ಬೆಳಗಾವಿ : ದೆಹಲಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಬೆಳಗಾವಿ ಶಾಸಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಬೆಳಗಾವಿ ಶಾಸಕ ಅಭಯ ಪಾಟೀಲ್ ಗೆ ಚಿಕ್ಕ ಪುಟ್ಟ ಗಾಯಗಳಾಗಿದೆ. ನಿನ್ನೆ ರಾತ್ರಿ ದೆಹಲಿಯ Pwd ಕಚೇರಿ ಬಳಿ ಕಾರ್ ಇನ್ನೊವಾ ಮಧ್ಯೆ ಡಿಕ್ಕಿಯಾಗಿದೆ.

ಇನ್ನೊವಾದಲ್ಲಿದ್ದ ಬೆಳಗಾವಿ ದಕ್ಷಿಣ ಮತಕ್ಷೇತ್ರ ಬಿಜೆಪಿ ಶಾಸಕ ಅಭಯ ಪಾಟೀಲ್, ಕಿರಾರಿ ಮತಕ್ಷೇತ್ರ ಬಿಜೆಪಿ ಶಾಸಕ ಅನಿಲ್ ಝಾಗೆ ಗಾಯವಾಗಿದೆ. ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಇನ್ನೊವಾಗೆ ಕಾರ್ ಗುದ್ದಿದೆ. ಕಾರ್ ನಲ್ಲಿದ್ದ ಆಶುತೋಷ್ ಪಾಂಡೆ, ಪತ್ನಿ ಮತ್ತಿಬ್ಬರು ಮಕ್ಕಳಿಗೂ ಗಂಭೀರ ಗಾಯಗಳಾಗಿದೆ.

ಲಕ್ಷ್ಮಿ ನಗರದಿಂದ ಐಟಿಒ ಕಡೆ ದಂಪತಿ ಕಾರು ಹೋಗುತ್ತಿತ್ತು. ಐಟಿಒದಿಂದ ಲಕ್ಷ್ಮಿ ನಗರದ ಕಡೆ ಶಾಸಕರಿದ್ದ ಇನ್ನೂವಾ ಬರುತ್ತಿತ್ತು. ತಕ್ಷಣವೇ ಎಲ್ಲರನ್ನೂ LNJP ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ.
ದೆಹಲಿಯ ಐ.ಪಿ.ಎಸ್ಟೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.