Categories: ಕರ್ನಾಟಕ

ಜಮೀನು ಮಂಜೂರಾತಿಗೆ ತಾಲೂಕು ಕಚೇರಿ ಮುಂದೆ 110 ಪ್ರಾಯದ ವಯೋವೃದ್ಧೆ ಅಳಲು

ಮೂಡಿಗೆರೆ: ತಾನು ಕಳೆದ 40 ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದಿರುವ 4 ಎಕರೆ ಕಾಫಿ ಹಾಗೂ ಅಡಿಕೆ ತೋಟದ ಜಮೀನನ್ನು ತನ್ನ ಹೆಸರಿಗೆ ಮಂಜೂರು ಮಾಡಿಕೊಡಲು ಸತಾಯಿಸಲಾಗುತ್ತಿದೆ ಎಂದು ಕೋಳೂರು ಗ್ರಾಮದ ಬಡವನದಿಣ್ಣೆಯ ನಿವಾಸಿ 110 ವರ್ಷ ಪ್ರಾಯದ ಸುಬ್ಬಮ್ಮ ಎಂಬ ಅಜ್ಜಿಯೊಬ್ಬರು ತಹಸೀಲ್ದಾರ್ ಕಚೇರಿ ಬಾಗಿಲಿನಲ್ಲಿ ಕುಳಿತು ಆರೋಪ ಮಾಡಿದ್ದಾರೆ.

ಕೋಳೂರು ಗ್ರಾಮದ ಸರ್ವೆ ನಂ.173ರಲ್ಲಿ ತಾನು 40 ವರ್ಷದಿಂದ ಕಾಫಿ, ಅಡಿಕೆ ಬೆಳೆದುಕೊಂಡಿದ್ದೇನೆ. 1989ರಲ್ಲಿ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿ ಭೂಮಿ ಮಂಜೂರು ಮಾಡಿಕೊಡುವಂತೆ ಕೇಳಿಕೊಂಡಿದ್ದೆ. ಅರ್ಜಿ ಇದೂವರೆಗೂ ಇತ್ಯರ್ಥವಾಗಿಲ್ಲ. ಇತ್ತೀಚೆಗೆ ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ. ಸರ್ವೇ ಕೂಡ ನಡೆದಿದೆ. ಆದರೆ ಮಂಜೂರಾತಿಗಾಗಿ ಕಾಯುತ್ತಿದ್ದರೂ ಇನ್ನೂ ಮಾಡಿಕೊಟ್ಟಿಲ್ಲ. ಇಂದು ಫಾ.ನಂ 53 ಸಭೆ ಇದೆ. ಶಾಸಕರು ಬರುತ್ತಾರೆ ಎಂದು ವಿಷಯ ತಿಳಿಯಿತು. ಹಾಗಾಗಿ ತಾನು ಬಂದು ಶಾಸಕರಿಗಾಗಿ ಕಾಯುತ್ತಿರುವುದಾಗಿ ತಮ್ಮ ಅಳಲು ತೋಡಿಕೊಂಡರು.

ತನಗೆ 3 ಗಂಡು, 1 ಹೆಣ್ಣು ಮಕ್ಕಳಿದ್ದಾರೆ. ತನ್ನ ಗಂಡ ದಿವಂಗತ ಸುಬ್ಬೇಗೌಡರು ಮಾಡಿಟ್ಟಿದ್ದ ಜಮೀನನ್ನು ನನ್ನ ಮಕ್ಕಳಿಗೆ ಹಂಚಿಕೆ ಮಾಡಿದ್ದಾರೆ. ಅವರೆಲ್ಲರೂ ಬೇರೆ ಬೇರೆಯಾಗಿ ವಾಸವಾಗಿದ್ದಾರೆ. ತಾನು ಮಗ ಲಕ್ಷ್ಮಣ್ ಗೌಡ ಎಂಬುವರೊಂದಿಗೆ ವಾಸವಿದ್ದೇನೆ. ಹಾಗಾಗಿ ನಾನು ನೆಟ್ಟು ಬೆಳೆಸಿದ ಕಾಫಿ, ಅಡಿಕೆ ಬೆಳೆಯಿರುವ 4 ಎಕರೆ ಜಮೀನಿನ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದೇನೆ. ಅದನ್ನು ತನ್ನ ಹೆಸರಿಗೆ ಮಾಡಿಕೊಡಿ ಎಂದು ಗೋಗರೆಯುತ್ತಿದ್ದದ್ದು ನೋಡಿ, ಅಲ್ಲಿದ್ದ ಸಾರ್ವಜನಿಕರು ಮರುಕಪಡುತ್ತಿದ್ದರು.

ನಂತರ ಸಂಜೆ 5.30ರ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಬಿ.ಬಿ.ನಿಂಗಯ್ಯ ಒತ್ತುವರಿ ಅರ್ಜಿ ವಿಲೆ ಸಭೆಗೂ ಮುನ್ನ ಅಜ್ಜಿಯೊಂದಿಗೆ ಮಾತನಾಡಿ, ಆ ಜಮೀನನ್ನು ನಿಮ್ಮ ಹೆಸರಿಗೆ ಮಂಜೂರು ಮಾಡಿಕೊಡುವುಗಾಗಿ ತಿಳಿಸಿ. ನೀವು ಮನೆಗೆ ಹೋಗಿ ವಿಶ್ರಾಂತಿ ಪಡೆಯಿರಿ ಎಂದು ಅಜ್ಜಿಯನ್ನು ಸಮಾಧಾನಪಡಿಸಿ ಕಳುಹಿಸಿದರು. ಚುನಾವಣೆ ಘೋಷಣೆಯಾಗುವ ಮುನ್ನವೇ ಅಜ್ಜಿಯ ಜಮೀನನ್ನು ಮಂಜೂರಾತಿ ಮಾಡಿಕೊಡುವುದಾಗಿ ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದರು.

Desk

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

1 hour ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

1 hour ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

2 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

2 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

3 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

3 hours ago