News Karnataka Kannada
Monday, May 06 2024
ಹುಬ್ಬಳ್ಳಿ-ಧಾರವಾಡ

ಸೈಕಲ್‌ ತುಳಿಯುವುದರಿಂದ ಪರಿಸರ ರಕ್ಷಣೆಯೂ ಆಗುತ್ತದೆ: ವಿಭಾಗೀಯ ಜಂಟಿ ನಿರ್ದೇಶಕಿ ಡಾ.ಪುಷ್ಪ ಎಚ್.ಆರ್

Cycling will also protect the environment: Divisional Joint Director Dr. Pushpa H.R.
Photo Credit : News Kannada

ಧಾರವಾಡ: ಆಧುನಿಕ ಜಗತ್ತಿನಲ್ಲಿ ಬಿಡಯವಿಲ್ಲದ ಕೆಲಸ, ದೈಹಿಕ ಕಾರ್ಯಚಟುವಟಿಕೆಗಳ ಉದಾಶೀನತೆಯಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಅನೇಕರು ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದಾರೆ. ಪ್ರತಿ ದಿನ ಸೈಕಲ ಬಳಸುವದರಿಂದ ಉತ್ತಮ ಆರೋಗ್ಯ ಹೊಂದಲು ಅನುಕೂಲವಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೆಳಗಾವಿ ವಿಭಾಗೀಯ ಜಂಟಿ ನಿರ್ದೇಶಕಿ ಡಾ.ಪುಷ್ಪ ಎಚ್.ಆರ್. ಹೇಳಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಧಾರವಾಡದ ಜಿಲ್ಲಾ ಎನ್.ಸಿ.ಡಿ ಘಟಕ, ಪ್ರೆಜೆಂಟೇಶನ್ ಸ್ಕೂಲ್ ಹಾಗೂ ಬೈಸಿಕಲ್ ಅಸೋಸಿಯೇಶನ ವತಿಯಿಂದ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ (ಎನ್.ಪಿ-ಎನ್.ಸಿ.ಡಿ) ದಡಿಯಲ್ಲಿ “ವಿಶ್ವ ಬೈಸಿಕಲ್ ದಿನಾಚಾರಣೆ ಅಂಗವಾಗಿ ಆರೋಗ್ಯಕ್ಕಾಗಿ ಸೈಕಲ್ ಘೋಷವಾಖ್ಯದಡಿ ಆಯೋಜಿಸಿದ್ದ ಸೈಕಲಥಾನ್ ಕಾರ್ಯಕ್ರಮಕ್ಕೆ ಹಸಿರು ಬಾವುಟ ತೋರಿ, ಚಾಲನೆ ನೀಡಿ ಮಾತನಾಡಿದರು.

ಕೋವಿಡ್ ಸಮಯದಲ್ಲಿ ಹಾಕಲಾಗಿದ್ದ ನಿಬರ್ಂಧಗಳಿಂದಾಗಿ ಜಿಮ್, ವ್ಯಾಯಾಮ್, ಸೈಕಲ್ ಬಳಕೆ ಕಡಿಮೆ ಆಗಿದೆ. ಇದರಿಂದಾಗಿ ಸಣ್ಣ ವಯಸ್ಸಿನ, ಹದಿಹರೆಯದ ಅನೇಕರು ಮಧುಮೇಹ, ಹೃದಯಾಘಾತ, ರಕ್ತದೊತ್ತಡ ಮುತಾಂದ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಅವರು ಹೇಳಿದರು.

ಅಹಿತಕರ ಆಹಾರಪದ್ಧತಿ, ದೈಹಿಕ ಶ್ರಮ ಇಲ್ಲದಿರುವುದು, ಮದ್ಯಪಾನ ಹಾಗೂ ತಂಬಾಕು ಸೇವನೆ ಅಂತಹ ವ್ಯಸನಗಳು ಅಸಾಂಕ್ರಾಮಿಕ ರೋಗಗಳ ಪ್ರಮುಖ ಅಪಾಯಕಾರಿ ಅಂಶಗಳಾಗಿವೆ. ಇವುಗಳನ್ನು ತಡೆಗಟ್ಟಲು ನಿಯಮಿತ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಿಂದ ಸೈಕಲ್ ಜಾಥಾ ಸಂಘಟಿಸುವ ಮೂಲಕ ಜನಸಾಮಾನ್ಯರಿಗೆ ಸೈಕಲ್ ಬಳಕೆಯ ಪ್ರಯೋಜನಗಳನ್ನು ಮನವರಿಕೆ ಮಾಡಲು ಪ್ರಯತ್ನಿಸಲಾಗುತ್ತದೆ ಎಂದು ಡಾ.ಪುಷ್ಪ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಪಾಟೀಲ ಶಶಿ ಮಾತನಾಡಿ, ಆರೋಗ್ಯ ಇಲಾಖೆಯ ಪ್ರಮುಖ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಮಾಹಿತಿ ತಿಳಿಸಲು, ಕಾರ್ಯಕ್ರಮ ಅಧಿಕಾರಿಗಳ ಮೂಲಕ ಐಇಸಿ ಕಾರ್ಯ ಚಟುವಟಿಕೆಗಳನ್ನು ಆದ್ಯತೆ ಮೇಲೆ ಸಂಘಟಿಸಲಾಗುತ್ತಿದೆ. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಇದೆ ಎಂದರು.

ಕಾರ್ಯಕ್ರಮ ಸಂಘಟಕರಾದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಸಾಂಕ್ರಾಮಿಕ ರೋಗಗಳ ಪತ್ತೆ ಮತ್ತು ಚಿಕಿತ್ಸೆಗಾಗಿ ಜಿಲ್ಲೆಯ ಮೂರು ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಎನ್.ಸಿ.ಡಿ.ಕ್ಲೀನಿಕ್ ಸ್ಥಾಪಿಸಲಾಗಿದೆ. ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಸ್ಕ್ರೀನಿಂಗ್, ಪಾಶ್ರ್ವವಾಯು ರೋಗಗಳ ಪತ್ತೆ ಮತ್ತು ಚಿಕಿತ್ಸೆ ಮಾಡಲಾಗುತ್ತದೆ. 30 ವರ್ಷ ಮೇಲ್ಪಟ್ಟ ಎಲ್ಲರೂ ಎನ್.ಸಿ.ಡಿ ಘಟಕದಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.

ಧಾರವಾಡ ಜಿಲ್ಲಡಯ 4 ಎನ್‍ಸಿಡಿ ಕ್ಲಿನಿಕ್‍ಗಳಲ್ಲಿ ಎಪ್ರೀಲ್-2022 ರಿಂದ ಮಾರ್ಚ-2023ರವರೆಗೆ ಒಟ್ಟು 88,163 ಜನರಿಗೆ ಸ್ಕ್ರೀನಿಂಗ್ ಮಾಡಲಾಗಿದ್ದು, ಇದರಲ್ಲಿ 799 ಜನ ಮಧುಮೇಹ ಪೀಡಿತರು, 1,618 ಜನ ಅಧಿಕ ರಕ್ತದೊತ್ತಡ ಹೊಂದಿರುವವರು ಮತ್ತು ಈ ಎರಡು ಕಾಯಿಲೆ ಇರುವ 299 ಜನ, 11 ಜನ ಪಾಶ್ರ್ವವಾಯುವ ಪೀಡಿತರು ಮತ್ತು 22 ಜನ ಹೃದಯ ಸಂಬಂಧಿ ಕಾಯಿಲೆಗಳಿರುವ ಜನರು ಪತ್ತೆಯಾಗಿದ್ದಾರೆ. ಇವರಿಗೆ ಉಚಿತವಾಗಿ ಅಗತ್ಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ನಿಯಮಿತವಾಗಿ ಆಹಾರ ಸೇವನೆ, ವ್ಯಾಯಾಮ ಮತ್ತು ಆರೋಗ್ಯಕರ ಚಟುವಟಿಕೆಗಳಲ್ಲಿ ಭಾಗವಹಿಸುವದರಿಂದ ಮತ್ತು ಸೈಕಲ್ ತುಳಿಯುವದರಿಂದ ನಾವು ಅಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು ಎಂದು ಡಾ. ಸುಜಾತಾ ಹಸವಿಮಠ ಹೇಳಿದರು.

ಈ ಸೈಕಲಥಾನ್ ಜಾಗೃತಿ ಕಾರ್ಯಕ್ರಮದಲ್ಲಿ ಎಲ್ಲ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಧಾರವಾಡ ತಾಲೂಕ ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು, ಎನ್.ಸಿ.ಡಿ ಕಾರ್ಯಕ್ರಮದ ಸಿಬ್ಬಂದಿಯವರು, ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳ ಎಲ್ಲ ಸಿಬ್ಬಂದಿ ವರ್ಗದವರು, ಪ್ರೆಜೆಂಟೇಶನ್ ಸ್ಕೂಲ್‍ನ ವಿದ್ಯಾರ್ಥಿಗಳು, ಧಾರವಾಡ ಬೈಸಿಕಲ್ ಅಸೋಸಿಯೇಶನ ಮುಖ್ಯಸ್ತರು ಹಾಗೂ ಸದಸ್ಯರು ಭಾಗವಹಿಸಿದ್ದರು.

ಸೈಕಲಥಾನ್: ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ (ಎನ್.ಪಿ-ಎನ್.ಸಿ.ಡಿ) ದಡಿಯಲ್ಲಿ “ವಿಶ್ವ ಬೈಸಿಕಲ್ ದಿನಾಚಾರಣೆ ಅಂಗವಾಗಿ ಅಸಾಂಕ್ರಾಮಿಕ ರೋಗಗಳ ಪ್ರಮುಖ ಅಪಾಯಕಾರಿ ಅಂಶಗಳಾದ ಅಹಿತಕರ ಆಹಾರಪದ್ಧತಿ, ದೈಹಿಕ ಶ್ರಮ ಇಲ್ಲದಿರುವುದು, ವ್ಯಸನಗಳಾದ ಮದ್ಯಪಾನ ಹಾಗೂ ತಂಬಾಕು ಸೇವನೆ ಮತ್ತು ನಿಯಮಿತ ಹಾಗೂ ಆರೋಗ್ಯಕರ ಜೀವನಶೈಲಿಯಿಂದ ಅಸಾಂಕ್ರಾಮಿಕ ರೋಗಗಳನ್ನು ದೂರವಿಡಬಹುದು ಮತ್ತು ವಾಯು ಮಾಲಿನ್ಯದ ದುಷ್ಪರಿನಾಮಗಳ ಕುರಿತು ಸೈಕಲಥಾನ್ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಈ ಜಾಗೃತಿ ಕಾರ್ಯಕ್ರಮವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಪ್ರಾರಂಭಗೊಂಡು ಹಳೇ ಎಸ್.ಪಿ ಸರ್ಕಲ್ ಮಾರ್ಗವಾಗಿ ಪ್ರೆಜೆಂಟೇಶನ್ ಸ್ಕೂಲ್ ಮುಂಭಾಗವಾಗಿ ಕೆ.ಸಿ.ಪಾರ್ಕ ಸುತ್ತುವರೆದು ಪೋಸ್ಟ ಆಫೀಸ್ ಮಾರ್ಗವಾಗಿ ಮರಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಲ್ಲಿ ಮುಕ್ತಾಯಗೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು