ಬಾಗಲಕೋಟೆ

ಹೃದಯ ಸಂಬOಧಿ ಖಾಯಿಲೆಯ ಯುವತಿ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಟಾಪ್

ಬಾಗಲಕೋಟೆ : ಬಾಗಲಕೋಟೆ ತಾಲೂಕಿನ ಮುಚಖಂಡಿ ಗ್ರಾಮದ ವಿದ್ಯಾರ್ಥಿ ಗಂಗಮ್ಮ ಬಸಪ್ಪ ಹುಡೇದ 625 ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ರ‍್ಯಾಕ್ ಪಡೆದಿದ್ದಾಳೆ.ಆಗಿ ಹೊರಹೊಮ್ಮಿದ್ದಾಳೆ. ಆದರೆ ಆಕೆ ಹೃದಯ ಸಂಬOಧಿ ಕಾಯಿಲೆಯಿಂದ ಬಳಲುತ್ತಿರುವ ಈ ವಿದ್ಯಾರ್ಥಿನಿ ಗಂಗಮ್ಮ ಜೀವದ ಪರೀಕ್ಷೆ ಜೊತೆಗೆ ಜೀವನ ಪರೀಕ್ಷೆ ಎದುರಿಸಿ ರಾಜ್ಯಮಟ್ಟದಲ್ಲಿ ಮಿಂಚಿದ್ದಾಳೆ.

ಗOಗಮ್ಮ ಹುಡೇದ ತಂದೆ ಬಸಪ್ಪ ಇಲೆಟ್ರಿಕಲ್ ಕೆಲಸ ಮಾಡುತ್ತಾರೆ. ತಾಯಿ ಗೀತಾ ಆಶಾ ಕಾರ್ಯಕರ್ತೆ. ಸಹೋದರ ನವೀನ ದ್ವಿತೀಯ ಪಿಯುಸಿ ಓದುತಿದ್ದಾನೆ. ಮುಚಖಂಡಿ ತಾಂಡಾದ ದುರ್ಗಾದೇವಿ ಪ್ರೌಢ ಶಾಲೆಯಲ್ಲಿ 8 ರಿಂದ 10 ತರಗತಿ ಓದಿದ್ದಾಳೆ.

ಗಂಗಮ್ಮ ಹುಟ್ಟಿನಿಂದ ಹೃದಯದಲ್ಲಿ ರಂದ್ರ ಕಾಣಿಸಿಕೊಂಡು ಸಮಸ್ಯೆ ಎದುರಿಸುತ್ತಿದ್ದಾಳೆ. ಆದರು ಸಹ ಓದಿನಲ್ಲಿ ಛಲ ಬಿಟ್ಟಿಲ್ಲ. ಚಿಕ್ಕವಳು ಇದ್ದಾಗಿನಿಂದ ಕಾಯಿಲೆ, ಬಡತನವಿದ್ದರು ಸಹ ಗುರಿ ಮುಟ್ಟುವ ತವಕ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಹೃದಯ ರೋಗದ ಚಿಕಿತ್ಸೆ ಕೊಡಿಸಲು ಪಾಲಕರು ಮಹಾನಗರಗಳಿಗೆ ಅಲೆದಿದ್ದಾರೆ.ಆದರೆ ಗಂಗಮ್ಮ ಗುಣಮುಖವಾಗುವುದು ಅಸಾಧ್ಯ ಹೇಳುತ್ತಿದ್ದಾರೆ. ವಿಶ್ರಾಂತಿ ಪಡೆಯುತ್ತಲೆ ಜೀವನ ಸಾಗಿಸಲು ಸಲಹೆ ನೀಡಿದ್ದಾರೆ. ಆದರು ಕೂಡಾ ವಿದ್ಯಾರ್ಥಿ

ಗಂಗಮ್ಮ ನಿತ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ 4 ಗಂಟೆಗಳ ಕಾಲ ಓದುತ್ತಿದ್ದಳು. ಯಾವುದೇ ಟ್ಯೂಷನ್ ಇಲ್ಲದೇ ಕೇವಲ ಶಾಲೆಯಲ್ಲಿ ಶಿಕ್ಷಕರು ಮಾಡಿದ ಪಾಠವೇ ಆಕೆಗೆ ಆಧಾರವಾಗಿತ್ತು. ತೀವ್ರ ಅನಾರೋಗ್ಯವಿದ್ದರು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿದ್ದಳು. ಪರೀಕ್ಷಾ ಕೇಂದ್ರಕ್ಕೆ ಓಡಾಡಿ ಆಯಾಸವಾಗಿದ್ದರಿಂದ ಸದ್ಯ ಮನೆಯಲ್ಲಿ ಆಕ್ಸಿಜನ್ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ.

Raksha Deshpande

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

4 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

5 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

5 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

5 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

6 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

6 hours ago