News Karnataka Kannada
Sunday, May 05 2024
ಹುಬ್ಬಳ್ಳಿ-ಧಾರವಾಡ

ಧಾರವಾಡ: ನಿಯಮ ಉಲ್ಲಂಘನೆ – ಆಟೋ, ವ್ಯಾನ್ ಚಾಲಕರಿಗೆ ಬಿಸಿ ಮುಟ್ಟಿಸಿದ ಖಾಕಿ ಪಡೆ

Khaki squad issues heat to auto, van drivers for violating rules
Photo Credit : News Kannada

ಧಾರವಾಡ: ಬುಧವಾರ ನಗರದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿದ ಸಂಚಾರಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘಹಿಸಿದ ಆಟೋ ಹಾಗೂ ವ್ಯಾನ್ ವಾಹನವನ್ನು ವಶಕ್ಕೆ ಪಡೆದು ದಂಡದ ಬಿಸಿಯನ್ನು ಕೊಟ್ಟಿದ್ದಾರೆ.

ಧಾರವಾಡದಲ್ಲಿ ಶಾಲೆಗಳಿಗೆ ಬರ ಇಲ್ಲಾ, ಸಾಕಷ್ಟು ಶಾಲೆಗಳಿವೆ. ಒಂದು ಶಾಲೆಗೆ ಸುಮಾರು 15 ರಿಂದ 20 ವಾಹನಗಳು ಮಕ್ಕಳನ್ನು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಪ್ರತಿನಿತ್ಯ ಕರೆದೊಯ್ಯುತ್ತವೆ. ಆದರೆ ವಾಹನ ಮಾಲೀಕರು ಸಂಚಾರಿ ನಿಯಮಗಳನ್ನು ಪಾಲಿಸದೇ ಈಗ ದಂಡ ತುಂಬುತ್ತಿದ್ದಾರೆ.

ವಾಹನದಲ್ಲಿ ಕನಿಷ್ಠ ಐದರಿಂದ ಆರು ಜನರನ್ನು ಕೂರಿಸಬಹುದು. ಆದರೆ ಇದನ್ನು ಉಲ್ಲಂಘಸಿ, 15ಕ್ಕೂ ಹೆಚ್ಚು ಮಕ್ಕಳನ್ನು ಕೂರಿಸಿದ್ದ ಒಂದು ವ್ಯಾನ್ ಹಾಗೂ 10ಕ್ಕೂ ಹೆಚ್ಚು ಮಕ್ಕಳನ್ನು ಕೂರಿಸಿದ್ದ 8 ಆಟೋ ಗಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಡ ತುಂಬಿಸಿಕೊಳ್ಳುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು