News Karnataka Kannada
Monday, May 13 2024
ಹುಬ್ಬಳ್ಳಿ-ಧಾರವಾಡ

ಬಂಗಾರದ ಆಸೆಗೆ ಅಜ್ಜಿಯನ್ನು ಕೊಂದ ಕಿರಾತಕರು

Grandmother's murder over gold
Photo Credit : IANS

ಹುಬ್ಬಳ್ಳಿ: ಬಂಗಾರದ ಆಸೆಗಾಗಿ ವೃದ್ಧ ಮಹಿಳೆಯ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ ಘಟನೆ ಕಲಘಟಗಿ ತಾಲ್ಲೂಕಿನ ಆಲದಕಟ್ಟಿ ಗ್ರಾಮದ ಹೊಲದಲ್ಲಿ ನಡೆದ ಘಟನೆ ತಡ ರಾತ್ರಿ ಬೆಳಕಿಗೆ ಬಂದಿದೆ.

ಕಲಘಟಗಿ ತಾಲ್ಲೂಕಿನ ನೆಲ್ಲಿಹರವಿ ಗ್ರಾಮದ 82 ವರ್ಷದ ತಿಪ್ಪವ್ವ ತಂಬೂರ್ ಎಂಬ ವೃದ್ದೆಯನ್ನ ಆಲದಕಟ್ಟಿ ಗ್ರಾಮದ ದ್ಯಾಮಣ್ಣ ಎಂಬುವವರಿಗೆ ಸೇರಿದ ಕಬ್ಬು ಬೆಳೆದ ಜಮೀನಿನಲ್ಲಿ ಭೀಕರವಾಗಿ ಕೊಲೆ ಮಾಡಿ, ವೃದ್ದೆಯ ಕೊರಳಲಿದ್ದ ಚಿನ್ನಭರಣ ದೋಚಿಕೊಂಡು ಕೊಲೆಗಾರರರು ಪರಾರಿ ಆಗಿದ್ದಾರೆ.

ನಿನ್ನೆ ತಡ ರಾತ್ರಿ ಆಲದಕಟ್ಟಿ ಗ್ರಾಮದ ಗ್ರಾಮಸ್ಥರೊಬ್ಬರು ರಕ್ತದ ಮೊಡವಿನಲ್ಲಿ ಕೊಲೆಯಾಗಿ ಬಿದ್ದಿದ್ದ ತಿಪ್ಪವ್ವಳ ಮೃತ ದೇಹವನ್ನ ನೋಡಿ ಕಲಘಟಗಿ ಪೊಲೀಸರಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಕಲಘಟಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಸ್ಥಳಕ್ಕೆ ಶ್ವಾನದಳವನ್ನ ತರಿಸಿ ಕೊಲೆಗಾರರ ಪತ್ತೆಗೆ ಕೂಡ ಮುಂದಾಗಿದ್ದಾರೆ. ಸದ್ಯ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವನ್ನು ದಾಖಲು ಮಾಡಿಕೊಂಡು ಕೊಲೆಗಾರರ ಪತ್ತೆಗೆ ಮುಂದಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು