ನವದೆಹಲಿ, ; ಭವಿಷ್ಯ ನಿಧಿ (ಇಪಿಎಫ್) ಖಾತೆದಾರರು ತಮ್ಮ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವ ಗಡುವನ್ನು ಸೆಪ್ಟೆಂಬರ್ 1ರ ವರೆಗೆ ವಿಸ್ತರಿಸಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಚಂದಾದಾರರು ತಮ್ಮ ಆಧಾರ್ ಕಾರ್ಡ್ಅನ್ನು ಸೆಪ್ಟೆಂಬರ್ 1ರ ಮೊದಲು ಭವಿಷ್ಯ ನಿಧಿಯೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಈ ಮೊದಲು ಜೂನ್ 1ರ ಗಡುವು ನೀಡಲಾಗಿತ್ತು. ಅದನ್ನು ಸೆಪ್ಟೆಂಬರ್ 1ರ ವರೆಗೆ ವಿಸ್ತರಿಸಲಾಗಿದೆ. ಉದ್ಯೋಗದಾತರಿಂದ ಪಿಎಫ್ ಕೊಡುಗೆಗಳು ಮತ್ತು ಇತರ ಪ್ರಯೋಜನಗಳನ್ನು ಪಡೆಯುವ ಸಲುವಾಗಿ ಚಂದಾರರು ಆಧಾರ್ ಕಾರ್ಡ್ಅನ್ನು ಪಿಎಫ್ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್)ಯೊಂದಿಗೆ ಲಿಂಕ್ ಮಾಡುವುದನ್ನು ಇಪಿಎಫ್ ಸಂಸ್ಥೆ ಈಗ ಕಡ್ಡಾಯಗೊಳಿಸಿದೆ. ತಮ್ಮ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಪಿಎಫ್ ಖಾತೆಗಳೊಂದಿಗೆ ಲಿಂಕ್ ಮಾಡದ ಚಂದಾದಾರರು ಕೋವಿಡ್-19 ಮುಂಗಡಗಳು ಮತ್ತು ವಿಮಾ ಪ್ರಯೋಜನಗಳನ್ನು ಒಳಗೊಂಡ ಯಾವುದೇ ಮಾಹಿತಿ ಪಡೆಯಲು ಸಾಧ್ಯವಾಗುವುದಿಲ್ಲ.
ಭವಿಷ್ಯ ನಿಧಿ ಖಾತೆದಾರರು ಆಧಾರ್ ಲಿಂಕ್ ಮಾಡುವ ಗಡುವು ಸೆಪ್ಟೆಂಬರ್ 1ರವರೆಗೆ ವಿಸ್ತರಣೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.