ಕಾಸರಗೋಡು: ಬೈಕ್ ಮತ್ತು ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ರೋರ್ವರು ಮೃತಪಟ್ಟ ಘಟನೆ ಪಡನ್ನಕ್ಕಾಡ್ ಎಂಬಲ್ಲಿ ನಡೆದಿದೆ.

ಹೊಸದುರ್ಗ ಪೊಲೀಸ್ ಠಾಣೆ ಯ ಪೊಲೀಸ್ ಕಾನ್ಸ್ ಟೇಬಲ್ ವಿನೀಶ್ (35) ಮೃತಪಟ್ಟವರು. ಕರಿವೆಳ್ಳೂರಿನ ಮನೆಯಿಂದ ಕರ್ತವ್ಯಕ್ಕೆ ಠಾಣೆ ಗೆ ಬೈಕ್ ನಲ್ಲಿ ಬರುತ್ತಿದ್ದಾಗ ಪಡನ್ನ ಕ್ಕಾಡ್ ರೈಲ್ವೆ ಮೇಲ್ಸೇತುವೆ ಯಲ್ಲಿ ನೀಲೇಶ್ವರ ಕಡೆಯಿಂದ ಕಾಞಿಂಗಾಡ್ ಕಡೆಗೆ ಬರುತ್ತಿದ್ದ ಟ್ಯಾಂಕರ್ ಲಾರಿ ಹಾಗೂ ಬೈಕ್ ನಡುವೆ ಅಪಘಾತ ನಡೆದಿದೆ. ತಲೆಗೆ ಗಂಭೀರ ಸ್ವರೂಪದ ಗಾಯಗೊಂಡ ಇವರನ್ನು ಆಸ್ಪತ್ರೆಗೆ ತಲುಪಿದರೂ ಜೀವ ಉಳಿಸಲಾಗಲಿಲ್ಲ.