News Karnataka Kannada
Monday, May 13 2024
ಬೆಳಗಾವಿ

ಬೆಳಗಾವಿ: ಸರ್ಕಾರಿ ನೌಕರರ ನಿಯೋಜನೆ ನಿಯಮಗಳು ಇನ್ನಷ್ಟು ಕಠಿಣ- ಸಿಎಂ ಬೊಮ್ಮಾಯಿ

The Congress government is trying to create fear among the people
Photo Credit : News Kannada

ಬೆಳಗಾವಿ, ಡಿ.22: ಸರ್ಕಾರಿ ಅಧಿಕಾರಿಗಳು ಮತ್ತು ನೌಕರರನ್ನು ಅನ್ಯ ಇಲಾಖೆಗಳಿಗೆ ನಿಯೋಜಿಸುವ ಸರ್ಕಾರದ ಕ್ರಮವನ್ನು ಅಧಿಕಾರಿ ಹಾಗೂ ನೌಕರರು ಪ್ರಭಾವ ಬಳಸಿ ಅನಗತ್ಯವಾಗಿ ಇತರೆ ಇಲಾಖೆಗಳಿಗೆ ನಿಯೋಜನೆಗೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ನಿಯೋಜನೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಸಿಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನ ಪರಿಷತ್‍ನಲ್ಲಿ ಶಾಸಕ ಮಂಜುನಾಥ ಭಂಡಾರಿಯವರು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದರು. ಸರ್ಕಾರಿ ನೌಕರರು ನಿಯೋಜನೆ ಮೇರೆಗೆ ಅನ್ಯ ಇಲಾಖೆ ತೆರಳವುದರಿಂದ ಅನೇಕ ತೊಂದರೆಗಳು ಎದುರಾಗುತ್ತವೆ. ನಿಯಮಗಳಲ್ಲಿನ ಸಡಿಲತೆಯನ್ನು ಬಳಸಿಕೊಂಡು ಅಧಿಕಾರಿಗಳು ಅನಗತ್ಯವಾಗಿ ಹೆಚ್ಚು ದಿನಗಳ ಕಾಲ ಅನ್ಯ ಇಲಾಖೆಯಲ್ಲಿ ನಿಯೋಜನೆ ಮೇರಗೆ ಮುಂದುವರಿಯುತ್ತಾರೆ. ಇದರಿಂದ ನಿಯೋಜನೆಗೊಂಡ ಇಲಾಖೆ ಮುಂಬಡ್ತಿಯಲ್ಲೂ ತೊಂದರೆಯಾಗುತ್ತದೆ. ಹೀಗಾಗಿ ಕಠಿಣ ನಿಯೋಜನೆ ನಿಯಮಗಳಲ್ಲಿ ಜಾರಿಗೆ ತರುವುದು ಅಗತ್ಯವಾಗಿದೆ.

ಗ್ರಾ,ಮೀಣಾಭಿವೃದ್ಧಿ ಇಲಾಖೆಯಲ್ಲಿ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತಿದ್ದ ಪಶುವೈಧ್ಯಾಧಿಕಾರಿಗಳನ್ನು ಮಾತೃ ಇಲಾಖೆ ಕಳುಹಿಸಲಾಗಿದೆ. ತಾಂತ್ರಿಕ ಹುದ್ದೆಗಳಲ್ಲಿ ನೇಮಕಗೊಂಡು ಆಡಳಿತಾತ್ಮಕ ಹುದ್ದೆಗಳಿಗೆ ಅಧಿಕಾರಿಗಳು ನಿಯೋಜನೆ ಮೇರಿಗೆ ತೆರಳುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು