News Karnataka Kannada
Sunday, April 28 2024
ಬೆಳಗಾವಿ

ಎಣ್ಣೆ ಪಾರ್ಟಿಗೆಂದು ಫೋನ್ ಮಾಡಿ ಕರೆದು ಹತ್ಯೆಗೈದ ಸ್ನೇಹಿತರು

Murder Girl 16082021
Photo Credit :

ಬೆಳಗಾವಿ : ಸ್ನೇಹಿತನನ್ನು ಎಣ್ಣೆ ಪಾರ್ಟಿಗೆಂದು ಫೋನ್ ಮಾಡಿ ಕರೆದು ಹತ್ಯೆಗೈದು ಶವವನ್ನು ರಸ್ತೆ ಬದಿಯಲ್ಲಿ ಎಸೆದು ಹೋದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಶಹಪೂರಾದ ವಡಗಾವಿಯ ಸೂರಜ್ ಗೊಂದವಾಡ್ಕರ್ (23) ಕೊಲೆಯಾದ ದುರ್ದೈವಿ.

ಮನೆಯಲ್ಲಿದ್ದ ಸೂರಜ್​ಗೆ ಫೋನ್ ಮಾಡಿರುವ ಸ್ನೇಹಿತರು ಎಣ್ಣೆ ಪಾರ್ಟಿಗೆ ಆಹ್ವಾನಿಸಿದ್ದಾರೆ. ನಂತರ ಹಳೆ ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿ ಸ್ನೇಹಿತರೆಲ್ಲರೂ ಪಾರ್ಟಿ ಮಾಡಿದ್ದಾರೆ.

ಪಾರ್ಟಿ ವೇಳೆ ಕ್ಷುಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಸೂರಜ್​ಗೆ ರಾಡ್​ನಿಂದ ಹೊಡೆದು ಹತ್ಯೆಗೈದು ರಸ್ತೆ ಪಕ್ಕ ಶವ ಎಸೆದು ಪರಾರಿಯಾಗಿದ್ದಾರೆ.

ಸೂರಜ್ ಹತ್ಯೆಗೆ ಆತನ ಸ್ನೇಹಿತರೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು