ಮಳೆ ತಗ್ಗಿದರೂ ಮುಗಿಯದ ಸಮಸ್ಯೆ

ಬಾಗಲಕೋಟೆ : ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಅಬ್ಬರಿಸುತ್ತಿದ್ದ ಘಟಪ್ರಭಾ, ಕೃಷ್ಣಾ ನದಿಗಳ ವಿರೂಟ ರೂಪ ಹಂತ ಹಂತವಾಗಿ ಕಡಿಮೆಯಾಗುತ್ತಿದ್ದು, ಆದರೇ ಪ್ರವಾಹ ಪ್ರದೇಶದಲ್ಲಿ ವ್ಯಾಪಾಕ ಪ್ರಮಾಣದಲ್ಲಿ ಗಲೀಜು, ಅಲ್ಲಲ್ಲಿ ತಗ್ಗು ಪ್ರದೇಶದಲ್ಲಿ ನೀರು ನಿಂತುಕೊಂಡ ಪರಿಣಾಮ ಜನಜೀವನ ಸಹಜ ಸ್ಥಿತಿಗೆ ಮರಳು ಸಾಧ್ಯವಾಗುತ್ತಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿರವ ಮೌನ ಆವರಿಸಿದೆ.
ಜಿಲ್ಲೆಯ ಜಮಖಂಡಿ, ರಬಕವಿ-ಬನಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ ಕೃಷ್ಣಾ ನದಿ ಹಾಗೂ ಬಾಗಲಕೋಟೆ, ಮುಧೋಳ ಭಾಗದಲ್ಲಿ ಘಟಪ್ರಭಾ ನದಿ ಪ್ರವಾಹ ತಗ್ಗಿದೆ. ಪ್ರವಾಹ ಭಯದಿಂದ ತತ್ತರಿಸಿರುವ ನಿರಾಶ್ರಿತರು ಇನ್ನು ಆಘಾತದಿಂದ ಹೊರ ಬಂದಿಲ್ಲ. ಅಕಾರಿಗಳು, ಜನಪ್ರತಿನಿಗಳು ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ ಎನ್ನುವುದು ದುರಂತ ಸಂಗತಿ. ಹೀಗಾಗಿ ಪ್ರವಾಹದ ಹೊಡೆತಕ್ಕೆ ನುಲುಗಿರುವ ಸಂತ್ರಸ್ತರು ಇನ್ನು ನೋವಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.ಸ್ಥಳಾಂತರಗೊಂಡಿರುವು 40 ಸಾವಿರಕ್ಕೂ ಹೆಚ್ಚು ನಿರಾಶ್ರಿತರಲ್ಲಿ ನೋವಿನ ಕಣ್ಣೀರ ಹರಿದು ಬರುತ್ತಿದೆ. ಜನರ ಕಷ್ಟ ಒಂದೆಡೆಯಾದರೆ, ಮೇವಿನ ಕೊರತೆಯಿಂದ ಜಾನುವಾರುಗಳ ಮೂಕವೇದನೆ ಮತ್ತಷ್ಟು ಕಂಗಡೆಸುವಂತೆ ಮಾಡಿದೆ. ನದಿ ಪಾತ್ರಗಳ ಗ್ರಾಮಗಳಲ್ಲಿ ಭಯ ಕಡಿಮೆಯಾಗುತ್ತಿಲ್ಲ.
ಪ್ರವಾಹದಿಂದ  ಜಿಲ್ಲೆಯ ಹಲವೆಡೆ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ  ಮುಕ್ತವಾಗಿಲ್ಲ. ನೀರಿನ ರಭಸಕ್ಕೆ ಸೇತುವೆಗಳು ಭಾರಿ ಪ್ರಮಾಣದಲ್ಲಿ ಡ್ಯಾಮೇಜ್ ಆಗಿದ್ದು, ಸೇತುವೆಗಳ ಮೇಲೆ ಭಯದಿಂದ ಸಂಚರಿಸುವಂತಾಗಿದೆ. ಡಾಂಬರ್, ಸಿಸಿ ರಸ್ತೆಗಳು ಕಿತ್ತುಕೊಂಡು ಹೋಗಿದ್ದು, ಜಿಲ್ಲೆಯ ವಿವಿಧ  ಭಾಗದ ಜನರಿಗೆ ಸುಗಮ ಸಂಚಾರ ಇನ್ನು ಕಷ್ಟವಾಗುತ್ತಿದೆ. ಅನೇಕ ಗ್ರಾಮಗಳು ಸಂಪರ್ಕ ಇಂದಿಗೂ ಕಡಿತಗೊಂಡಿದೆ.ಪ್ರವಾಹದ ಹೊಡೆತಕ್ಕೆ ಸರ್ಕಾರಿ  ಆಸ್ತಿ-ಪಾಸ್ತಿಗಳು ಕೂಡಾ ನಷ್ಟವಾಗಿವೆ.
Raksha Deshpande

Recent Posts

ಎಸ್‌ಐಟಿಯವರು ಅಪರಾಧಿಗಳನ್ನ ಬಂಧಿಸುತ್ತಿಲ್ಲ: ಬಸವರಾಜ ಬೊಮ್ಮಾಯಿ

ಪ್ರಜ್ವಲ್ ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿ ಇಲ್ಲ. ಎಸ್‌ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದೆ. ಅಪರಾಧಿಗಳನ್ನ ಎಸ್‌ಐಟಿಯವರು ಬಂಧಿಸುತ್ತಿಲ್ಲ. ಎಂದು…

16 mins ago

ಅಮ್ಮನ ಮೇಲಿನ ಪ್ರೀತಿಗಾಗಿ ಹೆಸರು ಬದಲಿಸಿಕೊಂಡ ವಿಜಯ್ ಸೂರ್ಯ

ತಾಯಿ ಎಂದರೆ ಮಮತೆಯ ಆಗರ, ತಾಯಿ ಎಂದರೆ ಕರುಣೆಯ ಕಡಲು, ತಾಯಿ ಎಂದರೆ ಪ್ರೀತಿಯ ಸೆಲೆ... ಹೀಗೆ ತಾಯಿಯ ಬಗ್ಗೆ…

20 mins ago

ಮಲ್ಲಿಕಾರ್ಜುನ ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪರಿಶೀಲಿಸಿದ ಚುನಾವಣಾ ಅಧಿಕಾರಿಗಳು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

45 mins ago

ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಸಂಸ್ಕಾರ ಕಲಿಸಿ : ರವಿ ಶಾಸ್ತ್ರಿ

ಮಕ್ಕಳಿಗೆ ಆಸ್ತಿ ಮಾಡಿ ಇರಿಸುವುದರ ಬದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಸಂಸ್ಕಾರವಂತರನ್ನಾಗಿ ಮಾಡಿದರೆ ಅದುವೇ ದೊಡ್ಡ ಆಸ್ತಿ ಎಂದು ಶ್ರೀ ಕೃಷ್ಣ…

1 hour ago

ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಲೋಕಾರ್ಪಣೆ

ಮಾಂಡ್ ಸೊಭಾಣ್ ಪ್ರಕಾಶನದ 22 ನೇ ಪುಸ್ತಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಉಲ್ಲಾಳ ಸೋಮೇಶ್ವರದಲ್ಲಿರುವ…

1 hour ago

ʼಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಕರಾಳ ದಿನಗಳನ್ನ ಎದುರಿಸಬೇಕಾಗುತ್ತದೆʼ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶವು ಕರಾಳ ದಿನಗಳನ್ನು ನೋಡಬೇಕಾಗಬಹುದು ಎಂದು ಶಿವಸೇನಾ…

1 hour ago