News Karnataka Kannada
Saturday, May 11 2024
ಕರ್ನಾಟಕ

ಟ್ಯಾಂಕರ್ ಗೆ ಕಾರು ಡಿಕ್ಕಿ: ಓರ್ವ ಮೃತ್ಯು, ಮತ್ತೋರ್ವ ಗಂಭೀರ

Photo Credit :

ಟ್ಯಾಂಕರ್ ಗೆ ಕಾರು ಡಿಕ್ಕಿ: ಓರ್ವ ಮೃತ್ಯು, ಮತ್ತೋರ್ವ ಗಂಭೀರ

ಕಾಸರಗೋಡು: ನಿಲುಗಡೆಗೊಳಿಸಿದ್ದ ಟ್ಯಾಂಕರ್ ನ ಹಿಂಭಾಗಕ್ಕೆ  ಕಾರು ಡಿಕ್ಕಿ ಹೊಡೆದು ಬಂದ್ಯೋಡು ನಿವಾಸಿಯೋರ್ವರು ಮೃತಪಟ್ಟು, ಇನ್ನೋರ್ವ ಗಂಭೀರ  ಗಾಯಗೊಂಡ ಘಟನೆ  ಮಲಪ್ಪುರಂ ನ  ಕೊಯಿಲಾಂಡಿ  ಎಂಬಲ್ಲಿ  ಇಂದು ಮುಂಜಾನೆ ನಡೆದಿದೆ.

ಮೃತಪಟ್ಟವರನ್ನು ಬಂದ್ಯೋಡಿನ ಫಾಸಿಲ್(26) ಎಂದು ಗುರುತಿಸಲಾಗಿದೆ. ಜೊತೆಗಿದ್ದ ಈತನ ಸ್ನೇಹಿತ ಉಳ್ಳಾಲದ  ಝುಲ್ಫಾನ್  ಮಲಿಕ್ (29)  ಗಾಯಗೊಂಡಿದ್ದು, ಕೋಜಿಕ್ಕೋಡ್ ನ  ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಲುಗಡೆಗೊಳಿಸಿದ್ದ ಟ್ಯಾಂಕರ್ ನ ಹಿಂಭಾಗಕ್ಕೆ  ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ.  ಶನಿವಾರ ರಾತ್ರಿ  ಕಾರು  ಖರೀದಿಸಲು ಫಾಸಿಲ್ ಸೇರಿದಂತೆ ಒಂದು ಕಾರಿನಲ್ಲಿ ಐವರು ಕೊಯಿಲಾಂಡಿಗೆ ತೆರಳಿದ್ದರು. ಕಾರು  ಖರೀದಿಸಿ ಮರಳುತ್ತಿದ್ದಾಗ ಮುಂಜಾನೆ 1.30ರ ಸುಮಾರಿಗೆ ಈ ಅಪಘಾತ ನಡೆದಿದೆ. ಫಾಸಿಲ್ ಮತ್ತು ಮಲಿಕ್   ಒಂದು ಕಾರಿನಲ್ಲಿ ಹಾಗೂ ಇನ್ನೊಂದು ಕಾರಿನಲ್ಲಿ ಇತರ ಮೂವರು ಸ್ನೇಹಿತರು ಊರಿಗೆ ಮರಳುತ್ತಿದ್ದರು. ಖರೀದಿಸಲಾಗಿದ್ದ ಕಾರನ್ನು ಫಾಸಿಲ್ ಚಲಾಯಿಸುತ್ತಿದ್ದರು. ಅಪಘಾತದ ಸುದ್ದಿ ತಿಳಿದು ಸಂಬಂಧಿಕರು ಕೊಯಿಲಾಂಡಿಗೆ ತೆರಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು