ಸಂಭ್ರಮದಿಂದ ಜರುಗಿದ ವಕ್ರತುಂಡನ ಪ್ರತಿಷ್ಠಾನ ಕಾರ್ಯ

ಬಾಗಲಕೋಟೆ: ಬಾದ್ರಪದ ಚೌತಿಯ ದಿನವಾದ ಶುಕ್ರವಾರ ವಿಘ್ನ ವಿನಾಶಕ, ವಕ್ರತುಂಡನ ಪ್ರತಿಷ್ಠಾನ ಕಾರ್ಯ ಕೋಟೆನಾಡಿನಲ್ಲಿ ಸಂಭ್ರಮದಿಂದ ಜರುಗಿತು. ಜಿಲ್ಲಾದ್ಯಂತ ಒಟ್ಟು 1200  ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.
ಕೋವಿಡ್ ಭೀತಿ ಹಿನ್ನಲೆಯಲ್ಲಿ ಅದ್ದೂರಿ ಆಚರಣೆಗೆ ಬ್ರೇಕ್ ಬಿದ್ದಿತ್ತು. ಸಾಂಪ್ರದಾಯಕ ಆಚರಣೆ ಮೂಲಕ ಬೆಳಗ್ಗೆಯಿಂದಲೇ ಸಂಭ್ರಮ ಸಡಗರದಿಂದ ಗಣೇಶ ಪ್ರತಿಷ್ಠಾಪನಾ ಕಾರ್ಯ ಆರಂಭವಾಯಿತು. ಮೊದಲು ಭಕ್ತರು ಮನೆ ಮನೆಗಳಲ್ಲಿ ಏಕದಂತನನ್ನು ಸ್ವಾಗತಿಸಿಕೊಂಡರು. ನಂತರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಿದರು. ಈ ವೇಳೆ ಜೈ ಗಣೇಶ, ಮಂಗಲ ಮೂರ್ತಿ  ಮೊರೆಯಾ, ಗಣಪತಿ ಬಪ್ಪಾ ಮೊರೆಯಾ.. ಜೈ ಕಾರ ಹಾಕುತ್ತಾ, ಗಣೇಶ ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿತು.
ಬೆಳಗ್ಗೆ 11 ಗಂಟೆಯ ನಂತರ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ  ಪ್ರತಿಷ್ಠಾಪಣೆ ಆರಂಭಗೊಂಡು ಮಧ್ಯಾನದ ವರೆಗೆ ಜರುಗಿತು. ದೊಡ್ಡ ಗಣೇಶ ಮೂರ್ತಿಗಳಿಗೆ ನಿಷೇಧಸಿದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕ ಅಡಿ ಗಣೇಶ ಮೂತರ್ಿಗಳಿಗೆ ಮಾತ್ರ ಪ್ರತಿಷ್ಠಾಪಣೆ ಮಾಡಲಾಯಿತು. ಡಿಜೆ, ಧ್ವನಿ ವರ್ಧಕಕ್ಕೆ ಅವಕಾಶ ಇಲ್ಲದ ಕಾರಣ ಭಕ್ತರು ಭಕ್ತಿ ಗೀತೆಗಳು ಹಾಡುತ್ತಾ ಟಂ.ಟಂ, ಕ್ರೂಸರ್, ಎತ್ತಿ ಬಂಡಿಗಳಲ್ಲಿ ಸರಳ, ಸಾಂಪ್ರದಾಯಕ ಮೆರವಣಿಗೆ ನಡೆಸಿದ್ದು ವಿಶೇಷವಾಗಿತ್ತು. ಮಂಡಳಿಗಳ ಸ್ವಯಂ ಸೇವಕರು ವಕ್ರತುಂಡನಿಗೆ ಜೈಕಾರ ಕೂಗಿದರು. ಸಾರ್ವಜನಿಕರ ಗಣೇಶ ಮೂರ್ತಿಗಳು ಮೆರವಣಿಗೆ ಆಗಮಿಸುತ್ತಿದ್ದಂತೆ ಸಾರ್ವಜನಿಕರು ಮನೆಯಿಂದ ಆಚೆ ಬಂದು ಮೆರವಣಿಗೆ ವೀಕ್ಷಿಸುತ್ತಿರುವ ದೃಶ್ಯ ಕಂಡು ಬಂದಿತು.
ಪೊಲೀಸ್ ಇಲಾಖೆ ನಿದರ್ಶನದಂತೆ ವೃತ್ತಗಳು, ಬೀದಿ, ರಸ್ತೆ ಬದಿ ಹಾಗೂ ಎಲ್ಲೆಂದರಲ್ಲಿ ಸಾರ್ವಜನಿಕ ಮೂತರ್ಿ ಪ್ರತಿಷ್ಠಾಪನೆ ಮಾಡಲಿಲ್ಲ. ಬಯಲು ಪ್ರದೇಶ ಅಥವಾ ದೇವಸ್ಥಾನಗಳಲ್ಲಿ ಮಾತ್ರ ಸಾರ್ವಜನಿಕ ಮೂರ್ತಿ  ಪ್ರತಿಷ್ಠಾಪನೆ ಮಾಡಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಗರಿಷ್ಠ 4 ಅಡಿ, ಮನೆಗಳಲ್ಲಿ ಗರಿಷ್ಠ 2 ಅಡಿ ಮೂರ್ತಿ  ಪ್ರತಿಷ್ಠಾಪನೆ ಮಾಡಲಾಯಿತು. ಅನ್ನ ಸಂತರ್ಪಣೆ, ಪ್ರಸಾದ ವಿತರಣೆಗೆ ಬ್ರೇಕ್ ಬಿದ್ದಿತ್ತು. ಇನ್ನು ಕೋವಿಡ್ ಭೀತಿ ಹಿನ್ನಲೆಯಲ್ಲಿ ಗಣೇಶ ಉತ್ಸವ ಮಂಡಳಿಗಳ ಕಾರ್ಯಕರ್ತರು ಸ್ಯಾನಿಟೈಜರ್, ಮಾಸ್ಕ್ ಕಡ್ಡಾಯವಾಗಿ ಬಳಸಿದರು. ದೇವರ ದರ್ಶನಕ್ಕೆ ಪರಸ್ಪರ ಅಂತರ್ ಕಡ್ಡಾಯಗೊಳಿಸಲಾಗಿದೆ.
Raksha Deshpande

Recent Posts

ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ

ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ ಸಂಭ್ರಮದಿಂದ ನಡೆಯಿತು.

11 mins ago

ಆಧಾರ್‌ ದುರುಪಯೋಗ: ಕರ್ನಾಟಕದಿಂದ 2.95 ಲಕ್ಷ ದೂರು ದಾಖಲು

ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌…

24 mins ago

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ: ಆರೆಂಜ್, ಯೆಲ್ಲೋ ಅಲರ್ಟ್‌ ಘೋಷಣೆ

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಪ್ರತ್ಯೇಕ ಕಡೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ ಮಿಂಚು ಮತ್ತು…

41 mins ago

ಆರೋಗ್ಯದ ವೃದ್ಧಿಗೆ ಕಾಮಕಸ್ತೂರಿ ಬೀಜದ ಪಾನಕ

ಮನುಷ್ಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಅದೇ ರೀತಿ ಖಾಲಿ ಹೊಟ್ಟೆಯಲ್ಲಿ ಕಾಮಕಸ್ತೂರಿ ಬೀಜಗಳನ್ನು ಕುಡಿಯುವುದು ಬಹಳಷ್ಟು…

49 mins ago

ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ ಹೀಗಿದೆ!

ಚಿನ್ನ ಮತ್ತು ಬೆಳ್ಳಿ ಬೆಲೆ ಈ ವಾರವೂ ಏರಿಳಿತಗಳನ್ನು ಕಂಡಿದ್ದು, ಬೆಳ್ಳಿ ಬೆಲೆ ಕಳೆದ 10 ದಿನದಲ್ಲಿ ಗ್ರಾಮ್​ಗೆ 4…

1 hour ago

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆದ್ದು ಬೀಗಿದ ಆರ್​​​ಸಿಬಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್​ ಪಂದ್ಯದಲ್ಲಿ ವಿರಾಟ್…

1 hour ago