ಬಳ್ಳಾರಿ: ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಸಿರಗುಪ್ಪ ತಾಲೂಕಿನ ಸಿಂಧನೂರ ಗ್ರಾಮದಲ್ಲಿ ನಡೆದಿದೆ.
ಬಿಹಾರ ಮೂಲದ ಆರೋಪಿ ಕಪಾಲ್ ಪಾಸ್ವಾನಿ (38) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿ ಕಪಾಲ್ ಗೂಡಂಗಡಿಯಲ್ಲಿ ಚಾಕೊಲೇಟ್ ಮಾಡುತ್ತಿದ್ದನು.
ಈ ಖಚಿತ ಮಾಹಿತಿ ಮೇರೆಗೆ ಅಬಕಾರಿ ಸಿಬ್ಬಂದಿಗಳು ಗೂಡಂಗಡಿಗೆ ದಾಳಿ ಮಾಡಿದ್ದು, 2,600 ಮೌಲ್ಯದ ಗಾಂಜಾ ಮಿಶ್ರಿತ ಚಾಕೊಲೇಟ್ ಜಪ್ತಿ ಮಾಡಲಾಗಿದೆ. ಪ್ರಕರಣ ಸಿರಗುಪ್ಪ ಅಬಕಾರಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

