News Karnataka Kannada
Monday, April 29 2024
ಕರ್ನಾಟಕ

ವರ್ಷ ಕಳೆದರೂ ಇನ್ನೂ ಸಿಸಿಬಿಗೆ ತಲುಪದ ಎಫ್‌ಎಸ್‌ಎಲ್‌ ವರದಿ

Ccb Office 21072021
Photo Credit :

ಬೆಂಗಳೂರು: ಕಳೆದ ವರ್ಷ ಸ್ಯಾಂಡಲ್‌ ವುಡ್‌ ನಲ್ಲಿ ಸದ್ದು ಮಾಡಿದ್ದ ಡ್ರಗ್ಸ್​ ಕೇಸ್​ಗೆ ಸಂಬಂಧಿಸಿದಂತೆ ಇನ್ನು ಪ್ರಕರಣದ ಪ್ರಮುಖ ಸಾಕ್ಷಿ ಪೊಲೀಸರ ಕೈಗೆ ಸಿಕ್ಕಿಲ್ಲ. ಆರೋಪಿಗಳ ದೇಹದಲ್ಲಿನ ಮಾದಕ ವಸ್ತು ಪತ್ತೆಯ ವರದಿ FSL (ವಿಧಿ ವಿಜ್ಞಾನ ಪ್ರಯೋಗಾಲಯ) ನಿಂದ ಇನ್ನು ಬಂದಿಲ್ಲವಾದರಿಂದ ಈ ಕುರಿತು ಹೈದ್ರಾಬಾದ್ FSL ಗೆ ಸಿಸಿಬಿ ರಿಮೆಂಬರ್ ಪತ್ರ ಬರೆದಿದೆ ಎಂದು ಮಾಹಿತಿ ಲಭ್ಯವಾಗಿದೆ.
ಆರೋಪಿಗಳು ಡ್ರಗ್ ಸೇವನೆ ಮಾಡಿದ್ದರೆ? ಎನ್ನುವುದಕ್ಕೆ ಈ ವರದಿ ಪ್ರಮುಖ ಸಾಕ್ಷಿಯಾಗಿದ್ದು, ಆದರೆ ಪ್ರಕರಣ ನಡೆದು ವರ್ಷವಾಗುತ್ತಿದ್ದರೂ ಮಾತ್ರ ಆರೋಪಿಗಳ ಡ್ರಗ್​ ಟ್ರಾಯಲ್ ವರದಿ ಮಾತ್ರ ಇನ್ನು ಸಿಸಿಬಿ ಕೈ ಸೇರಿಲ್ಲ.
ನಿನ್ನೆ ಸಿಸಿಬಿ FSLಗೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲು ವರದಿ ಅಗತ್ಯವೆಂದು ತಿಳಿಸಿದ್ದು, ವರದಿ ಯಾವಾಗ ಸಿಗುತ್ತೆ ಅಂತಾ ತಿಳಿಸಲು ಕೋರಿ ಪತ್ರ ಬರೆದಿದ್ದು, ಅದಷ್ಟೂ ಬೇಗ ರಿಪೋರ್ಟ್ ನೀಡುವಂತೆ ತನಿಖಾಧಿಕಾರಿ ‌ಮನವಿ ಮಾಡಿದ್ದಾರೆ ಎನ್ನಲಾಗಿದೆ. 2020 ಡಿಸೆಂಬರ್ ನಲ್ಲಿ‌ ಪ್ರಕರಣದ ಆರೋಪಿಗಳಾದ ರಾಗಿಣಿ ದ್ವಿವೇದಿ, ಸಂಜನಾ ಸೇರಿ 10 ಜನರ ಕೂದಲು, ಯೂರಿನ್, ಬ್ಲಡ್ ಸ್ಯಾಂಪಲ್​ನ್ನು, ಲ್ಯಾಬ್ ಟೆಸ್ಟ್​ಗಾಗಿ ಹೈದರಾಬಾದ್​ನಲ್ಲಿರುವ FSL ಗೆ ಕಳುಹಿಸಲಾಗಿತ್ತು.ಅದರಲ್ಲಿ ಕೊಂಚ ವ್ಯತ್ಯಾಸ ಅಂತಾ ಪುನಃ ಸಂಗ್ರಹಿಸಿ ಕಳುಹಿಸಲಾಗಿತ್ತು. ಆದರೆ ಆರೋಪಿಗಳು ಬೇಲ್ ಮೇಲೆ ಹೊರ ಬಂದು 3 ತಿಂಗಳಾದ್ರೂ ಸಿಸಿಬಿಗೆ ಮಾತ್ರ FSL ರಿಪೋರ್ಟ್ ತಲುಪಿಲ್ಲ. ಕೇಸ್​ನಲ್ಲಿ ಆರೋಪಿಗಳ ಡ್ರಗ್ಸ್ ಸೇವನೆ ಬಗ್ಗೆ ಖಚಿತ ಪಡಿಸಿಕೊಳ್ಳಲು ಈ ವರದಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು