ರಾಜ್ಯದಲ್ಲಿಂದು 255 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,92,276ಕ್ಕೆ ಏರಿಕೆ ಆಗಿದೆ. ಇತ್ತ 667 ಮಂದಿ ಡಿಸ್ಚಾರ್ಜ್ ಆಗಿದ್ದು, 29,46,601 ಮಂದಿ ಗುಣಮುಖರಾಗಿದ್ದಾರೆ.ಇಂದು 7 ಸೋಂಕಿತರು ಮೃತಪಟ್ಟಿದ್ದಾರೆ.
ಸಾವಿನ ಸಂಖ್ಯೆ 38,153ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 7,493 ರಷ್ಟಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.38 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.2.74ರಷ್ಟಿದೆ.