ಬೆಂಗಳೂರು: ಭಾರತ ಆಗಸ್ಟ್ 15 ಗುರುವಾರದಂದು 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಜ್ಜಾಗಿದೆ. ನಾಳೆ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಪದಕ ಘೋಷಿಸಿದೆ. ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಕೇಂದ್ರ ಗೃಹ ಸಚಿವಾಲಯ ರಾಜ್ಯದ 20 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ.
ಐಎಸ್ ಡಿ, ಎಡಿಜಿಪಿ ಎಂ ಚಂದ್ರಶೇಖರ್ ಹಾಗೂ ಬಸವಲಿಂಗಪ್ಪ, ಸೀನಿಯರ್ ಕಮಾಂಡರ್, ಅಗ್ನಿಶಾಮಕ ದಳ ಇಬ್ಬರು ಅಧಿಕಾರಿಗಳಿಗೆ ಅತ್ಯುತ್ತಮ ಸೇವಾ ಪದಕ ಘೋಷಣೆ ಮಾಡಲಾಗಿದೆ. ಇನ್ನುಳಿದ 18 ಮಂದಿ ಅಧಿಕಾರಿ ಸಿಬ್ಬಂದಿಗೆ ಅರ್ಹ ಸೇವಾ ಪದಕ ಘೋಷಣೆ ಮಾಡಲಾಗಿದೆ.
ಬಸವಲಿಂಗಪ್ಪ, ಸೀನಿಯರ್ ಕಮಾಂಡರ್, ಅಗ್ನಿಶಾಮಕ ದಳ
ಶ್ರೀನಾಥ್ ಎಂ ಜೋಶಿ, ಎಸ್ ಪಿ ಲೋಕಾಯುಕ್ತ
ಸಿ ಕೆ ಬಾಬಾ, ಎಸ್ ಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ.
ರಾಮಗೊಂಡ ಬೈರಪ್ಪ, ಎಎಸ್ ಪಿ ಕರ್ನಾಟಕ
ಗಿರಿ ಕೃಷ್ಣಮೂರ್ತಿ, ಡಿಎಸ್ ಪಿ.
ಪಿ ಮುರಳೀಧರ್, ಡಿಎಸ್ ಪಿ.
ಬಸವೇಶ್ವರ, ಅಸಿಸ್ಟೆಂಟ್ ಡೈರೆಕ್ಟರ್.
ಬಸವರಾಜು ಕಮ್ತಾನೆ, ಡಿಎಸ್ ಪಿ.
ರವೀಶ್ ನಾಯಕ್, ಎಸಿಪಿ.
ಶರತ್ ದಾಸನಗೌಡ, ಎಸ್ ಪಿ.
ಪ್ರಭಾಕರ್ ಗೋವಿಂದಪ್ಪ, ಎಸಿಪಿ.
ಗೋಪಾಲ್ ರೆಡ್ಡಿ, ಡಿಸಿಪಿ.
ಬಿ.ವಿಜಯ್ ಕುಮಾರ್, ಹೆಡ್ ಕಾನ್ಸ್‌ಟೇಬಲ್.
ಮಂಜುನಾಥ ಶೇಕಪ್ಪ ಕಲ್ಲೆದೇವರ್, ಸಬ್ ಇನ್ಸ್‌ಪೆಕ್ಟರ್.
ಹರೀಶ್ ಎಚ್ ಆರ್, ಅಸಿಸ್ಟೆಂಟ್ ಕಮಾಂಡೆಂಟ್.
ಎಸ್ ಮಂಜುನಾಥ, ಇನ್ಸ್‌ಪೆಕ್ಟರ್
ಗೌರಮ್ಮ ಜಿ. ಎಎಸ್ಐ.
ಮಹಿಬೂಬಸಾಹೇಬ ನೂರಮಹಮದ್ ಮುಜಾವರ್, ಹೆಡ್ ಕಾನ್‌ಸ್ಟೆಬಲ್
ಹೋಮ್ ಗಾರ್ಡ್ ಮತ್ತು ಸಿವಿಲ್ ಡಿಫೆನ್ಸ್ :
ವಿಜಯಕುಮಾರ್ ಎನ್, ಕಂಪನಿ ಕಮಾಂಡರ್, ಕರ್ನಾಟಕ
ರೇವಣಪ್ಪ ಬಿ, ಪ್ಲಟೂನ್ ಕಮಾಂಡರ್, ಕರ್ನಾಟಕ
ಡಾ.ಸತೀಶ ಯಲ್ಲಂಸಾ ಇರಕಲ್, ಸಿಬ್ಬಂದಿ ಅಧಿಕಾರಿ, ಕರ್ನಾಟಕ
ಡಾ. ಮುರಳಿ ಮೋಹನ್ ಚೂಂತಾರು, ಕಮಾಂಡೆಂಟ್, ಕರ್ನಾಟಕ
ಇವರಿಗೆ ಪದಕ ಪ್ರದಾನ ವಾಗಲಿದೆ.

