ಬೆಳಗಾವಿ: ಸರ್ಕಾರಿ ಬಸ್ ಹರಿದು ಬಾಲಕ ಸಾವನ್ನಪ್ಪಿರುವ ಘಟನೆ ಅಥಣಿ ಪಟ್ಟಣದ ಗಲಗಲಿ ಆಸ್ಪತ್ರೆ ಬಳಿ ನಡೆದಿದೆ. 10 ವರ್ಷದ ಸುನೀಲ್ ಬಂಡರಗರ್ ಮೃತ ಬಾಲಕ. ಗಲಗಲಿ ಆಸ್ಪತ್ರೆ ಬಳಿಯ ಸಿಸಿಟಿವಿಯಲ್ಲಿ ಅಪಘಾತದ ಭೀಕರ ದೃಶ್ಯ ಸೆರೆಯಾಗಿದೆ.

ಸುನೀಲ್ ಬಂಡರಗರ್‌ ಹಾಗೂ ಸಹಪಾಠಿಗಳು ಇಂದು ಟ್ಯೂಷನ್​​​ಗಾಗಿ ಬಂದಿದ್ದರು. ಟ್ಯೂಷನ್ ಮುಗಿಸಿ ಮೂತ್ರ ವಿಸರ್ಜನೆಗೆ ಬಂದಿದ್ದ ಸುನೀಲ್ ತನ್ನ ಗೆಳೆಯರ ಜೊತೆ ರಸ್ತೆ ಬದಿ ನಿಂತಿದ್ದರು. ಗೆಳೆಯರೊಟ್ಟಿಗೆ ರಸ್ತೆ ಬದಿ ನಿಂತಿದ್ದ ಸುನೀಲ್‌ಗೆ ಸಾರಿಗೆ ಬಸ್ ಡಿಕ್ಕಿಯಾಗಿದೆ.

ರಸ್ತೆ ಬದಿ ನಿಂತಿದ್ದ ಮಕ್ಕಳನ್ನ ಗಮನಿಸಿದ್ರೂ ಕೆಎಸ್‌ಆರ್‌ಟಿಸಿ ಚಾಲಕ ಮಕ್ಕಳ ಮೇಲೆ ಬಸ್​ ಹರಿಸಿದ್ದಾನೆ. ಸಾರಿಗೆ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕ ದಾರುಣವಾಗಿ ಸಾವನ್ನಪ್ಪಿದ್ದಾನೆ. ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಥಣಿಯಿಂದ ಕಾರವಾರಕ್ಕೆ ಹೋಗುತ್ತಿದ್ದ ಸರ್ಕಾರಿ ಬಸ್ ಇದಾಗಿದ್ದು, ಭೀಕರ ರಸ್ತೆ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.