ಚಿಕ್ಕಮಗಳೂರು: ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಹುಬ್ಬಳ್ಳಿಯ ಈದ್ಗಾ ಮೈದಾನದ ಸಮಸ್ಯೆಯನ್ನು ಎಚ್ ಡಿ ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಸೌಹಾರ್ದಯುತವಾಗಿ ಬಗೆಹರಿಸಿದ್ದರು.
ಅದೇ ರೀತಿ ಅವರ ಪುತ್ರ ಸಿಎಂ ಕುಮಾರಸ್ವಾಮಿ ಅವರು ದತ್ತಪೀಠ ವಿವಾದವನ್ನು ಬಗೆ ಹರಿಸಲು ಕ್ರಮವಹಿಸಬೇಕು ಎಂದು ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇಲ್ಲಿ ಒತ್ತಾಯಿಸಿದರು.
ಶ್ರೀರಾಮಸೇನೆ ವತಿಯಿಂದ ನಡೆಸುವ ದತ್ತಮಾಲಾ ಅಭಿಯಾನದ ಶೋಭಾಯಾತ್ರೆ ಆರಂಭವಾಗಿದ್ದು, ಇದರಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಊರುಗಳಿಂದ ದತ್ತ ಭಕ್ತರು ಆಗಮಿಸುತ್ತಿದ್ದಾರೆ. ಭದ್ರತೆಗಾಗಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.