ಬಾಗಲಕೋಟೆ: ಅಸ್ಸಾಂನಲ್ಲಿ ಸಿಡಿಲು ಬಡಿದು ಕರ್ನಾಟಕದ ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದ ಬಿಎಸ್ ಎಫ್ (BSF) ಯೋಧ ಹುತಾತ್ಮರಾಗಿದ್ದಾರೆ.
ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಸಿಡಿಲು ಬಡಿದು ಯೋಧ ಅಶೋಕ್ ಸಾವನ್ನಪ್ಪಿದ್ದಾರೆ. ಅಶೋಕ್ ಬಿಎಸ್ ಎಫ್ 31 ಬೆಟಾಲಿಯನ್ ಅಸ್ಸಾಂ-ಬಾಂಗ್ಲಾ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಯೋಧ ಅಶೋಕ್ ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದು, ಅಶೋಕ್ ಪಾರ್ಥೀವ ಶರೀರ ನಾಳೆ ಸ್ವಗ್ರಾಮ ಶಿರೂರಿಗೆ ಆಗಮಿಸುವ ಸಾಧ್ಯತೆ ಇದೆ.