ಜಲಧಾರೆ ಯೋಜನೆಯಡಿ ಕುಡಿಯುವ ನೀರನ್ನು ಹಳ್ಳಿಗಳಿಗೆ ಪೂರೈಸಲಾಗುವುದು: ಪ್ರಲ್ಹಾದ ಜೋಶಿ

ಧಾರವಾಡ : ದೇಶದ ಪ್ರತಿಯೊಂದು ಗ್ರಾಮದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಲು 3 ಲಕ್ಷ 44 ಸಾವಿರ ರೂ.ಗಳ ವೆಚ್ಚದಲ್ಲಿ ಜಲ ಜೀವನ ಮಿಷನ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಜಲಧಾರೆ ಯೋಜನೆಯಡಿ ನದಿ ಮೂಲದ ನೀರನ್ನು ಎಲ್ಲಾ ಹಳ್ಳಿಗಳಿಗೆ ಪೂರೈಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಹೇಳಿದರು.

ಹೆಬ್ಬಳ್ಳಿ ಗ್ರಾಮದಲ್ಲಿ 20 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೆಬ್ಬಳ್ಳಿ-ಮೊರಬ-ಬ್ಯಾಹಟ್ಟಿ ರಸ್ತೆ ಹಾಗೂ ಜಲ ಜೀವನ್ ಮಿಷನ್ ಯೋಜನೆಯಡಿ 4 ಕೋಟಿ ರೂ.ವೆಚ್ಚದಲ್ಲಿ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಭಾರತ ಸರ್ಕಾರ,ರಾಜ್ಯ ಸರ್ಕಾರಗಳು ಹಾಗೂ ಹೊರ ಅನುದಾನ,ನೆರವಿನಿಂದ ಜಲ ಜೀವನ ಮಿಷನ್ ಅಡಿ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸಲಾಗುತ್ತಿದೆ.ಜಲಧಾರೆ ಯೋಜನೆಯಡಿ ಮಲಪ್ರಭಾ ನದಿಮೂಲದ ನೀರನ್ನು ಜಿಲ್ಲೆಯ ಪ್ರತಿ ಗ್ರಾಮಗಳಿಗೂ ಪೂರೈಸಲು ಸುಮಾರು 1100 ಕೋಟಿ ರೂ.ವೆಚ್ಚದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ,ಧಾರವಾಡ ಶಾಸಕ ಅಮೃತ ದೇಸಾಯಿ , ಹೆಬ್ಬಳ್ಳಿ ಗ್ರಾ.ಪಂ.ಅಧ್ಯಕ್ಷೆ ತೇಜಸ್ವಿನಿ ತಲವಾಯಿ,ಉಪಾಧ್ಯಕ್ಷ ವಿಠ್ಠಲ ಇಂಗಳೆ ,ಜಿಪಂ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಶೇಖರ ಮುನವಳ್ಳಿ,ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಎಸ್.ಗೌಡರ್ ಮತ್ತಿತರರು ಇದ್ದರು.

Sneha Gowda

Recent Posts

ಕೇಂದ್ರದಿಂದ ಬರ ಪರಿಹಾರ: ಅಲ್ಪ ಪ್ರಮಾಣದ ಹಣ ಕೊಟ್ಟು ಮಲತಾಯಿ ಧೋರಣೆ ಎಂದ ಕೃಷ್ಣ ಬೈರೇಗೌಡ

ನಾವು 18,000 ಕೋಟಿಗೆ ಮನವಿ ಸಲ್ಲಿಸಿದ್ದೆವು.. ಈಗ 3,400 ಕೋಟಿಯಷ್ಟು ಹಣ ಕೊಟ್ಟಿದ್ದಾರೆ. ಅಲ್ಪ ಪ್ರಮಾಣದ ಹಣ ಕೊಟ್ಟು ಮಲತಾಯಿ…

7 mins ago

ಉಡುಪಿ- ಚಿಕ್ಕಮಗಳೂರು ಲೋಕಸಭೆ ಚುನಾವಣೆ: ಸ್ಟ್ರಾಂಗ್ ರೂಂನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

ಉಡುಪಿಯ ಸೈಂಟ್ ಸಿಸಿಲೀಸ್‌ನಲ್ಲಿರುವ ಸ್ಟ್ರಾಂಗ್ ರೂಮ್ ನಲ್ಲಿ ಕ್ಷೇತ್ರದ ಹತ್ತು ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ.

24 mins ago

ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ಬಂದು ನಂಜುಂಡೇಶ್ವರನ ದರ್ಶನ ಪಡೆದ ನಟ ದುನಿಯಾ ವಿಜಯ್

ಬೆಂಗಳೂರಿನಿಂದ ನಂಜನಗೂಡಿಗೆ ಕಾಲ್ನಡಿಗೆಯಲ್ಲಿ ಹೊರಟು ನಂಜುಂಡೇಶ್ವರ ದೇವರ ದರ್ಶನವನ್ನು ನಟ ದುನಿಯಾ ವಿಜಯ್ ಪಡೆದಿದ್ದಾರೆ.

40 mins ago

ಇವಿಎಂ ಸಾಗಿಸುತ್ತಿದ್ದ ಕ್ಯಾಂಟರ್ ವಾಹನದ ಟೈರ್ ಸ್ಫೋಟ

ಇವಿಎಂ‌ ಸಾಗಿಸುತ್ತಿದ್ದ ಕ್ಯಾಂಟರ್ ವಾಹನದ ಟೈರ್ ಸ್ಫೋಟಗೊಂಡ ಘಟನೆ ಕೋಲಾರದ ವಡಗೂರ್ ಗೇಟ್ ಬಳಿ ನಡೆದಿದೆ. ಮುಳಬಾಗಿಲಿನಿಂದ ಕೋಲಾರದ‌ ಸ್ಟ್ರಾಂಗ್…

1 hour ago

ಮತ್ತೆ ತಾಳ ತಪ್ಪಿದ “ಶ್ರುತಿ” ಹಾಸನ್ ಲೈಫ್

ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್ ತಮ್ಮ ಬಹು ಕಾಲದ ಗೆಳೆಯನಿಂದ ದೂರ ಉಳಿದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಗೂಗಲ್​…

1 hour ago

ಭಾರತ ಮೂಲದ 3 ಕಂಪನಿಗಳು ಸೇರಿದಂತೆ 12ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಮೆರಿಕ ನಿರ್ಬಂಧ

ಇರಾನ್ ಜೊತೆ ವಹಿವಾಟು ಹೊಂದಿರುವ ಆರೋಪದ ಮೇರೆಗೆ ಭಾರತ ಮೂಲದ 3 ಕಂಪನಿಗಳು ಸೇರಿದಂತೆ 12ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಮೆರಿಕ…

2 hours ago