ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ಜಿಲ್ಲೆಗೆ ಆಗಮಿಸಲಿದ್ದ ಸಂದರ್ಭವೇ ನಗರದ ಖಡಕ್  ಗಲ್ಲಿಯಲ್ಲಿ ಕಲ್ಲುತೂರಾಟ  ನಡೆದಿದೆ.

ಅನ್ಯಕೋಮಿನ ಯುವಕರ ಗುಂಪು ಕಲ್ಲುತೂರಾಟ ನಡೆಸಿ ದಾಂಧಲೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 11 ಜನರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ಖಡಕ್ ಗಲ್ಲಿಯಲ್ಲಿ ಕಲ್ಲು ತೂರಾಟದ ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಭೇಟಿ ನೀಡಿ ಶುಕ್ರವಾರ ರಾತ್ರಿ ತಾವೇ ಖುದ್ದು ಪರಿಶೀಲನೆ ನಡಿಸಿದರು. ಸ್ಥಳೀಯರು, ಪೊಲೀಸರಿಂದ ಮಾಹಿತಿ ಪಡೆದ ಬೊರಸೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಖಡಕ್ ಗಲ್ಲಿಯಲ್ಲಿ ಎರಡು ಕೋಮಿನ ಜನರ ನಡುವೆ ಘರ್ಷಣೆ ನಡೆದಿದೆ.

ಇಂದು ಒಂದು ಧಾರ್ಮಿಕ ಕಾರ್ಯಕ್ರಮ ಇತ್ತು‌. ಒಂದು ರೂಟ್ ಫಿಕ್ಸ್ ಇದೆ ಅದನ್ನ ಬಿಟ್ಟು ಬೇರೆ ರೂಟ್ ನಲ್ಲಿ ಬಂದಿದ್ದಾರೆ. ಇದನ್ನು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ ಈ ವೇಳೆ ಘರ್ಷಣೆ ಆಗಿದೆ ಎಂದರು. ಸ್ಥಳೀಯರು ಕಲ್ಲು ತೂರಾಟ ಆಗಿದೆ ಎಂದು ಕೇಸ್ ಕೊಟ್ಟಿದ್ದಾರೆ.

ಯಾರು ತಪ್ಪು ಮಾಡಿದಾರೆ ಅವರ ಮೇಲೆ ಕ್ರಮ ಆಗುತ್ತದೆ. ಯಾರಿಗೂ ಗಾಯ ಆಗಿಲ್ಲ, ಎರಡು ಕೋಮಿನ ಹಿರಿಯರು ಕೂಡಲೇ ಸರಿ ಪಡೆಸಿದ್ದಾರೆ. ಓರಿಜನಲ್ ರೂಟ್ ಬಿಟ್ಟು ಬಂದು ತಪ್ಪಾಗಿದೆ ಎಂದರು. ಐ ಲವ್ ಬ್ಯಾನರ್ ಹಾಕಿದ ಪ್ರಕರಣ‌. ಮಹಾನಗರ ಪಾಲಿಕೆ ಅವರಿಗೆ ಹೇಳುತ್ತೇವೆ. ಅನುಮತಿ ಪಡೆದು ಬ್ಯಾನರ್ ಹಾಕಲು ಸೂಚನೆ ನೀಡ್ತೇವೆ ಎಂದರು.

ಬೆಳಗಾವಿಯಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಖಡೇಬಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು 11 ಜನರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಅನುಮತಿ ಇಲ್ಲದೇ ಮಾರ್ಗದ ಬದಲಾವಣೆ, ಕಲ್ಲು ತೂರಾಟ ಆರೋಪದಡಿ ಖಡೇಬಜಾರ್ ಪೊಲೀಸರಿಂದ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಉರುಸ್ ಮೆರವಣಿಗೆ ಐ‌ ಲವ್ ಮೊಹಮ್ಮದ್ ಘೋಷಣೆ ಕೂಗಿದ್ದ ಮುಸ್ಲಿಂ ಸಮುದಾಯದ ಯುವಕರು ಖಡಕ್ ಗಲ್ಲಿಯಲ್ಲಿ ಮೆರವಣಿಗೆ ಬಂದಿದ್ದಕ್ಕೆ, ಘೋಷಣೆ‌ ಕೂಗಿದ್ದು ಇದನ್ನು ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ ನಡೆಸಿದ್ದರು. ಸದ್ಯ ಪರಿಸ್ಥಿತಿ ಹತ್ತೋಟಿಗೆ ತೆಗೆದುಕೊಂಡ ಪೊಲೀಸರು. ರಾತ್ರಿಯಿಡೀ ಗಸ್ತು ಕಾಯ್ದಿರಿಸಿದ್ದರು. ಇಂದು ಸಿಎಂ ಸಿದ್ದರಾಮಯ್ಯ ಹಿನ್ನೆಲೆ ಹೆಚ್ಚಿನ ನಿಗಾ ವಹಿಸಿರುವ ಪೊಲೀಸರು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.