ತುಮಕೂರು: ಮದ್ಯ ವ್ಯಸನಿ ತಂದೆಯೊಬ್ಬ ತನ್ನೆರಡು ಹೆಣ್ಣು ಮಕ್ಕಳಿಗೆ ವಿಷವುಣಿಸಿ ಕೊಲೆ ನಡೆಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ನಡೆದಿದೆ.
ಕೊಲೆಯಾದ ಮಕ್ಕಳನ್ನು ರೋಹಿತಾ(4) ಪರ್ವಿತಾ(2) ಎಂದು ಗುರುತಿಸಲಾಗಿದೆ. ಸಂಜು ಅಲಿಯಾಸ್ ಕುಮ್ಮೆಟ್ಟಿ ಮಕ್ಕಳನ್ನು ಕೊಲೆಗೈದ ಆರೋಪಿ.
ಮಿರಿಯಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿ ನಾಪತ್ತೆಯಾಗಿದ್ದು, ತನಿಖೆ ನಡೆಸುತ್ತಿದ್ದಾರೆ.