News Karnataka Kannada
Thursday, May 02 2024
ಬೆಳಗಾವಿ

ವರದಕ್ಷಿಣೆ ನೀಡಿಲ್ಲವೆಂದು ವಧುವಿಗೆ ತಾಳಿ ಕಟ್ಟದ ವರ

The groom did not tie the knot with the bride for not giving her dowry
Photo Credit : News Kannada

ಬೆಳಗಾವಿ: ವರದಕ್ಷಿಣೆ ನೀಡದ ಹಿನ್ನೆಲೆಯಲ್ಲಿ ತಾಳಿ ಕಟ್ಟುವ ಸಮಯದಲ್ಲಿ ವರ ಮದುವೆ ಬೇಡ ಎಂದ ಕಾರಣ ವಿವಾಹ ಮುರಿದುಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನಡೆದಿದೆ.

ಹಳೆ ಹುಬ್ಬಳ್ಳಿ ನಿವಾಸಿ ವರ ಸಚಿನ್ ಪಾಟೀಲ್ ಎಂಬವನೊಂದಿಗೆ ಯುವತಿಯೊಬ್ಬಳ ಮದುವೆ ನಿಶ್ಚಯವಾಗಿತ್ತು.2023ರ ಡಿಸೆಂಬರ್ 30 ರಂದು ನಡೆದ ಮದುವೆ ನಿಶ್ಚಿತಾರ್ಥ ಸಂದರ್ಭದಲ್ಲಿ 100 ಗ್ರಾಂ ಚಿನ್ನ,‌ 10 ಲಕ್ಷ ವರದಕ್ಷಿಣೆ ನೀಡುವ ಮಾತುಕತೆ ನಡೆದಿತ್ತು.

ಆದರೆ, ‌ವರದಕ್ಷಿಣೆ ನೀಡದ ಹಿನ್ನೆಲೆಯಲ್ಲಿ ತಾಳಿ ಕಟ್ಟಲು ವರ ಸಚಿನ್ ಒಲ್ಲೆ ಎಂದಿದ್ದಾನೆ. ಇದರಿಂದ ಬೆಸತ್ತ ವಧುವಿನ ಕುಟುಂಬಸ್ಥರು ಖಾನಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವರನ ವಿರುದ್ಧ ವಧು ನೀಡಿದ ದೂರಿನ ಅನ್ವಯ ಪೊಲೀಸರು, ಸಚಿನ್​ ಪಾಟೀಲ್​ನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.

ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು