ಚುನಾವಣಾ ಪ್ರಚಾರಕ್ಕೆ ಮಕ್ಕಳ ಬಳಕೆ ನಿಷೇಧ : ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು

ಧಾರವಾಡ : ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಕಾರ್ಯಗಳಿಗೆ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ನಿಷೇಧಿಸಲಾಗಿದೆ  ಮತ್ತು ನಿಯಂತ್ರಣ ಕಾಯ್ದೆ 1986 ರನ್ವಯ ಯಾವುದೇ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಗಧಿಸಲಾಗಿದೆ.

ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳು ಬಹು ವಿವಿಧ ಚಟುವಟಿಕೆಗಳಲ್ಲಿ 18 ವರ್ಷ ಪೂರ್ವದ ಮಕ್ಕಳನ್ನು ತೊಡಗಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಅಂದರೆ ಮಕ್ಕಳನ್ನು ಯಾವುದೇ ಚುಣಾವಣಾ ಪ್ರಚಾರದಲ್ಲಿ ಬಳಸದಂತೆ ಕರಪತ್ರ ಹಾಗೂ ಪೊಸ್ಟರ್‌ ಹಂಚಲು ಅಥವಾ ಘೋಷಣೆ ಕೊಗುವುದು, ಚುನಾವಣಾ ಸಭೆ, ಹೋಲ್ಡಿಂಗ್ ಕಟ್ಟುವುದು, ಪ್ರಚಾರ ವಾಹನದ ಮೇಲೆ ಮಕ್ಕಳನ್ನು ಕೂರಿಸುವುದು, ಒಟ್ಟಾರೆಯಾಗಿ ಪ್ರಚಾರ ಸಭೆಗಳಲ್ಲಿ ಮಕ್ಕಳನ್ನು ಬಳಸದಂತೆ ನಿರ್ದೇಶಿಸಲಾಗಿದೆ.

ಲೋಕಸಭಾ ಸಾರ್ವತ್ರಿಕ ಚುನಾವಣೆ 2024ಕ್ಕೆ ಯಾವುದೇ ಪಕ್ಷಗಳು ಚುನಾವಣಾ ಮತ್ತು ಪ್ರಚಾರ ಕಾರ್ಯಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳದಂತೆ ಕ್ರಮವಹಿಸಲು ಹಾಗೂ ಉಲ್ಲಂಘನೆ ಕಂಡು ಬಂದಲ್ಲಿ ಕಾಯ್ದೆಯ ಕಲಂ.ಗಳ ಅನ್ವಯ ಅಗತ್ಯ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Nisarga K

Recent Posts

ಬಸವ ಭವನದ ಜಮೀನಿಗೆ ಪೂಜೆ ಮತ್ತು ಷಟಸ್ಥಲ ಧ್ವಜಾರೋಹಣ

ನಗರದ ನಾವದಗೇರೆ ಸಮೀಪದ ಸರ್ವೇ ನಂ. 60ರಲ್ಲಿ ಜಿಲ್ಲಾಡಳಿತದಿಂದ ಮೀಸಲಿಟ್ಟಿರುವ ಒಂದು ಎಕರೆ ಹತ್ತು ಗುಂಟೆ ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ…

16 mins ago

ಸಂಸ್ಕಾರದ ತೊಟ್ಟಿಲು ಸರಸ್ವತಿ ಶಾಲೆ : ಹಿರಿಯ ಶಿಕ್ಷಕಿ

ನಗರದ ಸರಸ್ವತಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಶನಿವಾರ ಗುರುವಂದನಾ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮವನ್ನು ಬಹಳ…

28 mins ago

ತಮಿಳು ನಟ ಸಿಂಭು ಅವರನ್ನು ಚಿತ್ರರಂಗದಿಂದ ನಿಷೇಧಿಸುವಂತೆ ನಿರ್ದೇಶಕ ಒತ್ತಾಯ

ತಮಿಳು ಚಿತ್ರರಂಗದ ಜನಪ್ರಿಯ ನಟ ಸಿಂಭು ಅವರ ವಿರುದ್ಧ ಇದೀಗ ನಿರ್ದೇಶಕ ದೂರು ನೀಡಿದ್ದು ತಮಿಳು ಚಿತ್ರರಂಗದಿಂದ ಹೊರಗಟ್ಟಬೇಕು ಎಂದು…

47 mins ago

ಆಫೀಸ್‌ನಲ್ಲಿ ಒತ್ತಡಕ್ಕೆ ಒಳಗಾಗ್ತಿದ್ದೀರಾ : ಹಾಗಾದ್ರೆ ಇಲ್ಲಿದೆ ಟಿಪ್ಸ್‌

ಹಲವಾರು ಕಾರಣಗಳಿಗಾಗಿ ಕೆಲಸದ ಸ್ಥಳದಲ್ಲಿ ಅತಿಯಾದ ಒತ್ತಡವುಂಟಾಗುತ್ತದೆ. ಇದರಿಂದ ಆಯಾಸ ಹಾಗೂ ವಿಶ್ರಾಂತಿಯ ಕೊರತೆ ತಲೆದೋರುತ್ತದೆ. ಇದರಿಂದ ವ್ಯಕ್ತಿ ಸಿಕ್ಕಾಪಟ್ಟೆ…

1 hour ago

ಇಂದು 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ರಾಜ್ಯದ ಕೆಲವಡೆ ಬಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಹವಮಾನ ಇಲಾಖೆ 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ…

2 hours ago

ಇಂದು ತಾಯಂದಿರ ದಿನ : ಈ ದಿನದ ಮಹತ್ವ ,ಹಿನ್ನೆಲೆ ಏನು?

ತಾಯಂದಿರ ದಿನ , ತಾಯಂದಿರ ಗೌರವಾರ್ಥ ರಜಾದಿನವನ್ನು ವಿಶ್ವದಾದ್ಯಂತ ದೇಶಗಳಲ್ಲಿ ಆಚರಿಸಲಾಗುತ್ತದೆ. ಅದರ ಆಧುನಿಕ ರೂಪದಲ್ಲಿ ರಜಾದಿನವು ಹುಟ್ಟಿಕೊಂಡಿತುಯುನೈಟೆಡ್ ಸ್ಟೇಟ್ಸ್…

2 hours ago