ಬೆಂಗಳೂರು: ಇಂದು ದ್ವಿತೀಯ ಪಿಯು ಮೊದಲ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳಂತೂ ಈ ಬಗ್ಗೆ ಭಾರೀ ಕುತೂಹಲದಲ್ಲಿದ್ದು, ರಿಸಲ್ಟ್ಗಾಗಿ ಕಾಯುತ್ತಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 1ರಿಂದ 22ರವರೆಗೆ ನಡೆದಿತ್ತು. ಇದೀಗ ಏಪ್ರಿಲ್ 10ರಂದು ಫಲಿತಾಂಶ ಹೊರಬೀಳಲಿದೆ. ಈ ಬಗ್ಗೆ ಬೆಳಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದೆ. 11 ಗಂಟೆಯ ಬಳಿಕ ವೆಬ್ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.
https://karresults.nic.in ಜಾಲತಾಣದಲ್ಲಿ ಪರೀಕ್ಷಾ ಫಲಿತಾಂಶ ಸಿಗಲಿದೆ. 11 ಗಂಟೆ ಬಳಿಕ ವೆಬ್ ಸೈಟ್ ಅಲ್ಲಿ ರಿಸಲ್ಟ್ ನೋಡಲು ಅವಕಾಶವಿದೆ.