ಮೈಸೂರು: ಉಡಾನ್ ಯೋಜನೆಯಡಿ ಇಂದಿನಿಂದ ಮೈಸೂರು–ಚೆನ್ನೈ ನಡುವೆ ವಿಮಾನ ಹಾರಾಟ ಆರಂಭವಾಗಲಿದೆ.ವಾರದಲ್ಲಿ 3 ದಿನ ಅಂದರೆ ಸೋಮವಾರ, ಬುಧವಾರ, ಮತ್ತು ಶುಕ್ರವಾರದಂದು ಇಂಡಿಗೋ ವಿಮಾನ ಹಾರಾಟ ಮಾಡಲಿದೆ. ಸಂಜೆ 4.35 ರಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಚೆನ್ನೈಗೆ ಪ್ರಯಾಣ ಬೆಳೆಸಲಿದೆ. ನಂತರ ಮುಂದಿನ ದಿನ ಮಧ್ಯಾಹ್ನ 2.50ಕ್ಕೆ ಚೆನೈ ನಿಲ್ದಾಣದಿಂದ ಹೊರಡುವ ವಿಮಾನ ಸಂಜೆ 4.15ಕ್ಕೆ ಮೈಸೂರು ತಲುಪಲಿದೆ.