ಭಾರತ ರತ್ನ ಪಂ.ಭೀಮಸೇನ ಜೋಶಿ ಜನ್ಮ ಶತಾಬ್ಧಿ ಸಂಗೀತೋತ್ಸವ

ಬಾಗಲಕೋಟೆ: ಭಾರತ ರತ್ನ ಪಂ.ಭೀಮಸೇನ ಜೋಶಿ ಜನ್ಮ ಶತಾಬ್ಧಿ ಸಂಗೀತೋತ್ಸದ ಭೀಮಪಲಾಸ ಕಾರ್ಯಕ್ರಮ ಸೆ.12 ರಂದು ಕೋಟೆನಗರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಟಗಾರ ಸಂಗೀತ ವಿದ್ಯಾಲಯ ಸಂಚಾಲಕ, ಖ್ಯಾತ ತಬಲಾ ವಾದಕ ಕೇಶವ ಜೋಶಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಟರಾಜ ಸಂಗೀತ ವಿದ್ಯಾಲಯ, ಇನ್ಪೋಸಿಸ್ ಫೌಂಡೇಶನ್ ಸೇರಿದಂತೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಂದು ಸಂಜೆ 5 ಗಂಟೆಗೆ ಕಲಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಹಿರಿಯ ವಿದ್ವಾಂಸ ಬಿಂದುಮಾಧವಾಚಾರ್ಯ ನಾಗಸಂಪಗಿ ಉದ್ಘಾಟಿಸಲಿದ್ದಾರೆ ಎಂದು ಶನಿವಾರ ನಗರದ ಪಕ್ವಾನ್ ಹೊಟೇಲ್ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹಿರಿಯ ತಬಲಾ ವಾದಕ ಆರ್.ಎಚ್.ಮೋರೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಪಿ.ಸಿ.ಗದ್ದಿಲಿಗೌಡರ, ಜಿಲ್ಲಾಕಾರಿ ಕೆ.ರಾಜೇಂದ್ರ, ಮಾಜಿ ಶಾಸಕ ಪಿ.ಎಚ್.ಪೂಜಾರ, ಎಲ್ಐಸಿ ಬಾಗಲಕೋಟೆ ಶಾಖೆ ವ್ಯವಸ್ಥಾಪಕ ಮುರಳೀಧರ ಇಲ್ಯಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇರ್ೇಶಕಿ ಹೇಮಾವತಿ ಎನ್., ಹಿರಿಯ ಗಾಯಕ ಅನಂತ ಕುಲಕ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಭಾರತ ರತ್ನ ಪಂ.ಭೀಮಸೇನ ಜೋಶಿ ಅವರಿಗೂ ಬಾಗಲಕೋಟೆಗೂ ಅವಿನಾಭಾವ ಸಂಬಂಧವಿದೆ. ತಮ್ಮ ಬಾಲ್ಯದ ದಿನಗಳನ್ನು ಐತಿಹಾಸಿಕ ನಗರದಲ್ಲಿ ಕಳೆದಿದ್ದರು. ಇಲ್ಲಿನ ಶಾಮಾಚಾರ್ಯ ಜೋಶಿ ಅವರ ಬಳಿ ಭಕ್ತಿ, ದಾಸವಾಣಿ ಕಲಿಕೆ ಮೂಲಕ ಸಂಗೀತದ ಪಾಠ ಅವರಿಗೆ ಆರಂಭವಾಗಿತ್ತು. ನಂತರ ದೇಶವೇ ಮೆಚ್ಚುವಂತಹ ಸಂಗೀತಗಾರರಾಗಿ, ಭಾರತ ರತ್ನ ಪ್ರಶಸ್ತಿಗೂ ಭಾಜನರಾದರು. ಅವರ ಜನ್ಮ ಶತಾಬ್ಧಿ ಅಂಗವಾಗಿ ನಾಡಿನಲ್ಲಿ ವಿವಿಧ ಸರಣಿ ಸಂಗೀತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮದ ಬಳಿಕ ನಾಡಿನ ಶ್ರೇಷ್ಠ ಕಲಾವಿದ ಜಯತೀರ್ಥ ಮೇವುಂಡಿ ಗಾಯನ ಕಾರ್ಯಕ್ರಮ ನಡೆಯಲಿದೆ. ಕೇಶವ ಜೋಶಿ ತಬಲಾ, ರವೀಂದ್ರ ಕಾಟೋಟಿ ಹಾಮರ್ೋನಿಯಂ ಸಾಥ್ ನೀಡಲಿದ್ದಾರೆ. ಅಲ್ಲದೆ ಹಾರ್ಮೋರ್ಯಂ ಸೋಲೋ ಕಾರ್ಯಕ್ರಮ ಕೂಡಾ ಜರುಗಲಿದೆ. ಸಾರ್ವಜನಿಕರಿಗೆ ಮುಕ್ತವಾಗಿ ಆಗಮಿಸಬೇಕು. ಕೋವಿಡ್ ಮುಂಜಾಗೃತವಾಗಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಮನವಿ ಮಾಡಿದರು.
ಸಂಘಟಕರಾದ ವಿಷ್ಣು ಜೋಶಿ, ವಿನಯ ಕುಲಕರ್ಣಿ , ಪ್ರವೀಣ ಮಂಕಣಿ, ಶ್ರೀನಿವಾಸ ಕುಲಕರ್ಣಿ  ಸುದ್ದಿಗೋಷ್ಠಿಯಲ್ಲಿ ಇದ್ದರು.
Raksha Deshpande

Recent Posts

ಯಾರನ್ನು ಬಂಧಿಸಬೇಕೋ ಅವರನೆಲ್ಲಾ ಬಂಧಿಸಿ ಜೈಲಿಗೆ ತಳ್ಳಿ ಎಂದು ಮೋದಿಗೆ ಚಾಲೆಂಜ್‌ ಹಾಕಿದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…

10 mins ago

ಜುಲೈ 1ರಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ

ಮೂರು ಹೊಸ ಕ್ರಿಮಿನಲ್ ಕಾನೂನುಗಳು ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತೀಯ ನ್ಯಾಯ ಸಂಹಿತಾ,…

31 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಿಭವ್‌ ಕುಮಾರ್‌ 5 ದಿನ ಕಸ್ಟಡಿಗೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ದಿಲ್ಲಿ ಮುಖ್ಯಮಂತ್ರಿ…

55 mins ago

ಆರ್​ಸಿಬಿ ಮುಂದಿನ ಪಂದ್ಯವನ್ನು ಯಾವ ತಂಡದ ಜೊತೆ ಆಡಲಿದೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಸೋಲಿಸಿ ರಾಯಲ್ಲಾಗಿಯೇ ಪ್ಲೇಆಫ್​ಗೆ ಪ್ರವೇಶಿಸಿದೆ. ಇನ್ನು ಆರ್​ಸಿಬಿ…

1 hour ago

ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ

ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ ಸಂಭ್ರಮದಿಂದ ನಡೆಯಿತು.

2 hours ago

ಆಧಾರ್‌ ದುರುಪಯೋಗ: ಕರ್ನಾಟಕದಿಂದ 2.95 ಲಕ್ಷ ದೂರು ದಾಖಲು

ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌…

2 hours ago