ಢಾಕ : ಬಾಂಗ್ಲದೇಶದಲ್ಲಿ ತೀವ್ರ ಹಿಂಸಾಚಾರ ಮುಂದುವರೆದಿದ್ದು, ಈ ಹಿನ್ನಲೆ ಪ್ರಾಧಾನಿ ಶೇಖ್‌ ಹಸೀನಾ ರಾಜೀನಾಮೆ ನೀಡಿದ ನಂತರ ಶೇರ್ಪುರ್‌ ಜೈಲಿನಿಂದ ಭಾರೀ ಪ್ರಮಾಣದಲ್ಲಿ ಕೈದಿಗಳು ಪರಾರಿಯಾಗಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.

ಸೋಮವಾರ (ಆಗಸ್ಟ್‌ 05) ಮಧ್ಯಾಹ್ನ ಈ ಘಟನೆ ನಡೆದಿದ್ದು, ಕನಿಷ್ಠ 518 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಜೀ ನ್ಯೂಸ್‌ ವರದಿ ಪ್ರಕಾರ, ಹಲವರು ಶಸ್ತ್ರಸ್ತ್ರಾ ಸಹಿತ ಎಸ್ಕೇಪ್‌ ಆಗಿರುವುದಾಗಿ ವಿವರಿಸಿದೆ.

ಭಾರತ-ಬಾಂಗ್ಲಾದೇಶ ಗಡಿಯಿಂದ ಸುಮಾರು 100 ಕಿಲೋ ಮೀಟರ್‌ ದೂರದಲ್ಲಿರುವ ಶೇರ್ಪುರ್‌ ಸೆಂಟ್ರಲ್‌ ಜೈಲಿನಿಂದ ಕೈದಿಗಳು ಪರಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತ ಗಡಿ ಭಾಗದಲ್ಲಿ ಬಿಗು ಭದ್ರತೆಯನ್ನು ಕೈಗೊಂಡಿದೆ.