ಪ್ರತಿ ಜಿಲ್ಲೆಯಲ್ಲಿ 500 ಎಕರೆ ಕೈಗಾರಿಕಾ ವಸಾಹತು: ಮುರುಗೇಶ ನಿರಾಣಿ

ಬಾಗಲಕೋಟೆ: ಕೃಷಿಗೆ ಯೋಗ್ಯವಿರದ ಜಮೀನು ಸ್ವಾಧೀನಪಡಿಸಿಕೊಂಡು ರಾಜ್ಯದ ಪ್ರತಿ ಜಿಲ್ಲೆಯಲ್ಲಿ 500 ಎಕರೆ ಯಲ್ಲಿ ಕೈಗಾರಿಕಾ ವಸಾಹತು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗದ್ದನಕೇರಿ-ಕೆರೂರ ಮಾರ್ಗದಲ್ಲಿ ಕೃಷಿಗೆ ಯೋಗ್ಯವಿರದ ಜಮೀನು ಸ್ವಾಧೀನಪಡಿಸಿಕೊಂಡು ಹೊಸ ಕೈಗಾರಿಕಾ ಪ್ರದೇಶ ಸ್ಥಾಪಿಸಲಾಗುವುದು. ಅದಕ್ಕಾಗಿ ಸೂಕ್ತ ಭೂಮಿ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸಲು ಯಶಸ್ವಿ ಉದ್ಯಮಿಗಳಿಗೆ ಅಗತ್ಯ ವಿರುವ ಎಲ್ಲ ಸೌಕರ್ಯ ದೊರಕಿಸಿ ಕೊಡಲು ಸಿಂಗಲ್ ವಿಂಡೋ ಸಿಸ್ಟಮ್ ವ್ಯವಸ್ಥೆ, ಉದ್ಯಮಿಗಳ ಸಮಸ್ಯೆ ನಿವಾರಣೆಗೆ ಕೈಗಾರಿಕಾ ಅದಾಲತ್, ಲ್ಯಾಂಡ್ ಬ್ಯಾಂಕ್ ನಿರ್ಮಿಸಲಾಗುವುದು. ಕೈಗಾರಿಕೆ ವಸಾಹತು ಪಕ್ಕದಲ್ಲೇ ಉದ್ಯಮಿಗಳ ವಸತಿಗೆ ನಗರಗಳನ್ನು ನಿರ್ಮಿಸಲಾಗುವುದು ಎಂದರು.

ರಾಜ್ಯದಲ್ಲಿ ಈ ಹಿಂದೆ ಎರಡು ಗ್ಲೋಬಲ್ ಮೀಟ್‌ಗಳನ್ನು ನಡೆಸಿ 15 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿ ಕೊಡಲಾಯಿತು. 2022ರಲ್ಲಿ ಇನ್ವೆಸ್ಟ್ ಕರ್ನಾಟಕ ನಡೆಸಿ ವಿಶ್ವದ ಉದ್ಯಮಿಗಳನ್ನು ಆಕರ್ಷಿಲಾಗುವುದು ಎಂದು ನಿರಾಣಿ ತಿಳಿಸಿದರು.

Sampriya YK

Recent Posts

ಮನೆಯ ಗೇಟ್ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಮೃತ್ಯು

ಮನೆಯ ಗೇಟ್ ಮುಂಭಾಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶಿರೂರು ಗ್ರಾಮದ ಹಡವಿನಕೋಣೆ ಮುದ್ರುಮಕ್ಕಿ…

2 mins ago

ಐತಿಹಾಸಿಕ ʻಹಲಗಲಿʼ ಕಥೆಗೆ ನಾಯಕನಾದ ನಟರಾಕ್ಷಸ ಧನಂಜಯ್

ಐತಿಹಾಸಿಕ ಕಥೆಯ ʻಹಲಗಲಿʼ ಸಿನಿಮಾಗೆ ನಟ ಡಾಲಿ ಧನಂಜಯ್‌ ನಾಯಕನಾಗಿ ಆಯ್ಕೆಯಾಗಿದ್ದಾರೆ. 'ಕೃಷ್ಣ ತುಳಸಿ' ಚಿತ್ರದ ಖ್ಯಾತ ಡೈರೆಕ್ಟರ್‌ ಸುಕೇಶ್‌…

3 mins ago

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ವೇಳೆ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದ ಪ್ರಯಾಣಿಕ!

ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಚೆಕ್ ಇನ್ ಮಾಡುತ್ತಿದ್ದ ವೇಳೆ ಪ್ರಯಾಣಿಕನೊಬ್ಬನ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದ ಘಟನೆ…

8 mins ago

ಮುಂಬೈನ ಮೆಕ್​ಡೊನಾಲ್ಡ್ಸ್​ಗೆ ಬಾಂಬ್​ ಬೆದರಿಕೆ

ಇತ್ತೀಚೆಗೆ ದೇಶದಾದ್ಯಂತ ಬಾಂಬ್‌ ಬೆದರಿಕೆ ಕೇಳಿಬರುತ್ತವೆ ಇದರ ಹಿಂದೆ ಯಾರ ಕೈಚಳಕವಿದೆ ಎಂದು ಇನ್ನು ಬೆಳಕಿಗೆ ಬಂದಿಲ್ಲ. ಈಗಾಗಲೇ ಶಾಲೆಗಳಿಗ,…

19 mins ago

ಅಂಜಲಿ ಅಂಬಿಗೇರ ಸಹೋದರಿ ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿಯಲ್ಲಿ ಹಂತಕನ ದಾಳಿಗೆ ಬಲಿಯಾಗಿರುವ ಅಂಜಲಿ ಅಂಬಿಗೇರ ಕುಟುಂಬಕ್ಕೆ ಭಾರಿ ಸಿಡಿಲು ಬಡಿದಿದೆ.

31 mins ago

ಪತಂಜಲಿಯ ಸೋನ್​ಪಾಪ್ಡಿ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ : ಮೂವರ ಬಂಧನ

 ಪತಂಜಲಿಯ ನವರತ್ನ ಇಲೈಚಿ ಸೋನ್ ಪಾಪ್ಡಿ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ನಂತರ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಅಧಿಕಾರಿ ಮತ್ತು ಇತರ…

36 mins ago