24 ಗಂಟೆ ಕಾರ್ಯನಿರತ ಜಿಲ್ಲಾ ಮತದಾರರ ಸಹಾಯವಾಣಿ ಕೇಂದ್ರ ; ಸಾರ್ವಜನಿಕರಿಂದ ಉತ್ತಮ ಸ್ಪಂದನೆ

ಧಾರವಾಡ : ಲೋಕಸಭಾ ಚುನಾವಣೆಗಾಗಿ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಮತದಾರರಿಗಾಗಿ ಸಹಾಯವಾಣಿ ಕೇಂದ್ರವನ್ನು ಮಾರ್ಚ್ 16 ರಿಂದ ಪ್ರಾರಂಭಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಬರುತ್ತಿದೆ. ಮತದಾರರ ಪ್ರತಿ ಕರೆಗೆ ಮಾಹಿತಿಯುಕ್ತ ಪರಿಹಾರ ತಿಳಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಚುನಾವಣಾ ಕಂಟ್ರೋಲ್ ರೂಮ್‍ನಲ್ಲಿ ಆರಂಭಿಸಲಾಗಿರುವ ಈ ಸಹಾಯವಾಣಿ ಕೇಂದ್ರವು ದಿನದ 24 ಗಂಟೆ (24 x 7) ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರಿಂದ ಕರೆ ಸ್ವೀಕಾರಕ್ಕೆ ಒಟ್ಟು 6 ಸಿಬ್ಬಂದಿಗಳನ್ನು ಪ್ರತಿ 8 ಗಂಟೆಗಳಿಗೆ ಇಬ್ಬರಂತೆ (ಬೆಳಿಗ್ಗೆ 6 ರಿಂದ 2 ಗಂಟೆ. 2ಗಂಟೆಯಿಂದ ರಾತ್ರಿ 10 ಗಂಟೆಗೆ ಹಾಗೂ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ) ಕಾರ್ಯನಿರ್ವಹಿಸಲು ನೇಮಿಸಲಾಗಿದೆ. ಈ 6 ಸಿಬ್ಬಂದಿಗಳ ಮೇಲ್ವಿಚಾರಕರನ್ನಾಗಿ ಜಿಲ್ಲಾ ನೋಡಲ್ ಅಧಿಕಾರಿಯಾಗಿ ಕೃಷಿ ವಿವಿಯ ಕುಲಸಚಿವೆ, ಹಿರಿಯ ಕೆಎಎಸ್ ಅಧಿಕಾರಿ ಜಯಲಕ್ಷ್ಮಿ ರಾಯಕೊಡ ಅವರನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯ ಸಹಾಯವಾಣಿ ಕೇಂದ್ರಕ್ಕೆ 1950 ಟೋಲ್ ಫ್ರೀ ನಂಬರ್‍ನ ಸೌಕರ್ಯ ಕಲ್ಪಿಸಲಾಗಿದೆ. ಈ ದೂರವಾಣಿಯಲ್ಲಿ PಖI(Pಡಿioಡಿiಣಥಿ ಖಚಿಣe Iಟಿಣeಡಿಜಿಚಿಛಿe) ಇದ್ದು, ಒಂದೇ ಸಲ ಹಲವು ಕರೆಗಳನ್ನು ಸ್ವೀಕರಿಸುವ ಸಾಮಥ್ರ್ಯ ಹೊಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ಸೀಮೆಯೊಳಗೆ ವಾಸಿಸುವ ವ್ಯಕ್ತಿಗಳು ಜಿಲ್ಲೆಯ ಮತದಾರರ ಸಹಾಯವಾಣಿಗೆ ಕರೆ ಮಾಡಲು 1950 ಸಂಖ್ಯೆಯನ್ನು ಡಯಲ್ ಮಾಡಿದರೆ ಸಾಕು. ಲ್ಯಾಂಡಲೈನ್ ಇಲ್ಲವೆ ಯಾವುದೇ ಮೊಬೈಲ್ ಫೆÇೀನ್‍ನಿಂದ ಕರೆ ಮಾಡಬಹುದು. ಬೇರೆ ಜಿಲ್ಲೆಗಳಿಂದ ಅಥವಾ ಹೊರರಾಜ್ಯಗಳಿಂದ ಈ ಸಹಾಯವಾಣಿಗೆ ಕರೆ ಮಾಡಬೇಕಾದಲ್ಲಿ Sಖಿಆ ಕೋಡನ್ನು ಉಪಯೋಗಿಸಿ 1950 ಡಯಲ್ ಮಾಡಬೇಕು.

ಮತದಾರರು ಹಾಗೂ ಸಾರ್ವಜನಿಕರು ಕೇಳುವ ಚುನಾವಣಾ ಸಂಬಂಧಿತ ವಿಷಯಗಳ ಮಾಹಿತಿಯನ್ನು ಒದಗಿಸಲಾಗುವುದು.

ಸಾರ್ವಜನಿಕರಿಂದ, ಮಾಹಿತಿ ಕೇಳಿ, ಮತದಾರರ ಕಾರ್ಡಗೆ ಹೊಸ ಅರ್ಜಿ ಸಲ್ಲಿಸಿದ್ದು ಯಾವಾಗ ಬರುತ್ತದೆ? ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಸಿಗುತ್ತಿಲ್ಲ. ಮತದಾರರ ಕಾರ್ಡಲ್ಲಿ ಹೆಸರು. ಲಿಂಗ. ಫೆÇೀನ್ ನಂಬರ್ ತಿದ್ದುಪಡಿ ಮಾಡಲು ಯಾವ ಫಾರಂ ತುಂಬಬೇಕು? ನಮ್ಮ ಭಾಗದ ಮತಗಟ್ಟೆ ಸಂಖ್ಯೆ ಎಷ್ಟು? ವಿಳಾಸ ಬದಲಾವಣೆ ಮಾಡಿಕೊಳ್ಳುವುದು ಹೇಗೆ? ಹೀಗೆ ಮತದಾರರ ಚೀಟಿಗೆ/ಕಾರ್ಡಗೆ ಸಂಬಂಧಿಸಿದ ಹಲವಾರು ಪ್ರಶ್ನೆಗಳು ಕುರಿತಂತೆ ಫೆÇೀನ್ ಕರೆಗಳು ಸ್ವೀಕೃತವಾಗುತ್ತಿದ್ದು, ಸಹಾಯವಾಣಿ ಸಿಬ್ಬಂದಿಗಳು ಸೂಕ್ತ ಉತ್ತರ ನೀಡುತ್ತಿದ್ದಾರೆ.

ಈ ರೀತಿ ಬರುವ ಕರೆಗಳಲ್ಲಿ ಯುವ ಮತದಾರರ ಕರೆಗಳೇ ಹೆಚ್ಚಾಗಿವೆ. ಅದರಲ್ಲೂ ಗ್ರಾಮೀಣ ಯುವ ಮತದಾರರಿಂದ ಅತಿ ಹೆಚ್ಚು ಕರೆಗಳು ಸ್ವೀಕಾರವಾಗುತ್ತಿವೆ. ಮತದಾರರ ನೋಂದಣಿ, ರದ್ದುಪಡಿಸುವಿಕೆ, ಸ್ಥಳಾಂತರ ಕುರಿತ ಫಾರಂ 6,7,8 ಕುರಿತಂತೆ ಕರೆಗಳಿಗೂ ಕೂಡ ಸಂಬಂಧಿತ (ಂಇಖಔ) ಎಇಆರ್‍ಓ ಗಳಿಂದ ಮಾಹಿತಿ ಪಡೆದು ಉತ್ತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರತಿ ಕರೆಯ ಮಾಹಿತಿಯನ್ನು ರಿಜಿಸ್ಟರ್‍ಗಳಲ್ಲಿ ದಾಖಲು ಮಾಡಲಾಗುತ್ತಿದ್ದು, ಪ್ರತಿ ಕರೆಯ ಹೆಲ್ಪಲೈನ್ ಚಾಪ್ಟರ್‍ನಲ್ಲಿ ದಾಖಲಾಗಿ ಕೇಂದ್ರ ಕಛೇರಿಗೆ ದಾಖಲಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ರೀತಿ ಕರೆಗಳ ಜೊತೆ ಚುನಾವಣೆಗೆ ಸಂಬಂಧಿಸಿದ ದೂರುಗಳಿಗೂ ಉತ್ತರಿಸಲಾಗುತ್ತಿದೆ. ಈ ದೂರುಗಳನ್ನು ಎನ್.ಜಿ.ಆರ್.ಎಸ್ (ಓಉಖS) ಮತ್ತು ಪಿ.ಜಿ.ಆರ್.ಎಸ್ (PಉಖS) ಪೆÇೀರ್ಟಲ್‍ಗಳ ಮೂಲಕ ಸ್ವೀಕೃತಗೊಳ್ಳುತ್ತಿವೆ. ದೂರು ಸ್ವೀಕರಿಸಿದ ನಂತರ 24 ರಿಂದ 48 ಗಂಟೆಗಳ ಒಳಗಡೆ ಪ್ರತಿ ದೂರಿಗೆ ಸಂಬಂಧಿತ ಇಲಾಖೆಯಿಂದ ಮಾಹಿತಿ ಪಡೆದು ನಂತರ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಗಳ ಸ್ಪಷ್ಟ ಅಭಿಪ್ರಾಯದೊಂದಿಗೆ ಚುನಾವಣಾ ಆಯೋಗದ ಈಮೇಲ್ ಛಿmಛಿ.ಛಿeo.ಜಿ@gmಚಿiಟ.ಛಿom ಗೆ ಸಲ್ಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇಂದಿನ (ಏ.01) ವರೆಗೆ ಜಿಲ್ಲಾ ಮತದಾರ ಸಹಾಯವಾಣಿ ಕೇಂದ್ರದಿಂದ ಮತದಾರ ಮಾಹಿತಿಯೊಂದಿಗೆ 610 ಎನ್.ಜಿ.ಎಸ್.ಪಿ (ಓಉSP), ಹಾಗೂ 16 ಪಿ.ಜಿ.ಆರ್.ಎಸ್ (PಉಖS) ದೂರುಗಳ ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿವಿಧ ಮತಕ್ಷೇತ್ರಗಳ ಸಹಾಯವಾಣಿ ಸಂಖ್ಯೆಗಳ ವಿವರ: ಧಾರವಾಡ ಜಿಲ್ಲೆಯ ಮತದಾರ ಸಹಾಯವಾಣಿ ಸಂಖ್ಯೆಗಳು 1950, 0836-2446650, 0836-2446651 ಹಾಗೂ 0836-2446652, ಧಾರವಾಡ ಗ್ರಾಮೀಣ ತಾಲೂಕಿನ ಮತದಾರ ಸಹಾಯವಾಣಿ ಸಂಖ್ಯೆ 0836-2233822, ನವಲಗುಂದ ತಾಲೂಕಿನ ಮತದಾರ ಸಹಾಯವಾಣಿ ಸಂಖ್ಯೆ 08380-229240, ಕುಂದಗೋಳ ತಾಲೂಕಿನ ಮತದಾರ ಸಹಾಯವಾಣಿ ಸಂಖ್ಯೆ 08304-290239, ಹುಬ್ಬಳ್ಳಿ – ಧಾರವಾಡ ಪೂರ್ವ ವಿಧಾನ ಸಭಾ ಮತಕ್ಷೇತ್ರದ ಮತದಾರ ಸಹಾಯವಾಣಿ ಸಂಖ್ಯೆ 0836-2213833, ಹುಬ್ಬಳ್ಳಿ – ಧಾರವಾಡ ಕೇಂದ್ರ ವಿಧಾನ ಸಭಾ ಮತಕ್ಷೇತ್ರದ ಮತದಾರ ಸಹಾಯವಾಣಿ ಸಂಖ್ಯೆ 0836-2355106, ಹುಬ್ಬಳ್ಳಿ – ಧಾರವಾಡ ಪಶ್ಚಿಮ ವಿಧಾನ ಸಭಾ ಮತಕ್ಷೇತ್ರದ ಮತದಾರ ಸಹಾಯವಾಣಿ ಸಂಖ್ಯೆ 0836-2446133, ಕಲಘಟಗಿ ತಾಲೂಕಿನ ಮತದಾರ ಸಹಾಯವಾಣಿ ಸಂಖ್ಯೆ 08370-284535 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಧಾರವಾಡ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

Nisarga K

Recent Posts

ಪೂಜೆಗೆ ಅರಳಿ ಹೂವು ಬಳಕೆ ನಿಲ್ಲಿಸಲು ಟಿಡಿಬಿ ತೀರ್ಮಾನ

ಕೇರಳದ ತಿರುವಾಂಕೂರು ದೇವಸ್ಥಾನ ಆಡಳಿತ ಮಂಡಳಿಯು (ಟಿಡಿಬಿ) ತನ್ನ ಸುಪರ್ದಿಯಲ್ಲಿರುವ ದೇವಾಲಯಗಳಲ್ಲಿ ಪೂಜೆಗೆ ಅರಳಿ ಹೂವು (ಒಲಿಯಾಂಡರ್‌-ಕಣಗಿಲು ಜಾತಿಗೆ ಸೇರಿದ…

4 mins ago

50 ಕೋ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಂತ್ರಿಮಾಲ್‌: ಬೀಗ ಜಡಿದ ಬಿಬಿಎಂಪಿ

ಸರಿ ಸುಮಾರು 50 ಕೋಟಿಗಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗೆ ಬಿಬಿಎಂಪಿ ಬೆಳ್ಳಂಬೆಳಗ್ಗೆಯೇ  ಬೀಗ…

10 mins ago

ಆಟವಾಡುತ್ತಿದ್ದ ಮಗುವಿಗೆ ಕಚ್ಚಿದ ಬೀದಿ ನಾಯಿ : ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ

ಆಟವಾಡುತ್ತಿದ್ದ ಮಕ್ಕಳ ಮೇಲೆ ಎರಗಿ ಬೀದಿ ನಾಯಿಗಳು ಕಚ್ಚಿದ ಘಟನೆ ಬೆಳಗಾವಿ ನ್ಯೂ ಗಾಂಧಿನಗರದಲ್ಲಿ ನಡೆದಿದೆ.

28 mins ago

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಸುಳ್ಯದ ಮುಸ್ತಾಫ ಸೆರೆ

ದೇಶವನ್ನೇ ಬೆಚ್ಚಿಬೀಳಿಸಿದ ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ. ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ…

29 mins ago

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಸುಳ್ಯದಲ್ಲಿ ಪತ್ತೆ

ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜು ಅವರನ್ನು ಪೊಲೀಸರು ಸುಳ್ಯದ ಅರಂತೋಡಿನಲ್ಲಿ ಪತ್ತೆ ಹಚ್ಚಿದ್ದಾರೆ

33 mins ago

ಪ್ಲೇ-ಆಫ್​ ರೇಸ್​ನಿಂದ ಹೊರ ಬಿದ್ದ ಪಂಜಾಬ್ ​: ಆರ್‌ಸಿಬಿ ಪಾಯಿಂಟ್ಸ್ ಎಷ್ಟು ?

ಐಪಿಎಲ್​ ಟೂರ್ನಿಯಲ್ಲಿ ಆರ್​ಸಿಬಿ ತಂಡ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ನಿನ್ನೆ ಪಂಜಾಬ್ ಕಿಂಗ್ಸ್ ತಂಡವನ್ನು 60 ರನ್​ಗಳಿಂದ ಸೋಲಿಸುವ ಮೂಲಕ,…

43 mins ago