಿಂದ 61 ಜನರು ಬಿಡುಗಡೆಯಾಗಿದ್ದಾರೆ.
Photo Credit : News Kannada

ಹುಬ್ಬಳ್ಳಿ :  ಹಳೇಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ 109 ಮಂದಿಗೆ ಬಿಡುಗಡೆಯಾಗಿದ್ದಾರೆ. ಧಾರವಾಡ ಕಾರಾಗೃಹದಿಂದ 40, ಬಳ್ಳಾರಿ ಕಾರಾಗೃಹದಿಂದ 8 ಹಾಗೂ ಬೆಳಗಾವಿಯಿಂದ 61 ಜನರು ಬಿಡುಗಡೆಯಾಗಿದ್ದಾರೆ.

ಕಳೆದ ಫೆ.15 ಶುಕ್ರವಾರದಂದು ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಆರೋಪಿತರಿಗೆ ಶೂರಿಟಿ ನೀಡುವ ಕುರಿತು ಬಿಡುಗಡೆ ವಿಳಂಬವಾಗಿತ್ತು. ಬೆಂಗಳೂರು ಮೂಲದ ಓರ್ವ ಹಿಂದೂ ಸೇರಿ ನಾಲ್ವರು 20 ಕೋಟಿ ಶೂರಿಟಿ ನೀಡಿದ್ದರಿಂದ 109 ಜನರ ಬಿಡುಗಡೆ ಪ್ರಕ್ರಿಯೆ ನಡೆದು ಹೊರಬಂದರು.

ಧಾರವಾಡ ಮತ್ತು ಬಳ್ಳಾರಿಯಿಂದ ಬಂದವರು ದರ್ಗಾಕ್ಕೆ ಹೋಗಿ ತಮ್ಮ ತಮ್ಮ ಮನೆಗೆ ತೆರಳಿದ್ದಾರೆ. ಬೆಳಗಾವಿ ಕಾರಾಗೃಹದಲ್ಲಿರುವವರನ್ನು ಒಬ್ಬೊಬ್ಬರಾಗಿ ವೈದ್ಯಕೀಯ ಪರೀಕ್ಷೆ ನಡೆದು ಅವರು ಕೂಡ ರಾತ್ರಿ ಬಿಡುಗಡೆಯಾಗಿದ್ದಾರೆ.

ಘಟನೆ : 2022ರ ಏಪ್ರಿಲ್ 16ರಂದು ಯುವಕನೊಬ್ಬ ವಿವಾದಾತ್ಮಕ ಎನಿಮೇಟೆಡ್ ವಾಟ್ಸ್ಆ್ಯಪ್ ವಿಡಿಯೊ ಸ್ಟೇಟಸ್‌ ಹಾಕಿದ ಹಿನ್ನೆಲೆಯಲ್ಲಿ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆ ಎದುರು ಗಲಭೆ ಆಗಿತ್ತು. ಕೆಲವರು ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ್ದರು. ಪೊಲೀಸ್‌ ವಾಹನಗಳು ಜಖಂಗೊಂಡಿದ್ದವು. ಒಂದು ಸಾವಿರಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿ, 155 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು