ಧಾರವಾಡ: ಧಾರವಾಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಛೇರಿಯಲ್ಲಿ ಪೋಷಣ ಅಭಿಯಾನ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಯೋಜನಾ ಸಹಾಯಕರ ಒಂದು ಹುದ್ದೆಯನ್ನು ನೇರಗುತ್ತಿಗೆ ಆಧಾರದ ಮೂಲಕ ತಾತ್ಕಾಲಿಕ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಸ್ಥಳೀಯ ಪದವಿ, ಸಮಾಜ ವಿಜ್ಞಾನದಲ್ಲಿ ಪಿ.ಜಿ ಡಿಪ್ಲೋಮಾ, ಪೌಷ್ಠಿಕತೆಯಲ್ಲಿ ಪಿ.ಜಿ ಡಿಪ್ಲೋಮಾ, 2 ವರ್ಷ ಅನುಭವ ಹಾಗೂ ಕಂಪ್ಯೂಟರ ಜ್ಞಾನವುಳ್ಳ ಅಭ್ಯರ್ಥಿಗಳು ಜೂನ್ 5 ರಿಂದ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ನಮೂನೆಯನ್ನು ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ ಕಟ್ಟಡ, ಡಿ.ಸಿ. ಕಂಪೌಂಡ, ಧಾರವಾಡ ಕಛೇರಿಗೆ ಖುದ್ದಾಗಿ ಭೇಟಿ ನೀಡಿ ಅರ್ಜಿಗಳನ್ನು ಪಡೆದು ಜೂನ್ 19 ರಂದು ಸಂಜೆ 5:30 ಗಂಟೆವರೆಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ 0836-2447850 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವುದು ಎಂದು ಮಹಿಳಾ ಮತ್ತು ಮಕ್ಕಳ ಅಭೀವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.