Categories: ಬೆಳಗಾವಿ

ಅಕ್ರಮ ಗೋವು ಸಾಗಾಟ: 50ಕ್ಕೂ ಅಧಿಕ ಯುವಕರಿಂದ ಓರ್ವನ ಮೇಲೆ ಹಲ್ಲೆ

ಬೆಳಗಾವಿ:  50ಕ್ಕೂ ಅಧಿಕ ಮಂದಿಯಿಂದ ಓರ್ವನನ್ನ ಅಟ್ಟಾಡಿಸಿ ಹಲ್ಲೆ ಮಾಡಿದ ಘಟನೆ ಬೆಳಗಾವಿಯ ಸುವರ್ಣಸೌಧದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಅಕ್ರಮ ಗೋವುಗಳ ಸಾಗಾಟ ಆರೋಪದ ಮೇಲೆ ವ್ಯಕ್ತಿಯ ಮೇಲೆ ಹಲ್ಲೆ ಮಾಡಲಾಗಿದೆ.

ಮಹಾರಾಷ್ಟ್ರದಿಂದ ಹುಬ್ಬಳ್ಳಿಗೆ ಹೊರಟ್ಟಿದ್ದ ಲಾರಿಯಲ್ಲಿ ಸುಮಾರು 12ಕ್ಕೂ ಹೆಚ್ಚು ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ವಿಷಯ ತಿಳಿದ ಹಿಂದೂಪರ ಸಂಘಟನೆಯ 50ಕ್ಕೂ ಅಧಿಕ ಯುವಕರು ಬೆಳಗಾವಿ ಹೊರವಲಯದ ಸುವರ್ಣಸೌಧದ ಬಳಿ ಲಾರಿ ತಡೆದು ಗೋವುಗಳನ್ನ ರಕ್ಷಣೆ ಮಾಡಿದ್ದಾರೆ.

ಲಾರಿ ಚಾಲಕನ ಜೊತೆ ವಾಗ್ವಾದ ನಡೆದಿದ್ದು, ಉದ್ರಿಕ್ತರ ಗುಂಪು ಲಾರಿಗೆ ಕಲ್ಲೆಸೆದು ಗಾಜುಗಳನ್ನು ಪುಡಿ ಮಾಡಿದ್ದಾರೆ. ಇದೇ ವೇಳೆ ಚಾಲಕನ ಮೇಲೆ ಹಲ್ಲೆಯನ್ನೂ ನಡೆಸಲಾಗಿದೆ.

ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘಟನೆ ಏನೆಂಬ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ತನಿಖೆಗೆ ಮುಂದಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡ ಚಾಲಕ ಹಾಗೂ ಆತನ ಜೊತೆಗಿದ್ದ ಇನ್ನೋರ್ವನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Ashika S

Recent Posts

ಆಟವಾಡುತ್ತಿದ್ದ ಮಗುವಿಗೆ ಕಚ್ಚಿದ ಬೀದಿ ನಾಯಿ : ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ

ಆಟವಾಡುತ್ತಿದ್ದ ಮಕ್ಕಳ ಮೇಲೆ ಎರಗಿ ಬೀದಿ ನಾಯಿಗಳು ಕಚ್ಚಿದ ಘಟನೆ ಬೆಳಗಾವಿ ನ್ಯೂ ಗಾಂಧಿನಗರದಲ್ಲಿ ನಡೆದಿದೆ.

18 mins ago

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಸುಳ್ಯದ ಮುಸ್ತಾಫ ಸೆರೆ

ದೇಶವನ್ನೇ ಬೆಚ್ಚಿಬೀಳಿಸಿದ ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ. ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ…

20 mins ago

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಸುಳ್ಯದಲ್ಲಿ ಪತ್ತೆ

ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜು ಅವರನ್ನು ಪೊಲೀಸರು ಸುಳ್ಯದ ಅರಂತೋಡಿನಲ್ಲಿ ಪತ್ತೆ ಹಚ್ಚಿದ್ದಾರೆ

23 mins ago

ಪ್ಲೇ-ಆಫ್​ ರೇಸ್​ನಿಂದ ಹೊರ ಬಿದ್ದ ಪಂಜಾಬ್ ​: ಆರ್‌ಸಿಬಿ ಪಾಯಿಂಟ್ಸ್ ಎಷ್ಟು ?

ಐಪಿಎಲ್​ ಟೂರ್ನಿಯಲ್ಲಿ ಆರ್​ಸಿಬಿ ತಂಡ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ನಿನ್ನೆ ಪಂಜಾಬ್ ಕಿಂಗ್ಸ್ ತಂಡವನ್ನು 60 ರನ್​ಗಳಿಂದ ಸೋಲಿಸುವ ಮೂಲಕ,…

34 mins ago

ಉಡುಪಿ: ಇಂದಿನಿಂದ ಮೂರು ದಿನಗಳ ಕರಾವಳಿ ಕಲಾವಿದೆರ್ ತುಳು ನಾಟಕೋತ್ಸವ

ಮಲ್ಪೆಯ ಕರಾವಳಿ ಕಲಾವಿದೆರ್ ತಂಡದಿಂದ ಮೂರು ದಿನಗಳ ತುಳು ನಾಟಕೋತ್ಸವ ಇದೇ ಇಂದಿನಿಂದ (ಮೇ 10) ತೊಟ್ಟಂ ಸಾರ್ವಜನಿಕ ಗಣೇಶೋತ್ಸವ…

39 mins ago

ಇರಾನ್‌ ವಶಪಡಿಸಿಕೊಂಡ ಹಡಗಿನಲ್ಲಿದ್ದ 5 ಭಾರತೀಯ ನಾವಿಕರ ಬಿಡುಗಡೆ

ಟೆಹ್ರಾನ್ ವಶಪಡಿಸಿಕೊಂಡ ಇಸ್ರೇಲಿ-ಸಂಬಂಧಿತ ಹಡಗಿನಲ್ಲಿದ್ದ ಐವರು ಭಾರತೀಯ ನಾವಿಕರನ್ನು ಬಿಡುಗಡೆ ಮಾಡಲಾಗಿದೆ.

55 mins ago