Categories: ಬೆಳಗಾವಿ

ಮುಸ್ಲಿಂ ವರ್ತಕರಿಗೆ ನಿರ್ಬಂಧ: ಇದು ಅಸ್ಪೃಶ್ಯತೆಗೆ ಸಮಾನವಾಗಿದೆ- ಎ.ಎಚ್. ವಿಶ್ವನಾಥ್‌

ಬೆಳಗಾವಿ : ಮುಸ್ಲಿಂ ವರ್ತಕರಿಗೆ ನಿರ್ಬಂಧ ವಿಧಿಸಿರುವುದು ಅಸ್ಪೃಶ್ಯತೆ ಆಚರಣೆಯಲ್ಲದೇ ಮತ್ತೇನೂ ಅಲ್ಲ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್‌ ಅವರು ಹೇಳಿದ್ದಾರೆ.

ಭಾನುವಾರ ಗೋಕಾಕದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಾತನಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನದ ಆವರಣದಲ್ಲಿ ಮುಸ್ಲಿಮರು ವ್ಯಾಪಾರ ವಹಿವಾಟು ನಡೆಸುವುದನ್ನು ನಿಷೇಧಿಸಿರುವುದು ತರ್ಕಬದ್ಧವಲ್ಲ. ಸರಕಾರ ಮೌನ ಮುರಿದು ದೇವಸ್ಥಾನದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಜನರೇ ಕ್ರಮಕೈಗೊಳ್ಳುತ್ತಾರೆಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ‘ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್’ ಎಂಬ ಸಂದೇಶ ನೀಡಿದ್ದಾರೆ. ಆದರೆ, ನಮ್ಮ ರಾಜ್ಯ ತಪ್ಪು ಹಾದಿಯಲ್ಲಿ ಸಾಗುತ್ತಿದೆ. ದೇವಸ್ಥಾನಗಳ ಬಳಿ ಹೂವು, ಹಣ್ಣು, ಪೂಜೆ ಸಾಮಾಗ್ರಿ ಮಾರಾಟವನ್ನೇ ನಂಬಿಕೊಂಡು ಬದುಕುತ್ತಿರುವ ಮುಸಲ್ಮಾನರು ತಮ್ಮ ಜೀವನೋಪಾಯಕ್ಕೆ ಏನು ಮಾಡಬೇಕು. ಇದು ಅಸ್ಪೃಶ್ಯತೆಗೆ ಸಮಾನವಾಗಿದೆ. ಪಕ್ಷ, ಜಾತಿ, ಧರ್ಮ ಮೀರಿ ಸರ್ಕಾರ ಚಿಂತನೆ ನಡೆಸಬೇಕು ಎಂದು ತಿಳಿಸಿದ್ದಾರೆ.

ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನಿರಾಕರಿಸಿದ ಕುರಿತು ಮಾತನಾಡಿ, ‘ಕೆಲವು ಅಪರಿಚಿತ ಕೈಗಳು ತೆರೆಮರೆಯಲ್ಲಿ ಕೆಲಸ ಮಾಡುತ್ತಿವೆ, ನನ್ನನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿವೆ. ಈಗಿನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾವೇ ಕಾರಣ. ಪಕ್ಷವು ನಮ್ಮನ್ನು ಹತ್ತಿಕ್ಕಲು ಯತ್ನಿಸಿದರೆ ನಾವು ಸಹಿಸುವುದಿಲ್ಲ. ಸಿದ್ದರಾಮಯ್ಯ, ಜಾರಕಿಹೊಳಿ ಹಾಗೂ ನನ್ನನ್ನೂ ಒಳಗೊಂಡಂತೆ ಹಿಂದುಳಿದ ನಾಯಕರ ವಿರುದ್ಧದ ವಾತಾವರಣ ಇದೀಗ ರಾಜ್ಯದಲ್ಲಿ ನಿರ್ಮಾಣವಾಗುತ್ತಿದೆ ಎಂದಿದ್ದಾರೆ.

Gayathri SG

Recent Posts

ವಕೀಲರ ಸಂಘದ ಅಧ್ಯಕ್ಷರಾಗಿ ಶಿವಶರಣಪ್ಪ ಪಾಟೀಲ ಆಯ್ಕೆ

2024-25ನೇ ಸಾಲಿಗೆ ನಡೆದ ಜಿಲ್ಲಾ ವಕೀಲರ ಸಂಘದ ಚುನಾವಣೆಯಲ್ಲಿ ಶಿವಶರಣಪ್ಪ ಪಾಟೀಲ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

2 mins ago

ಈ ವಾರವೂ ಅನಿಶ್ಚಿತ ಸ್ಥಿತಿಯಲ್ಲಿ ಚಿನ್ನದ ಬೆಲೆ: ಇವತ್ತಿನ ದರ ಪಟ್ಟಿ ಹೀಗಿದೆ

ಸತತವಾಗಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು  ಕಳೆದ ವಾರ ಮಿಶ್ರ ಅನುಭವ ನೀಡಿವೆ. ಒಂದು ವಾರದಲ್ಲಿ ಚಿನ್ನದ…

20 mins ago

ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಹೃದಯಾಘಾತದಿಂದ ನಿಧನ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ (76) ಅವರು ನಿನ್ನೆ  ರಾತ್ರಿ 1.20ಕ್ಕೆ ನಿಧನರಾಗಿದ್ದಾರೆ.

38 mins ago

ನಾಳೆ ಪ್ರಚಾರ ನಿಮಿತ್ಯ ಕಲಬುರಗಿಯ ಸೇಡಂ ತಾಲೂಕಿಗೆ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಾಳೆ ಸೇಡಂಗೆ ಆಗಮಿಸಲಿದ್ದು, ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಪ್ರಚಾರ…

8 hours ago

ಅಧಿಕಾರಕ್ಕಾಗಿ ಮಾನವಿಯತೆ ಮರೆತಿದ್ದಾರೆ ಖಂಡ್ರೆ : ಭಗವಂತ ಖೂಬಾ

ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಈಶ್ವರ ಖಂಡ್ರೆ, ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೆಬೆಕೆನ್ನುವ ಉದ್ದೇಶದಿಂದ, ಮನುಷ್ಯತ್ವ, ಮಾನವಿಯತೆ ಮರೆತು ಬಿಟ್ಟಿದ್ದಾರೆ,…

8 hours ago

ಕಾಂಗ್ರೆಸ್‌ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ: ಯತ್ನಾಳ್‌

'ದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ…

8 hours ago