ಬೆಳಗಾವಿ : ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಯ ಕೊರೋನಾ ವಾರಿಯರ್ಸ್ ಗಳಾಗಿ ಕೆಲಸ ಮಾಡುತ್ತಿರೋ ಪೊಲೀಸರಿಗೆ ಕೊರೋನಾ ಶಾಕ್ ನೀಡಿತ್ತು. ಈಗ ಬೆಳಗಾವಿ ಜಿಲ್ಲೆಯ 89 ಮಂದಿ ಪೊಲೀಸರಿಗೂ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ.
ಬೆಳಗಾವಿಯಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಜೊತೆಗೆ ಪೊಲೀಸರಿಗೂ ಕೊರೋನಾ ಸೋಂಕು ತಗುಲಿತ್ತಿರೋ ಸಂಖ್ಯೆ ಏರಿಕೆಯಾಗಿದೆ. ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲೇ 39 ಪೊಲೀಸರಿಗೆ ಕೋವಿಡ್ ದೃಢಪಟ್ಟಿದೆ.
ಬೆಳಗಾವಿಯ ಎಪಿಎಂಸಿ ಠಾಣೆಯ 11 ಪೊಲೀಸರಿಗೆ, ಶಹಾಪುರ ಠಾಣೆಯ 3 ಮಂದಿಗೆ, ಟಿಳಕವಾಡಿ ಠಾಣೆಯ ಇಬ್ಬರಿಗೆ, ಒಬ್ಬರು ಇನ್ಸ್ ಪೆಕ್ಟರ್, ಇಬ್ಬರು ಪಿಎಸ್ಐ ಸೇರಿದಂತೆ 39 ಪೊಲೀಸರಿಗೆ ಕೊರೋನಾ ಸೋಂಕು ತಗುಲಿದೆ. ಇನ್ನುಳಿದಂತೆ ಜಿಲ್ಲೆಯ ಡಿಎಆರ್, ಕೆ ಎಸ್ ಆರ್ ಪಿ ಪೊಲೀಸರು ಸೇರಿದಂತೆ 89 ಪೊಲೀಸರಿಗೆ ಕೊರೋನಾ ಪಾಸಿಟಿವ್ ಎಂದು ವರದಿಯಲ್ಲಿ ತಿಳಿದು ಬಂದಿದೆ.