ಬಳ್ಳಾರಿ: ಆಂಧ್ರದ ಆಲೂರು ಮಂಡಲದ ನೇರಣಿಕೆ ಗುಡ್ಡದ ಮಲ್ಲಯ್ಯನ ಜಾತ್ರೆಯಲ್ಲಿ ನಡೆಯುವ ಬಡಿಗೆ ಕಾಳಗದಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಆಲೂರಿನ ಪೋತರಾಜು (30) ಸಾವನ್ನಪ್ಪಿದ ಭಕ್ತ. ಇನ್ನೂ 100 ಜನರು ಗಾಯಗೊಂಡಿದ್ದು, ಎಂಟು ಜನರ ಸ್ಥಿತಿ ಗಂಭೀರವಾಗಿದೆ. ಪ್ರತಿ ವರ್ಷ ವಿಜಯ ದಶಮಿಯಂದು ರಾತ್ರಿ ಉತ್ಸವ ಮೂರ್ತಿಯನ್ನ ತಮ್ಮ ಊರಿಗೆ ಕೊಂಡೊಯ್ಯಲು ಬಡಿಗೆ ಕಾಳಗ ನಡೆಯುತ್ತದೆ.
ಅದರಂತೆ ನಿನ್ನೆ (ಅ.21) ರಾತ್ರಿ ಗುಡ್ಡದ ಮಲ್ಲಯನ ಜಾತ್ರೆಯಲ್ಲಿ ದಂಡ ಕಾಳಗ ನಡೆಯುವಾಗ ರಕ್ತದೋಕುಳಿ ಹರಿದಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇನ್ನೂ ಹಲವರು ಗಾಯಗೊಂಡಿದ್ದು, ಆಲೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಡಿಗೆ ಬಡಿದಾಟ ತಡೆಯಲು ಯತ್ನಿಸಿದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದು, ಕೆಲ ಪೊಲೀಸರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಆಂಧ್ರದ ಆಲೂರು ಮಂಡಲದ ನೇರಣಿಕೆ ಗುಡ್ಡದ ಮಲ್ಲಯ್ಯನ ಕಾರ್ಣಿಕದಲ್ಲಿ ಆಂಧ್ರ ಹಾಗೂ ಕರ್ನಾಟಕದ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ.
ಈ ಬಾರಿ ಮಲ್ಲಿಗೆ ಹೂವಿನಿಂದ ಗಂಗೆ ನಿಂತ್ತಾಳ. 7,900 ನಗಳ್ಳಿ, 3,400 ಒಕ್ಕಲು ಜೋಳ, ಮೂರು, ಆರು, ಆರು ವರುಣಾದಿತು ಎಂದು ಕಾರ್ಣಿಕದಲ್ಲಿ ಗುಡ್ಡದ ಮಲ್ಲಯ್ಯ ಎಚ್ಚರಕೆ ಕೊಟ್ಟಿದ್ದ. ಪ್ರತಿ ವರ್ಷವೂ ಪ್ರಕೃತಿ ಹಾಗೂ ರೈತರ ಬಗ್ಗೆ ಗುಡ್ಡದ ಮಲ್ಲಯ್ಯ ಕಾರ್ಣಿಕ ನುಡಿಯುತ್ತಾನೆ.

