ಕೇಂದ್ರದಿಂದ ಬರ ಪರಿಹಾರ: ಅಲ್ಪ ಪ್ರಮಾಣದ ಹಣ ಕೊಟ್ಟು ಮಲತಾಯಿ ಧೋರಣೆ ಎಂದ ಕೃಷ್ಣ ಬೈರೇಗೌಡ

ಬೆಂಗಳೂರು: ನಾವು 18,000 ಕೋಟಿಗೆ ಮನವಿ ಸಲ್ಲಿಸಿದ್ದೆವು. ಈಗ 3,400 ಕೋಟಿಯಷ್ಟು ಹಣ ಕೊಟ್ಟಿದ್ದಾರೆ. ಅಲ್ಪ ಪ್ರಮಾಣದ ಹಣ ಕೊಟ್ಟು ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ ಅವರು ಬರ ಪರಿಹಾರ ಬಿಡುಗಡೆ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಕೇಂದ್ರ ಸರ್ಕಾರದ ಜೊತೆ ಮಾತುಕತೆ ಮಾಡಿದ್ದೇವೆ. ಆದರೆ ಯಾವುದೇ ಅಧಿಕೃತ ದೃಢೀಕರಣ ಆಗಿಲ್ಲ. ನಾವು ಅಧಿಕೃತ ಆದೇಶದ ನೀರಿಕ್ಷೇಯಲ್ಲಿದ್ದೇವೆ ಎಂದರು.

ಅವರ ಬಳಿ ಸಮಯ ಇದ್ದಾಗ ರಾಜ್ಯಕ್ಕೆ ಪರ ಪರಿಹಾರ ಬಿಡುಗಡೆ ಅವಕಾಶ ತೆಗೆದುಕೊಂಡಿಲ್ಲ. ನಾಲ್ಕು ತಿಂಗಳು ನಾವು ನೀಡಿದ ಪತ್ರದ ಮೇಲೆ ಕೂತಿದ್ದರು. ಕರ್ನಾಟಕದ ಹಕ್ಕಿಗೆ ಯಾವುದೇ ಬೆಲೆಯನ್ನೂ ಕೊಡಲಿಲ್ಲ. ಅವರ ಕೈಯಲ್ಲಿ ತೀರ್ಮಾನ ಇದ್ದಾಗ ರಾಜ್ಯಕ್ಕೆ ಕೊಡಬಾರದು ಅನ್ನೋ ಧೋರಣೆ ಹೊಂದಿದ್ದರು.

ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಹಣ ಬಿಡುಗಡೆ ಮಾಡಬೇಕಿತ್ತು. ಬಿಡುಗಡೆ ಮಾಡದ ಕಾರಣ ನಾವು ಕೇಂದ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರುವ ಅವಶ್ಯಕತೆ ಎದುರಾಯಿತು. ಕೋರ್ಟ್‌ನಲ್ಲಿ ಎರಡು ಬಾರಿ ಹಿಯರಿಂಗ್ ಆಗಿದೆ.

ನಾವು ಸೆಪ್ಟೆಂಬರ್‌ನಲ್ಲಿ ಪರಿಹಾರದ ಮನವಿ ಕೊಟ್ಟಿದ್ದೆವು. ಕೇಂದ್ರ ತಂಡ ಬಂದು ಅಧ್ಯಯನ ಮಾಡಿ ಹೋಗಿತ್ತು. ರಾಜ್ಯದ ಮನವಿಯನ್ನು ಕೇಂದ್ರ ತಡ ಮಾಡಿತ್ತು. ಕೇಂದ್ರದ ಸಚಿವರನ್ನು ಭೇಟಿ ಮಾಡಿದರೂ ಬಿಡುಗಡೆ ಮಾಡಿರಲಿಲ್ಲ.

ನಾವು ಮನವಿ ಕೊಟ್ಟು ಏಳು ತಿಂಗಳು ಆಗಿತ್ತು. ಕರ್ನಾಟಕದ ಮನವಿಗೆ ಗೌರವ ಕೊಡಲಿಲ್ಲ. ಅದಕ್ಕಾಗಿ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದೆವು. ಕಾನೂನಿನ ಹೋರಾಟ ಮಾಡಬೇಕಾಯಿತು. ರಾಜ್ಯದ ಮನವಿಯನ್ನು ಕೋರ್ಟ್ ಪ್ರಶ್ನೆ ಮಾಡಲಿಲ್ಲ. ನಾವು ಸಮಯಕ್ಕೆ ಸರಿಯಾಗಿ ಎಲ್ಲಾ ಮನವಿ ಮಾಡಿದೆವು.

ಕೇಂದ್ರದ ವಕೀಲರು ಮನವಿ ಮಾಡಿದರು. ನಾವು ನಿರ್ಧಾರ ಮಾಡಲು ಸಮಯ ಬೇಕು ಎಂದಿದ್ದರು. ನಮಗೆ ಹೋರಾಟದ ಮೂಲಕ ಬರ ಪರಿಹಾರ ಹಣ ಬಂದಿದೆ. ನಮಗೆ ಕಾನೂನು ಬದ್ಧವಾಗಿ ಬಂದಿರುವ ಹಣ ಇದು ಎಂದು ಹೇಳಿದರು

Chaitra Kulal

Recent Posts

ಹಾಸ್ಟೆಲ್‌ ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಮಹಾರಾಷ್ಟ್ರದ ಪುಣೆಯಲ್ಲಿರುವ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪುಣೆಯ (COEP) ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ಮಾಡಿದ ಭಾನಗಡಿ ಈಗ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರು…

5 mins ago

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿಯ ಬಡವರ ಬಂಧು, ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿರುತ್ತಾರೆ. ಗುರುವಾರ ಮುಂಜಾನೆ…

28 mins ago

ಇಂದು ಎಸ್​ಎಸ್​ಎಲ್​​ಸಿ ಫಲಿತಾಂಶ : ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು?

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ…

40 mins ago

ಡಾ. ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ನಗರದ ಕೆಎಂಸಿಯ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಿ.ಜಿ ಲಕ್ಷ್ಮಣ ಪ್ರಭು ಅವರಿಗೆ ದಿಲ್ಲಿಯ ರಾಷ್ಟ್ರೀಯ ವೈದ್ಯಕೀಯ…

52 mins ago

ಲಕ್ನೋ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ 10 ವಿಕೆಟ್​ಗಳ ಭರ್ಜರಿ ಜಯ

ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್‌ ತಂಡ…

1 hour ago

ಇಂದು ಕೊಡಗು,ಚಿಕ್ಕಮಗಳೂರು ಸೇರಿ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ರಾಜ್ಯದ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮೇ 9ರಂದು ಬಿರುಗಾಳಿಯೊಂದಿಗೆ ಗಾಳಿಯೊಂದಿಗೆ ಗುಡುಗು ಸಹಿತ ಭಾರಿ…

2 hours ago