News Karnataka Kannada
Friday, May 17 2024
ಕರ್ನಾಟಕ

2020ರಿಂದ ಕೈಗಾ 5 ಮತ್ತು 6ನೇ ಘಟಕ ಕಾರ್ಯಾರಂಭ

Photo Credit :

2020ರಿಂದ ಕೈಗಾ 5 ಮತ್ತು 6ನೇ ಘಟಕ ಕಾರ್ಯಾರಂಭ

ಕಾರವಾರ: ದೇಶದ ಬೃಹತ್ ಯೋಜನೆಗಳಲ್ಲಿ ಒಂದಾಗಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೈಗಾದಲ್ಲಿ 700 ಮೆಗಾ ವ್ಯಾಟ್ ಸಾಮರ್ಥ್ಯದ ಎರಡು ಹೊಸ ಘಟಕಗಳ ನಿರ್ಮಾಣ ಕಾಮಗಾರಿ 2020ರಿಂದ ಆರಂಭಗೊಳ್ಳಲಿದೆ ಎಂದು ಕೈಗಾ 3-4ನೇ ಘಟನೆ ನಿರ್ದೇಶಕ ಜೆ. ಆರ್. ದೇಶಪಾಂಡೆ ಹೇಳಿದರು.

ಅವರು ಕಾರವಾರದ ಕೈಗಾದ ಅಣುವಿದ್ಯುತ್ ಸ್ಥಾವರದ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೂತನ ಸ್ಥಾವರಕ್ಕೆ ಕೇಂದ್ರ ಸರ್ಕಾರ ಆಡಳಿತಾತ್ಮಕ ಮತ್ತು ಆರ್ಥಿಕ ಮಂಜೂರಾತಿ ಲಭಿಸಿದೆ. ಪರಿಸರ ಸಂಬಂಧಿ ಅಧ್ಯಯನಗಳು ಸಹ ಮುಕ್ತಾಯವಾಗಿದ್ದು 5 ಮತ್ತು 6ನೇ ಘಟಕಗಳು 2026ರಲ್ಲಿ ಅಣುವಿದ್ಯುತ್ ಉತ್ಪಾದನೆ ಆರಂಭಿಸಲಿವೆ. 1400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಿದೆ.

ನೂತನ ಘಟಕಗಳಿಂದ ಉತ್ಪಾದನೆಯಾದ ಅಣು ವಿದ್ಯುತ್‌ನಲ್ಲಿ ಕರ್ನಾಟಕಕ್ಕೆ ಶೇ.50ರಷ್ಟು ಅಂದರೆ 700 ಮೆಗಾವ್ಯಾಟ್ ವಿದ್ಯುತ್ ಕೈಗಾದಿಂದ ಲಭ್ಯವಾಗಿದ್ದು, ಇದರಿಂದ ರಾಜ್ಯದ ಆರ್ಥಿಕ ಅಭಿವೃದ್ಧಿಗೆ, ಕೈಗಾರಿಕೆ ಸೇರಿದಂತೆ ವಿದ್ಯುತ್ ಬೇಡಿಕೆ ಪೂರೈಕೆಗೆ ನೆರವಾಗಲಿದೆ ಎಂದರು.

ಘಟಕದ ಸ್ಥಾಪನೆಯಿಂದ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಕೈಗಾದಲ್ಲಿ ಅಣುಸ್ಥಾವರ ನಿರ್ಮಿಸಲು 1987ರಲ್ಲೇ ಯೋಜನೆ ರೂಪುಗೊಂಡಾಗ 6 ಘಟಕಗಳ ಸ್ಥಾಪನೆಗೆ ಪರಿಸರ ಅನುಮತಿ ಪಡೆಯಲಾಗಿತ್ತು. ಕೈಗಾ ಬಳಿ ಅಣುಸ್ಥಾವರದಲ್ಲಿ 220 ಮೆಗಾ ವ್ಯಾಟ್ ಸಾಮರ್ಥ್ಯದ ಆರು ಘಟಕ ಸ್ಥಾಪಿಸಲು ಮೊದಲು ಯೋಜಿಸಲಾಗಿತ್ತು. ಸರ್ಕಾರ 1665 ಹೆಕ್ಟೇರ್ ಭೂಮಿಯನ್ನು ಆಗಲೇ ನೀಡಲಾಗಿತ್ತು. ಸ್ಥಾಪನೆಗೆ ಬೇಕಾದ 54.09 ಹೆಕ್ಟೇರ್ ಭೂಮಿ ನಮ್ಮ ಬಳಿ ಇದ್ದು, ಹೆಚ್ಚುವರಿ ಭೂಮಿ ಬೇಕಾಗಿಲ್ಲ. ಯಾವುದೇ ಭೂಮಿಯನ್ನು ಹೆಚ್ವುವರಿಯಾಗಿ ಸ್ವಾಧೀನ ಮಾಡಿಕೊಳ್ಳುವುದಿಲ್ಲ. ಶೇ.38 ಉತ್ತರಕನ್ನಡ ಜಿಲ್ಲೆಯ ಜನ ಹಾಗೂ ರಾಜ್ಯದ ಶೇ.68ರಷ್ಟು ಜನರು ನೌಕರಿಯಲಿದ್ದಾರೆ. ಮುಂದಿನ ದಿನದಲ್ಲಿ ಅಣುವಿದ್ಯುತ್ ಘಟಕವೇ ದೇಶಕ್ಕೆ ವಿದ್ಯುತ್ ಉತ್ಪಾದನೆಯೇ ಪರ್ಯಾಯ ವ್ಯವಸ್ಥೆಯಾಗಲಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು