Categories: ಕರ್ನಾಟಕ

ಹಣ, ಹೆಂಡದಿಂದ ಬಿಜೆಪಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ: ಶಾಸಕ ಧರ್ಮೇಗೌಡ

ಚಿಕ್ಕಮಗಳೂರು: ಈ ಬಾರಿ ಚಿಕ್ಕಮಗಳೂರು ವಿದಾನಸಭಾ ಕ್ಷೇತ್ರದಲ್ಲಿ ಜೆ ಡಿ ಎಸ್ ಅಭ್ಯರ್ಥಿ ಗೆಲುವು ಸಾಧಿಸಿದರೆ, ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರೆ ಕೇವಲ ಮೂರು ತಿಂಗಳಿನಲ್ಲಿ ಏನೇ ಆದರೂ ಬಿಡದೇ ಕರಗಡ ಕುಡಿಯುವ ನೀರಿನ ಕಾಮಗಾರಿಯನ್ನು ಪೂರ್ಣಗೊಳಿಸಿ ಬಯಲು ಸೀಮೆಗೆ ನೀರು ಹರೀಸೇ ತೀರುತ್ತೇನೆ ಎಂದು ಮಾಜಿ ಶಾಸಕ ಎಸ್ ಎಲ್ ಧರ್ಮೇಗೌಡ ಘೋಷಿಸಿದರು.

ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ನಡೆದ ಬಯಲು ಸೀಮೆ ಭಾಗದ ಜೆ ಡಿ ಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಣ, ಹೆಂಡದಿಂದ ಈ ಬಾರಿ ಬಿ ಜೆ ಪಿ ಚುನಾವಣೆ ಗೆಲ್ಲಲು ಸಾದ್ಯವಿಲ್ಲ, ನಮ್ಮ ತಂದೆ ಲಕ್ಷ್ಮಯ್ಯನವರು ಚುನಾವಣೆಗೆ ನಿಂತಿದ್ದಾಗೆ ಜಾತಿ ಇಲ್ಲ, ಹಣ ಇಲ್ಲಾ, ಇವರೆಲ್ಲಿ ಗೆಲ್ಲುತ್ತಾರೆ ಎಂದು ಅಪಹಾಸ್ಯ ಮಾಡಿದ್ದರು, ನಾನು ಚುನಾವಣೆಗೆ ಸ್ಪರ್ದಿಸೀದಾಗಲು ಇವನೆಲ್ಲಿ ಎಂ ಎಲ್ ಎ ಆಗುತ್ತಾನೆ ಎಂದು ನಗಾಡಿದ್ದರು ಆದರೆ ನಾನು ಮತ್ತು ನನ್ನ ತಂದೆ ಹಣವಿಲ್ಲದೆ ಗೆದ್ದು ಬಂದೆವು, ಅದೇ ರೀತಿ ಹಣ ಹೆಂಡವಿಲ್ಲದೆ ನಮ್ಮ ಅಭ್ಯರ್ಥಿಯು ಈ ಬಾರಿ ಗೆಲ್ಲುತಾರೆ ಎಂದು ಹೇಳಿದರು ರಾಜ್ಯ ಉಪಾದ್ಯಕ್ಷ ಹೆಚ್ ಹೆಚ್ ದೇವರಾಜ್ ಮಾತನಾಡಿದರು.

ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿಯಲ್ಲಿ ಕ್ಷುಲ್ಲಕ ರಾಜಕಾರಣ ಮತ್ತು ಹಣ ಹೊಡೆಯುವ ಮೂಲಕ ಕಾಂಗ್ರೇಸ್, ಬಿ ಜೆ ಪಿ ಶಾಸಕರು ಬಯಲು ಸೀಮೆಯ ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.

ಹದಿನೈದು ವರ್ಷಗಳಿಂದ ಬಯಲು ಸೀಮೆಯ ಜನರಿಗೆ ಕುಡಿಯಲು ನೀರು ಒದಗಿಸದ ಶಾಸಕ ಸಿ ಟಿ ರವಿಯವರು ಜೆ ಡಿ ಎಸ್ ಅಭ್ಯರ್ಥಿ ಬಿ ಹೆಚ್ ಹರೀಶ್ ಅವರು ಟ್ಯಾಂಕರ್ ಗಳಲ್ಲಿ ನೀರು ವಿತರಿಸಲು ಆರಂಬಿಸಿದ ನಂತರ ಎಚ್ಚೆತ್ತು ಇದೀಗ ಅವರೂ ಟ್ಯಾಂಕರ್ ಗಳಿಗೆ ಬಿ ಜೆ ಪಿ ಬ್ಯಾನರ್ ಹಾಕಿಕೊಂಡು ನೀರು ವಿತರಿಸಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಚುನಾವಣೆಯಲ್ಲಿ ಸೋಲುವ ಭಯದಿಂದ ಶಾಸಕ ಸಿ ಟಿ ರವಿಯವರಿಗೆ ಇದೀಗ ಬಿ ಎಸ್ ಯಡಿಯೂರಪ್ಪ ನೆನಪಾಗಿದ್ದಾರೆ ಅದಕ್ಕಾಗಿ ತಮ್ಮ ರಾಜಕೀಯ ಗುರು ಅನಂತ ಕುಮಾರ್ ಭಾವಚಿತ್ರವನ್ನು ಬಿಟ್ಟು ರವಿಯವರು ಯಡಿಯೂರಪ್ಪನವರ ಭಾವ ಚಿತ್ರವನ್ನು ಹಾಕುತ್ತಿದ್ದಾರೆ ಎಂದು ಟೀಕಿಸಿದರು,

Desk

Recent Posts

ಆರ್​ಸಿಬಿಗೆ ಟ್ವೀಟ್​ ಮೂಲಕ ವಿಜಯ್​ ಮಲ್ಯ ಅಭಿನಂದನೆ

ಶನಿವಾರ ತಡರಾತ್ರಿ ನಡೆದ ಐಪಿಎಲ್​ನ ರೋಚಕ ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಹಾಲಿ ಚಾಂಪಿಯನ್​…

3 mins ago

ತಾಯಿಯ ಶವದ ಜೊತೆಗೆ ನಾಲ್ಕು ದಿನ ಕಳೆದಿದ್ದ ಬುದ್ಧಿಮಾಂದ್ಯ ಪುತ್ರಿಯೂ ಮೃತ್ಯು

ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ ತನ್ನ ತಾಯಿಯ ಮೃತದೇಹದ ಮುಂದೆ ಅನ್ನ ನೀರು ಇಲ್ಲದೆ ಇದ್ದ ವಿಶೇಷಚೇತನ ಮಗಳು ಕೂಡ…

9 mins ago

ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡ ಜೀವಕ್ಕೆ ಗಂಡಾಂತರ

ಇಂದಿನ ದಿನಗಳಲ್ಲಿ ರಕ್ತದೊತ್ತಡದ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಹೀಗೆ ರಕ್ತದೊತ್ತಡ ಸಮಸ್ಯೆ ಕಾಡುವುದಕ್ಕೆ ಕಾರಣಗಳು ಹಲವು. ಅದರಲ್ಲಿಯೂ ಮುಖ್ಯವಾಗಿ ನಮ್ಮ ಜೀವನ…

14 mins ago

ಬೆಂಗಳೂರಿನಲ್ಲಿ ತಿಂಗಳಿಗೆ ಸರಾಸರಿ 4.3 ಕೋಟಿ ಯೂನಿಟ್‌ ಹೆಚ್ಚಳ ವಿದ್ಯುತ್ ಬಳಕೆ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಗೃಹ ಬಳಕೆಗೆ ತಿಂಗಳಿಗೆ ಸರಾಸರಿ 4.3 ಕೋಟಿ ಯೂನಿಟ್‌ ಹೆಚ್ಚುವರಿಯಾಗಿ ಬಳಕೆಯಾಗಿದೆ.

16 mins ago

ಮೊಬೈಲ್‌ಗಾಗಿ ತಮ್ಮನನ್ನೆ ಕೊಂದ ಪಾಪಿ ಅಣ್ಣ

ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದ್ದ 15 ವರ್ಷದ ಬಾಲಕನ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಬಾಲಕ…

27 mins ago

ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಲಿವುಡ್​ನಿಂದ ಹೊರಬರುತ್ತೇನೆ: ಕಂಗನಾ ರಣಾವತ್

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯದ ಮೊದಲ ಇನ್ನಿಂಗ್ಸ್​ ಆರಂಭಿಸಿದ ಕಂಗನಾ ರಣಾವತ್ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ…

28 mins ago