ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಮುಡಾ ಆರೋಪದಿಂದ ಮುಕ್ತರಾಗಲಿ ಎಂದು ಅಭಿಮಾನಿ ದೇವರಿಗೆ ಹರಕೆ ಹೊತ್ತಿದ್ದಾರೆ. ಅವರಿಗೆ ಬಂದ ಎಲ್ಲ ಕಂಟಕ ದೂರ ಆಗಲಿ ಎಂದು ಸಿದ್ದರಾಮಯ್ಯ ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.

ಹತ್ತು ಕಿಮೀ ದೀರ್ಘನಮಸ್ಕಾರವನ್ನು ಅಭಿಮಾನಿ ಹಾಕಿದ್ದಾರೆ. ಸಂಗಮ ಕ್ರಾಸ್ ನಿಂದ ಕೂಡಲಸಂಗಮವರೆಗೆ ದೀರ್ಘನಮಸ್ಕಾರ ಹಾಕುತ್ತಾ ಅಭಿಮಾನಿ ಹೊರಟಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಸಂಗಮ ಕ್ರಾಸ್ ನಿಂದ ಕೂಡಲಸಂಗಮ ತಲುಪಿ ಬಸವಣ್ಣನ ಐಕ್ಯಮಂಟಪ ಹಾಗೂ ಸಂಗಮನಾಥ ದೇಗುಲದಲ್ಲಿ ಅಭಿಮಾನಿ‌ ಪೂಜೆ ಸಲ್ಲಿಸಿದ್ದಾರೆ.

ಶ್ರೀಶೈಲ ವಾಲಿಕಾರ ಎಂಬ ಸಿದ್ದು ಅಭಿಮಾನಿಯಾಗಿದ್ದು, ವಿಜಯಪುರ ಜಿಲ್ಲೆ ಯರನಾಳ ಗ್ರಾಮದ ನಿವಾಸಿ‌ ಶ್ರೀಶೈಲ್ ವಾಲಿಕಾರ‌‌ ಮೈಮೇಲೆ ಹಸ್ತದ ಬಟ್ಟೆ,ಕಾಂಗ್ರೆಸ್ ಶಾಲು ಧರಿಸಿ ದೀರ್ಘನಮಸ್ಕಾರ ಅಭಿಮಾನಿ ಹಾಕಿದ್ದಾರೆ.